![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 31, 2020, 5:56 AM IST
ಕರ್ನಾಟಕದ ಕರಾವಳಿಯ ಕಡಲ ತೀರದಿಂದ, ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಕಾಲಿಟ್ಟು ಮಿಂಚುತ್ತಿರುವ ಪ್ರತಿಭೆಗಳ ಸಂಖ್ಯೆಗೆ ಲೆಕ್ಕವಿಲ್ಲ. ಚಿತ್ರರಂಗವೆಂಬ ಮಾಯಾಲೋಕಕ್ಕೆ ಪ್ರತಿವರ್ಷ ಇಲ್ಲಿಂದ ನೂರಾರು ಮಂದಿ ಕಾಲಿಡುತ್ತಲೇ ಇರುತ್ತಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ಬೇರೆ ಬೇರೆ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿಯರ ಸಾಲು ಕೂಡ ದೊಡ್ಡದಿದೆ. ಈಗ ಈ ಸಾಲಿಗೆ ಪ್ರಿಯಾ ಹೆಗ್ಡೆ ಎನ್ನುವ ಮತ್ತೂಬ್ಬ ನವನಟಿಯ ಹೆಸರು ಸೇರ್ಪಡೆಯಾಗುತ್ತಿದೆ. ತುಳು ಚಿತ್ರರಂಗದ ಮೂಲಕ ಸಿನಿ ಜರ್ನಿ ಶುರು ಮಾಡಿದ ಪ್ರಿಯಾ ಹೆಗ್ಡೆ, ಈಗ ಕನ್ನಡದ ಜೊತೆ ತೆಲುಗು ಚಿತ್ರರಂಗದಲ್ಲೂ ನಿಧಾನವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.
ಸದ್ಯ ಪ್ರಿಯಾ ಹೆಗ್ಡೆ ಅಭಿನಯದ “ಜಿಲ್ಕಾ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪ್ರಿಯಾ ಮೂರೂ ಭಾಷೆಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವ ಪ್ರಿಯಾ, “ನನ್ನ ಸಿನಿಮಾ ಕೆರಿಯರ್‌ನಲ್ಲಿ ಇದೊಂದು ಮಹತ್ವದ ಸಿನಿಮಾ. ಇಡೀ ಸಿನಿಮಾದ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣವಾಗಿ ಇಲ್ಲಿ ತೊಡಗಿಸಿಕೊಂಡಿದ್ದೇನೆ. ಒಂದು ಸಿನಿಮಾಕ್ಕೆ ಏನೆಲ್ಲ ಕೆಲಸಗಳಿರುತ್ತದೆ. ಒಬ್ಬ ನಟಿಯಾಗಿ ಹೇಗಿರಬೇಕು, ಪಾತ್ರಕ್ಕೆ ಏನು ತಯಾರಿ ಮಾಡಿಕೊಳ್ಳಬೇಕು. ಸಿನಿಮಾ ಮೇಕಿಂಗ್ ಹೇಗಾಗುತ್ತದೆ? ಹೀಗೆ ಪ್ರತಿಯೊಂದು ವಿಷಯವನ್ನೂ ಇದರಲ್ಲಿ ಕಲಿತುಕೊಂಡಿದ್ದೇನೆ. ಚಿತ್ರದ ಪಾತ್ರಕ್ಕಾಗಿ ಕೆಲ ತಿಂಗಳು ಮುಂಬೈಗೆ ಹೋಗಿ ಟ್ರೈನಿಂಗ್ ತೆಗೆದುಕೊಂಡು ಬಂದಿದ್ದೆ. ಇದು ನನಗೆ ಮರೆಯಲಾರದ ಅನುಭವ. ಈ ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಸ್ಪೂರ್ತಿ ಅಂಥ. ಪ್ರಿನ್ಸಿಪಾಲ್ ಮಗಳು. ಇನೋಸೆಂಟ್ ಹುಡುಗಿ. ಅದರಿಂದಾಚೆಗೆ ಪಾತ್ರಕ್ಕೆ ಇನ್ನೊಂದು ತಿರುವು ಇದೆ. ಅದರ ಬಗ್ಗೆ ಈಗಲೆ ಗುಟ್ಟು ಬಿಟ್ಟುಕೊಡಲಾರೆ. ಅದನ್ನು ಥಿಯೇಟರ್‌ನಲ್ಲೇ ನೋಡಬೇಕು. ಇದೇ ಫೆಬ್ರವರಿಗೆ ಸಿನಿಮಾ ರಿಲೀಸ್ ಆಗ್ತಿದೆ. ನನ್ನ ಮಟ್ಟಿಗೆ ಇದೊಂದು ಡಿಫರೆಂಟ್ ಸಿನಿಮಾವಾಗಿದ್ದು, ಸಿನಿಮಾ ಮತ್ತು ಅದರಲ್ಲಿ ನನ್ನ ಪಾತ್ರ ಎರಡೂ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎನ್ನುತ್ತಾರೆ.
ಒಂದಷ್ಟು ಶಾರ್ಟ್‌ಫಿಲಂಸ್, ಮ್ಯೂಸಿಕ್ ಆಲ್ಬಂಗಳಲ್ಲಿ ಪ್ರಿಯಾ ಹೆಗ್ಡೆ ಅಭಿನಯಿಸಿದ ನಂತರ, “ದಗಲ್‌ಬಾಜಿಲು’ ತುಳು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. “ದಗಲ್‌ಬಾಜಿಲು’ ತೆರೆಕಂಡ ಬಳಿಕ ತುಳು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕೂಡ ಪಡೆಯಿತು. ಅದಾದ ಬಳಿಕ ಕನ್ನಡದಲ್ಲಿ “ಜಿಲ್ಕಾ’ ಚಿತ್ರದಲ್ಲಿ ಪ್ರಿಯಾ ಹೆಗ್ಡೆ ನಾಯಕಿಯಾಗಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.