ಕೊನೆಗೂ ಬಂತು ಮಲ್ಪೆ ಮೀನುಗಾರಿಕೆ ಬಂದರಿಗೆ ಬೆಳಕಿನ ಭಾಗ್ಯ
ನಾಲ್ಕು ವರ್ಷಗಳ ಅನಂತರ ಬೆಳಗಿದ ದಾರಿದೀಪ
Team Udayavani, Jan 30, 2020, 5:49 AM IST
ಮಲ್ಪೆ: ಮಲ್ಪೆ ಮೂರನೇ ಹಂತದ ಯೋಜನೆಯ ಸ್ಥಳದಲ್ಲಿ ಕಳೆದ 4 ವರ್ಷಗಳಿಂದ ಉರಿಯದ ದಾರಿದೀಪಗಳಿಗೆ ಕೊನೆಗೂ ಮುಕ್ತಿ ದೊರಕಿದ್ದು, ಸೋಮವಾರದಿಂದ ದೀಪಗಳು ಬೆಳಗಲಾರಂಭಿಸಿದ್ದು, ಬಂದರಿಗೆ ಬೆಳಕಿನ ಭಾಗ್ಯ ಸಿಕ್ಕಂತಾಗಿದೆ.
ಮಲ್ಪೆ ಮೀನುಗಾರಿಕೆ ಮೂರನೇ ಹಂತದ ಬಂದರಿನ ಬಾಪುತೋಟದ ಭಾಗದ ಬಂದರಿನ ರಸ್ತೆ ಬದಿಯಲ್ಲಿ ದಾರಿದೀಪವನ್ನು ಅಳವಡಿಸಿ ವರ್ಷ ನಾಲ್ಕು ಕಳೆದಿತ್ತು. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ವಿದ್ಯುತ್ ಸಂಪರ್ಕವನ್ನು ನೀಡಲು ಅಸಾಧ್ಯವಾದ ಪರಿಣಾಮ ರಾತ್ರಿ ಹಾಗೂ ನಸುಕಿನ ವೇಳೆ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲು ಮೀನುಗಾರರು ತೊಂದರೆಯನ್ನು ಅನುಭವಿಸುವಂತಾಗಿತ್ತು. ರಾತ್ರಿ ವೇಳೆ ಮೀನುಗಾರಿಕೆ ಬೋಟನ್ನು ದಕ್ಕೆಯಲ್ಲಿ ಲಂಗರು ಹಾಕಲು ಅಥವಾ ತೆರವುಗೊಳಿಸಲು ಮೀನುಗಾರರಿಗೆ ತೊಂದರೆ ಯಾಗುತ್ತಿದ್ದವು, ಪ್ರಾಣಾಪಾಯಕ್ಕೂ ಅಹ್ವಾನ ನೀಡಿದಂತಾಗಿತ್ತು.
ಕಾಮಗಾರಿ ಮುಗಿದ್ದರೂ ಕೆಲವೊಂದು ವಿಭಾಗಗಳು ಇಲಾಖೆಗೆ ಹಸ್ತಾಂತರವಾಗದ ಕಾರಣ ನಿರ್ವಾಹಣೆ ಕಷ್ಟಸಾದ್ಯವಾಗಿತ್ತು. ಸಾರ್ವಜನಿಕ ಹಿತದೃಷ್ಟಿಯಿಂದ ಮೊದಲು ಎಲೆಕ್ಟ್ರಿಕಲ್ ವಿಭಾಗ ಕೆಲದಿನಗಳಷ್ಟೆ ಮೀನುಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಸುಮಾರು 68ಸಾವಿರ ರೂಪಾಯಿ ಬಾಕಿಯಿರುವ ವಿದ್ಯುತ್ ಬಿಲ್‌ನ್ನು ಇಲಾಖೆಯ ಮುಖೇನ ಪಾವತಿ ಮಾಡಿದ್ದು, ಉಳಿದ ಕಾಮಗಾರಿಗಳು ಇನ್ನಷೇr ಹಸ್ತಾಂತರಗೊಳ್ಳಬೇಕಾಗಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಶ್ಲಾಘನೆ:
ಸಮಸ್ಯೆ ಬಗ್ಗೆ ಉದಯವಾಣಿ ಜ. 26ರ ಸುದಿನ ಸಂಚಿಕೆಯಲ್ಲಿ ಬೀದಿದೀಪಗಳಿಗೆ ಉದ್ಘಾಟನೆ ಭಾಗವಿಲ್ಲ ಎಂಬ ಶೀರ್ಷಿಕೆಯಡಿ ಸಚಿತ್ರ ವರದಿಯನ್ನು ಪ್ರಕಟಮಾಡಿತ್ತು. ಪ್ರಕಟಗೊಂಡ ಮರುದಿನ ರಾತ್ರಿಯೇ ದೀಪ ಉರಿಯಲಾರಂಭಿಸಿದ್ದು ಉದಯವಾಣಿ ಮತ್ತು ಮೀನುಗಾರಿಕೆ ಇಲಾಖೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.