ಚಳಿಗಾಲದ ಆಗುಂಬೆಯ ಸೊಬಗೇ ಬೇರೆ !
Team Udayavani, Jan 30, 2020, 5:34 AM IST
ಆಗುಂಬೆಯಾ ಪ್ರೇಮ ಸಂಜೆಯಾ ಎಂದು ಮೇರು ನಟ ಡಾ| ರಾಜಕುಮಾರ್ ಮತ್ತು ನಟಿ ಮಾಧವಿಯ ಹಾಡಿನ ದೃಶ್ಯ ನೋಡಿರಬಹುದು. ಸೂರ್ಯಾಸ್ತಮಾನಕ್ಕೆ ಹೇಳಿ ಮಾಡಿಸಿದ ಆಗುಂಬೆಗೆ ಎರಡು ರೂಪಗಳಿವೆ. ಸಾಮಾನ್ಯವಾಗಿ ನಾವು ಮಳೆ ಸುರಿಯುವಾಗ ಆಗುಂಬೆಯನ್ನು ನೆನಪು ಮಾಡಿಕೊಳ್ಳುತ್ತೇವೆ.
ಆದರೆ ಅದರ ಚಳಿಗಾಲದ ವಿಶ್ವರೂಪವನ್ನು ನೋಡಿದವರೇ ಕಡಿಮೆ. ಚಳಿಗಾಲದಲ್ಲಿ ಮಂಜು ಆವರಿಸಿಕೊಂಡ ಆಗುಂಬೆಯನ್ನು ನೋಡಲಿಕ್ಕೆ ಇನ್ನೂ ಚೆಂದ. ಅಲ್ಲಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಕುಂದಾದ್ರಿ ಸೂರ್ಯೋದಯಕ್ಕೆ ಪ್ರಸಿದ್ಧ. ಈ ಚುಮು ಚುಮು ಚಳಿಯಲಿ ಸಾಗಿದರೆ, ನಿಮ್ಮನ್ನೇ ಆವರಿಸಿಕೊಳ್ಳುತ್ತದೆ ಬೆಳಗಿನ ಮೋಡ ಮತ್ತು ಮಂಜು.
ಆಂಗುಬೆ ಘಾಟಿ ಹತ್ತುವುದೇ ಒಂದು ರೋಚಕ ಅನುಭವ ನೀಡುವಂಥದ್ದು. ಮೇಲೆ, ಕೆಳಗೆ ಎನ್ನುತ್ತಾ ಹಾವು ಏಣಿ ಆಟವಾಡುವಂತೆ ವಾಹನಗಳು ಚಲಿಸುವ ಕ್ರಮವೇ ಸಾಹಸ ವೆನಿಸುತ್ತದೆ. ಸೋಮೇಶ್ವರದಿಂದ ಮೇಲಕ್ಕೇರಿ ಬಂದರೆ ಸೂರ್ಯಾಸ್ತ, ದೋಣಿ ವಿಹಾರ ಕೇಂದ್ರವೂ ಎಲ್ಲವೂ ಲಭ್ಯ.
ಹಲವು ತಾಣಗಳು
ಇದರ ಸುತ್ತಮುತ್ತಲೂ ಹಲವಾರು ಚೆಂದದ ತಾಣಗಳಿವೆ. ಆಗುಂಬೆ ಸರ್ಕಲ್‌ನಿಂದ ಕೊಪ್ಪ- ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ತುಸು ತಿರುಗಿ ಹೋದರೆ ಜೋಗಿಗುಂಡಿ ಸೊಬಗು ಕಾಣಬಹುದು. ಇಲ್ಲಿ ಸರ್ಕಸ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ! ಹರಿಯುವ ನೀರಿನ ಝರಿಯ ಧಾರೆಯ ಖುಷಿಯೇ ಬೇರೆ.
ಇನ್ನೊಂದು ಸೊಬಗಿನ ತಾಣ ಒನಕೆ ಅಬ್ಬಿ!
ಇದೊಂದು ಆಕರ್ಷಕ ಜಲಪಾತ! ಈ ಅಬ್ಬಿ ನೋಡಲು ಸೂರ್ಯಾಸ್ತದ ಗೇಟ್ ಸಮೀಪದಿಂದ ಕಾಡುದಾರಿಯಲ್ಲಿ ಸಾಗಬೇಕು. ಮಳೆಗಾಲದಲ್ಲಿ ಈ ಜಲಪಾತ ಧುಮ್ಮಿಕ್ಕುತ್ತದೆ. ಜಿಗಣೆ ಕಾಟವೂ ಇರುತ್ತದೆ. ಸೂಕ್ತ ಮಾರ್ಗದರ್ಶಕರನ್ನು ಹೊಂದು ವುದು ಅವಶ್ಯ. ಇದರೊಂದಿಗೆ ದೊಡ್ಡಗುಡ್ಡವನ್ನೂ ನೋಡಬಹುದು. ಈಗ ದಟ್ಟ ಮಂಜು ಇರುವ ಕಾರಣ ಬೆಳಗ್ಗೆ ಮತ್ತು ಸಂಜೆ ವಾಹನ ಚಲಾಯಿಸುವಾಗ ಎಚ್ಚರ ಅಗತ್ಯ.
ದೋಣಿ ವಿಹಾರ ಕೇಂದ್ರ
ಆಗುಂಬೆ ಸೂರ್ಯಾಸ್ತ ವೀಕ್ಷಣೆ ಪ್ರದೇಶದ ಪಕ್ಕದಲ್ಲೇ ಇರುವ ಕೆರೆಯಲ್ಲಿನ ದೋಣಿ ವಿಹಾರ ಮತ್ತಷ್ಟು ಆಕರ್ಷಕ. ಈ ಸ್ಥಳಕ್ಕೆ ಮಳೆಕಾಡು ವಿಶ್ರಾಂತಿಧಾಮ ಎಂದು ಕರೆಯುತ್ತಾರೆ. ಮಳೆಕಾಡು ವಿಶ್ರಾಂತಿಧಾಮದ ಪ್ರವೇಶ ಶುಲ್ಕ 2 ರೂ. ಕೆರೆಯಲ್ಲಿ ಪೆಡಲ್ ಬೋಟ್‌ಗಳನ್ನು ಇಡಲಾಗಿದ್ದು ಇದರಲ್ಲಿ ವಿಹರಿಸಲು ಒಬ್ಬರಿಗೆ 40 ರೂ. ಪಾವತಿಸ ಬೇಕು. ಆಗುಂಬೆಯ ಗ್ರಾಮ ಅರಣ್ಯ ಸಮಿತಿ ವಿಶ್ರಾಂತಿಧಾಮದ ಹೊಣೆ ಹೊತ್ತಿದೆ.
-ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.