ಕೊರೊನಾ ಎಫೆಕ್ಟ್: ಚೀನಾಕ್ಕೆ ಭಾರೀ ಪ್ರಮಾಣದಲ್ಲಿ ರಫ್ತಾಗುತ್ತಿದೆ ಮಧುರೆ ಮಾಸ್ಕ್!
Team Udayavani, Jan 30, 2020, 7:03 PM IST
ಚೆನ್ನೈ: ಮಾರಣಾಂತಿಕ ಕೊರೊನಾ ವೈರಸ್ ಚೀನಾನ್ನು ತತ್ತರಿಸುವಂತೆ ಮಾಡಿದೆ. ಈ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಯಲು ಜನರು ಮಾಸ್ಕ್ ಗಳನ್ನು (ಮುಖ ಗವಸು) ಬಳಸುತ್ತಿದ್ದಾರೆ. ಇದೀಗ ತಮಿಳುನಾಡಿನ ಮಧುರೈನಲ್ಲಿ ತಯಾರಿಸಲಾಗುತ್ತಿರುವ ಎನ್.95 ಹೆಸರಿನ ಮಾಸ್ಕ್ ಗಳಿಗೆ ಚೀನಾದಿಂದ ಭಾರೀ ಬೇಡಿಕೆ ಬರಲಾರಂಭಿಸಿದೆ.
ಚೀನಾದ ಆರೋಗ್ಯ ಇಲಾಖೆಯು ತನ್ನ ಕಾರ್ಯಕರ್ತರಿಗೆ ಈ ಮಾಸ್ಕ್ ಗಳನ್ನು ಭಾರೀ ಸಂಖ್ಯೆಯಲ್ಲಿ ವಿತರಿಸುತ್ತಿದೆ ಮಾತ್ರವಲ್ಲದೇ ಕೊರೋನಾ ಕಾಟದಿಂದ ನಲುಗಿರುವ ವುಹಾನ್ ಪ್ರಾಂತ್ಯದ ನಿವಾಸಿಗಳಿಗೂ ಸಹ ಈ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ.
ಚೀನಾದಿಂದ ಈ ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಇದರ ಬೆಲೆಯೂ ಅರ್ಧಕ್ಕರ್ಧ ಏರಿಕೆ ಕಂಡಿದೆ. ಇದರಿಂದಾಗಿ ಮಾಸ್ಕ್ ತಯಾರಕರು ಮತ್ತು ಮಾರಾಟಗಾರರು ಉತ್ತಮ ಆದಾಯವನ್ನು ಪಡೆದುಕೊಳ್ಳಲಿದ್ದಾರೆ. ಇದೀಗ ಎನ್.95 ಮಾಸ್ಕ್ ಗಳಿಗೆ ಚಿನಾದಿಂದ ಹೆಚ್ಚಿನ ಬೇಡಿಕೆ ಸಿಕ್ಕಿರುವುದರಿಂದ ಭಾರತದಲ್ಲಿ ಅದರ ಉತ್ಪಾದನೆಯೂ ಹೆಚ್ಚಾಗಿದೆ.
ಈ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎ.ಎಂ. ಮೆಡಿವೇರ್ ಸಂಸ್ಥೆಯ ಆಡಳಿತ ನಿರ್ದೇಶಕ ಅಭಿಲಾಷ್ ಅವರು ಹೇಳಿದ್ದಿಷ್ಟು, ‘ಮಾಸ್ಕ್ ಗಳನ್ನು ಚೀನಾಕ್ಕೆ ರಫ್ತು ಮಾಡುತ್ತಿರುವ ಭಾರತೀಯ ರಫ್ತುದಾರರಿಂದ ನಮಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದೀಗ ನಾವು ನಮ್ಮ ಉತ್ಪಾದನೆಯನ್ನು ದ್ವಿಗುಣಗೊಳಿಸಿದ್ದೇವೆ.’
ಎನ್.95 ಮಾಸ್ಕ್ ಗಳು ಬಾಯಿ ಮತ್ತು ಮೂಗನ್ನು ಮುಚ್ಚುವ ರೀತಿಯಲ್ಲಿ ತಯಾರಾಗಿದ್ದು ಇದರ ಸುಧಾರಿತ ಗುಣಮಟ್ಟವು ಗಾಳಿಯಿಂದ ಅಥವಾ ಮನುಷ್ಯರ ಉಸಿರಿನ ಸಂಪರ್ಕದಿಂದ ಉಸಿರಾಟದ ಮೂಲಕ ಬ್ಯಾಕ್ಟೀರಿಯಾಗಳು ಹಾಗೂ ಧೂಳಿನ ಕಣಗಳು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತವೆ.
Tamil Nadu: Manufacturers in Madurai working extra hours to produce N95 masks as demand soars in China due to #CoronaVirus outbreak. Abhilash,MD,AM Mediwear,says, “We’re getting huge number of orders from Indian exporters who will send masks to China.We’ve doubled our production” pic.twitter.com/Bq4YcMLGzw
— ANI (@ANI) January 30, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.