ಬಗೆಬಗೆ ಚಟ್ನಿಗಳು


Team Udayavani, Jan 31, 2020, 4:03 AM IST

youth-8

ವಿವಿಧ ತರಕಾರಿ, ಹಣ್ಣು, ಸಿಪ್ಪೆ ಇತ್ಯಾದಿಗಳನ್ನು ಬಳಸಿ ವೈವಿಧ್ಯಮಯವಾಗಿ ಚಟ್ನಿಗಳನ್ನು ತಯಾರಿಸುವುದರಿಂದ ನಾಲಿಗೆಯ ರುಚಿ ವೃದ್ಧಿಸುವುದರೊಡನೆ ಆರೋಗ್ಯಕ್ಕೂ ಬಹಳ ಉತ್ತಮ. ಇಲ್ಲಿವೆ ಬಹಳ ಸುಲಭವಾಗಿ ತಯಾರಿಸಬಹುದಾದ ಚಟ್ನಿಗಳು.

ಬಾಳೆಹೂವಿನ ಚಟ್ನಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಬಾಳೆಮೋತೆ- ಒಂದು, ಹುಣಸೆಹಣ್ಣು- ಒಂದು ಚಮಚ, ತೆಂಗಿನತುರಿ- ಒಂದೂವರೆ ಕಪ್‌, ಉದ್ದಿನಬೇಳೆ- ಮೂರು ಚಮಚ, ಇಂಗು- ಒಂದು ಚಮಚ, ಕೆಂಪುಮೆಣಸು- ಐದು, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಹೆಚ್ಚಿಟ್ಟ ಬಾಳೆಮೋತೆಗೆ ನೀರು ಸೇರಿಸಿ ಐದು ನಿಮಿಷ ಇಟ್ಟು ನಂತರ ನೀರು ಬಸಿದು ಪುನಃ ಬೇಕಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಉದ್ದಿನಬೇಳೆ, ಇಂಗು, ಕೆಂಪುಮೆಣಸನ್ನು ಹುರಿದು ಮಿಕ್ಸಿಗೆ ಹಾಕಿ. ನಂತರ ತೆಂಗಿನತುರಿ, ಬೇಯಿಸಿಟ್ಟ ಬಾಳೆಮೋತೆ, ಉಪ್ಪು ಮತ್ತು ಹುಣಸೆಗಳನ್ನು ಸೇರಿಸಿ ರುಬ್ಬಿ. ಮಿಕ್ಸಿಂಗ್‌ಬೌಲ್‌ಗೆ ಹಾಕಿ. ಬೇಕಷ್ಟು ನೀರು ಸೇರಿಸಿ ಹದಮಾಡಿಕೊಂಡು ಬೆಳ್ಳುಳ್ಳಿ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.

ನೆಲ್ಲಿಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- ಎರಡು, ತೆಂಗಿನತುರಿ- ಒಂದು ಕಪ್‌, ಹಸಿಮೆಣಸಿನಕಾಯಿ- ಎರಡು, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬೀಜದಿಂದ ಬೇರ್ಪಡಿಸಿದ ನೆಲ್ಲಿಕಾಯಿಗೆ ತೆಂಗಿನತುರಿ, ಉಪ್ಪು, ಹಸಿಮೆಣಸಿನಕಾಯಿ ಮತ್ತು ಬೇಕಷ್ಟು ನೀರು ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ. ನಂತರ, ಉದ್ದಿನಬೇಳೆ ಮತ್ತು ಇಂಗು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.

ಕೆಸುವಿನ ದಂಟಿನ ಚಟ್ನಿ
ಬೇಕಾಗುವ ಸಾಮಗ್ರಿ: ನಾರು ತೆಗೆದು ಹೆಚ್ಚಿದ ಕೆಸುವಿನದಂಟು- ಒಂದು ಕಪ್‌, ಹುಣಸೆಹಣ್ಣು- ಒಂದು ಚಮಚ, ಬೆಲ್ಲ- ಒಂದು ಚಮಚ, ಧನಿಯ- ಎರಡು ಚಮಚ, ಇಂಗು- ಅರ್ಧ ಚಮಚ, ಕೆಂಪುಮೆಣಸು- ನಾಲ್ಕು, ತೆಂಗಿನತುರಿ- ಒಂದು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಕೆಸುವಿನದಂಟಿಗೆ ಹುಣಸೆಹಣ್ಣು, ಉಪ್ಪು, ಬೆಲ್ಲ ಮತ್ತು ಬೇಕಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಧನಿಯಾ, ಇಂಗು, ಕೆಂಪುಮೆಣಸು- ಇವುಗಳನ್ನು ಹುರಿದು ಮಿಕ್ಸಿಗೆ ಹಾಕಿ. ನಂತರ, ಬೇಯಿಸಿಟ್ಟ ಕೆಸುವಿನದಂಟು ಮತ್ತು ತೆಂಗಿನತುರಿ ಮತ್ತು ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ. ಬೆಳ್ಳುಳ್ಳಿ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ಇದಕ್ಕೆ ನೀಡಿ.

ದಾಳಿಂಬೆ ವಿದ್‌ ಪುದಿನಾ ಚಟ್ನಿ
ಬೇಕಾಗುವ ಸಾಮಗ್ರಿ: ದಾಳಿಂಬೆ- ಎಂಟು ಚಮಚ, ಪುದಿನ- ಆರು ಚಮಚ, ಶುಂಠಿ- ಅರ್ಧ ಇಂಚು, ಹಸಿಮೆಣಸಿನಕಾಯಿ- ಮೂರು, ತೆಂಗಿನತುರಿ- ಒಂದು ಕಪ್‌, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ತೆಂಗಿನತುರಿಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ, ಲಿಂಬೆರಸ ಸೇರಿಸಿ ಮಿಶ್ರಮಾಡಿ, ಉದ್ದಿನಬೇಳೆ ಸೇರಿಸಿದ ಸಾಸಿವೆ ಒಗ್ಗರಣೆ ನೀಡಿ.

ಗೀತಸದಾ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.