ಮೂಡುಗಿಳಿಯಾರಿನಲ್ಲಿ 35 ಅಡಿ ವಿವೇಕಾನಂದ ಪ್ರತಿಮೆ
Team Udayavani, Jan 30, 2020, 7:55 AM IST
ಕೋಟ: ಕೋಟದ ಮೂಡುಗಿಳಿಯಾರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಲಿಗ್ರಾಮ ಡಿವೈನ್ ಪಾರ್ಕ್‌ನ ಅಂಗ ಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧ ಪ್ರತಿಷ್ಠಾನದ ಯೋಗಬನದಲ್ಲಿ ಜಗತ್ತಿನ ಅತೀ ಎತ್ತರದ ಸ್ವಾಮಿ ವಿವೇಕಾನಂದರ ಕಾಂಕ್ರೀಟ್ ಪ್ರತಿಮೆ ಸ್ಥಾಪನೆಗೊಂಡಿದ್ದು, ಗಿನ್ನೆಸ್ ದಾಖಲೆಯ ಪುಟ ಸೇರಲು ತಯಾರಾಗಿದೆ. ಪ್ರತಿಮೆ ಅನಾವರಣ ಫೆ. 1ರಂದು ನಡೆಯಲಿದೆ.
ರಾಂಚಿಯಲ್ಲಿರುವ ಸ್ವಾಮಿ ವಿವೇಕಾನಂದರ 32 ಅಡಿ ಎತ್ತರದ ಪ್ರತಿಮೆ ಇದುವರೆಗೆ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯಾಗಿ ಗುರುತಿಸಿಕೊಂಡಿತ್ತು. ಸಾಲಿಗ್ರಾಮ ಡಿವೈನ್ ಪಾರ್ಕ್ ಮತ್ತು ಮಲೇಶ್ಯದಲ್ಲಿರುವ ಪ್ರತಿಮೆ ಎರಡು ಮತ್ತು ಮೂರನೇ ಸ್ಥಾನದಲ್ಲಿತ್ತು.
ಕನ್ಯಾಕುಮಾರಿ ಶೈಲಿ
ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಪ್ರತಿಮೆಯಂತೆ ಈ ಶಿಲ್ಪವನ್ನು ರಚಿಸಲಾಗಿದೆ. ಮುಡೇìಶ್ವರದಲ್ಲಿನ ಅತೀ ಎತ್ತರದ ಶಿವನ ಪ್ರತಿಮೆ ಮತ್ತು ಗದಗದ ಅತೀ ಎತ್ತರದ ಬಸವನ ಪ್ರತಿಮೆಗಳನ್ನು ನಿರ್ಮಿಸಿದ ಬೆಂಗಳೂರಿನ ಶ್ರೀಧರ ಮೂರ್ತಿ ಅವರ ತಂಡ ಈ ಪ್ರತಿಮೆಯನ್ನು ರಚಿಸಿದೆ. ಮಳೆ, ಗಾಳಿ ಮುಂತಾದವುಗಳಿಂದ ರಕ್ಷಣೆ ನೀಡುವ ಸಲುವಾಗಿ ಮೂರ್ತಿಗೆ ಲೋಹದ ಲೇಪನವನ್ನು ಮಾಡಲಾಗಿದೆ. 40 ಮಂದಿ ಶಿಲ್ಪಿಗಳು ಆರು ತಿಂಗಳು ಕೆಲಸ ನಿರ್ವಹಿಸಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಧನಾತ್ಮಕತೆಗಾಗಿ
ಸ್ವಾಮಿ ವಿವೇಕಾನಂದ ತಣ್ತೀ, ಜೀವನ, ಸಂದೇಶವನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ಡಿವೈನ್‌ಪಾರ್ಕ್ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೆ. ಹೀಗಾಗಿ ಸಂಸ್ಥೆಯ ಭಾಗವಾಗಿ ನಿರ್ಮಾಣಗೊಳ್ಳುತ್ತಿರುವ ಯೋಗಬನದಲ್ಲೂ ಜನರಿಗೆ ವಿವೇಕಾನಂದರ ಧನಾತ್ಮಕ ಚಿಂತನೆ, ಪ್ರಭಾವಗಳು ಬೀರಬೇಕು ಹಾಗೂ ಅವರು ಸಮಾಜಮುಖೀಯಾಗಿ ಜೀವನ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ಕಟ್ಟಡದ ಶಕ್ತಿ ಪೀಠ, ಪ್ರಾಣಪೀಠದಲ್ಲಿ ಜಗತ್ತಿನ ಅತೀ ಎತ್ತರದ ವಿವೇಕಾನಂದ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ.
– ಡಾ| ವಿವೇಕ ಉಡುಪ, ವೈದ್ಯಕೀಯ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.