ಪರಿಸರ ಸೂಕ್ಷ್ಮವಲಯ ಕನಿಷ್ಠ ಮಿತಿಗೆ ಜಿಲ್ಲಾ ಪಂಚಾಯತ್ ನಿರ್ಣಯ
ಮರಳಿನಂತೆ ಜಲ್ಲಿಯೂ ಕೊರತೆಯಾಗಲಿದೆ: ಜಿ.ಪಂ. ಸಭೆ ಕಳವಳ
Team Udayavani, Jan 31, 2020, 12:08 AM IST
ಉಡುಪಿ: ಚಿಕ್ಕಪುಟ್ಟ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ, ಡೀಮ್ಡ್ ಅರಣ್ಯ ಪ್ರದೇಶದಿಂದ ಆಂಶಿಕ ಡೀಮ್ಡ್ ಅರಣ್ಯ ಪ್ರದೇಶವನ್ನು ಬೇರ್ಪಡಿಸಿ ಕಲ್ಲು ಕೋರೆ ನಡೆಸಲು ಆಕ್ಷೇಪ, ಜಿ.ಪಂ. ಸಾಮಾನ್ಯ ಸಭೆಗೆ ಗೈರು ಇತ್ಯಾದಿ ಆರೋಪಗಳಿಂದಾಗಿ ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ವಿರುದ್ಧ ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಸಭೆ ನಡೆಸಿ ತಳೆದ ನಿರ್ಣಯಕ್ಕೆ ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳು ಒಪ್ಪುತ್ತಿಲ್ಲವೆಂದರೆ ಏನರ್ಥ? ಎರಡು ವರ್ಷ ಮರಳು ಸಮಸ್ಯೆಯಾಯಿತು. ಹೀಗೆ ಸುಮ್ಮನೆ ಕುಳಿತರೆ ಮುಂದೆ ಜಲ್ಲಿ ಸಮಸ್ಯೆ ತಲೆದೋರುತ್ತದೆ. ಇದು ಅಭಿವೃದ್ಧಿಗೆ ದೊಡ್ಡ ಹೊಡೆತ ಆಗಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ಕಳವಳ ವ್ಯಕ್ತಪಡಿಸಿದರು.
ಡೀಮ್ಡ್ ಅರಣ್ಯ ಪ್ರದೇಶದ ನಡುವೆ ಇರುವ ಕಲ್ಲು ಕೋರೆಯಲ್ಲಿ ಕ್ರಶರ್ ಉತ್ಪಾದಿಸಲು ಅರಣ್ಯ ಇಲಾಖೆಯವರು ಒಪ್ಪಿಗೆ ನೀಡುತ್ತಿಲ್ಲ. ಕಲ್ಲು ಬಂಡೆಗಳಲ್ಲಿ ಗಿಡಮರ ಇರುತ್ತದೋ? ಡೀಮ್ಡ್ ಪ್ರದೇಶದಲ್ಲಿರುವ ಆಂಶಿಕ ಡೀಮ್ಡ್ ಪ್ರದೇಶವನ್ನು ಪ್ರತ್ಯೇಕಗೊಳಿಸಿ ಅನುಮತಿ ನೀಡಲು ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ಒಪ್ಪಿಗೆ ನೀಡಿದೆ. ಉಳಿದ ಎರಡು ಇಲಾಖೆಗಳ ಅಧಿಕಾರಿಗಳು ಸರ್ವೆ ಮಾಡಿಕೊಟ್ಟರೂ ಜಿಲ್ಲಾ ಮಟ್ಟದ ಡಿಎಫ್ಒ ಸಹಿ ಮಾಡುತ್ತಿಲ್ಲ ಎಂದು ಭಟ್ ತಿಳಿಸಿದರು. ಒಟ್ಟು 17 ಕ್ರಶರ್‌ಗಳಲ್ಲಿ ಮೂರಕ್ಕೆ ಒಪ್ಪಿಗೆ ದೊರಕಿದೆ. ಉಳಿದ 14ಕ್ಕೆ ಅನುಮತಿ ದೊರಕಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಿ.ಪಂ. ಸಭೆಗೆ ಆರಂಭದಿಂದಲೂ ಡಿಎಫ್ಒ ಬಂದಿಲ್ಲ. ಒಂದು ಅಕೇಶಿಯಾ ಗಿಡ ಕಡಿಯಲೂ ಅನುಮತಿ ಸಿಗುತ್ತಿಲ್ಲ ಎಂದು ಜನಾರ್ದನ ತೋನ್ಸೆ, ಪ್ರತಾಪ್ ಹೆಗ್ಡೆ ಹೇಳಿದರು. ಡಿಎಫ್ಒ ಅವರಿಗೆ ಗೇರು ಅಭಿವೃದ್ಧಿ ನಿಗಮದ ಪ್ರಭಾರ ಅಧಿಕಾರವೂ ಇರುವುದರಿಂದ ಅಲ್ಲಿಗೆ ಹೋಗಿದ್ದಾರೆಂದು ಸಿಇಒ ತಿಳಿಸಿದಾಗ, ಅದು ಹೆಚ್ಚುವರಿ ಪ್ರಭಾರ. ಅವರಿಗೆ ಡಿಎಫ್ಒ ಹುದ್ದೆ ಮುಖ್ಯ ಎಂದು ಭಟ್ ತಿಳಿಸಿದರು.
ಜಿ.ಪಂ. ಸಾಮಾನ್ಯ ಸಭೆಗೆ ಡಿಎಫ್ಒ ಬಂದು ಸ್ಪಷ್ಟನೆ ಕೊಡಬೇಕಿತ್ತು. ಇಲ್ಲವಾದರೆ ಗೈರು ಹಾಜರಿಗೆ ಅಧ್ಯಕ್ಷರು, ಸಿಇಒ ಅವರ ಅನುಮತಿ ಪಡೆಯಬೇಕಿತ್ತು. ಸರ್ವಪಕ್ಷಗಳ ನಿಯೋಗ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಕೊಡೋಣ ಎಂದು ಭಟ್ ತಿಳಿಸಿದರು. ಅದರಂತೆ ಡಿಎಫ್ಒ ವಿರುದ್ಧ ಜಿ.ಪಂ. ಸಭೆ ನಿರ್ಣಯ ತಳೆಯಿತು.
ಅಭಯಾರಣ್ಯದ ಗಡಿಗೆ ಹೊಂದಿಕೊಂಡು ಒಂದು ಕಿ.ಮೀ. ಪ್ರದೇಶವನ್ನು ಗುರುತಿಸಿದ್ದಾರೆ. ಈ ಹಿಂದೆ 200 ಮೀ. ಇರಬೇಕೆಂದು ನಾವು ನಿರ್ಣಯ ಮಂಡಿಸಿದ್ದೆವು. ಈಗ ಕನಿಷ್ಠ ಮೀ. ಬಿಡಬೇಕೆಂದು ನಿರ್ಣಯ ತಳೆಯೋಣ ಎಂದು ಬಾಬು ಶೆಟ್ಟಿ ಸಲಹೆ ನೀಡಿದಂತೆ ನಿರ್ಣಯ ತಳೆಯಲಾಯಿತು.
ಸ್ಥಾಯೀ ಸಮಿತಿ ಅಧ್ಯಕ್ಷರಾದ ಸುಮಿತ್ ಶೆಟ್ಟಿ, ಶೋಭಾ ಪುತ್ರನ್, ಲಕ್ಷ್ಮೀ ಮಂಜು ಬಿಲ್ಲವ, ಬಟವಾಡೆ ಸುರೇಶ್, ಗೌರಿ ದೇವಾಡಿಗ ಚರ್ಚೆ ಯಲ್ಲಿ ಪಾಲ್ಗೊಂಡರು. ಮುಖ್ಯ ಯೋಜನಾ ಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಉಪಕಾರ್ಯದರ್ಶಿ ಕಿರಣ್ ಪಡೆ°àಕರ್, ಯೋಜನ ನಿರ್ದೇಶಕ ಗುರುದತ್ ಉಪಸ್ಥಿತರಿದ್ದರು.
ವರಂಗ- ರಸ್ತೆ ಅಭಿವೃದ್ಧಿಗೆ ತಡೆ
ವರಂಗ ಗ್ರಾಮ ವ್ಯಾಪ್ತಿಯಲ್ಲಿ ಜೈನ ಮಠಕ್ಕೆ ಸೇರಿದ್ದು ಎಂದು ಹೇಳಲಾದ ಜಾಗದಲ್ಲಿ 1800 ಎಕ್ರೆ ಸ್ಥಳವಿದೆ. ಇಲ್ಲಿ ಹಿಂದೆ ಗ್ರಾ.ಪಂ. ರಸ್ತೆ ನಿರ್ಮಿಸಿತ್ತು. ಶಾಸಕರು ಪ್ರವಾಸೋದ್ಯಮ ಅಭಿವೃದ್ಧಿಗೆ 2 ಕೋ.ರೂ. ಅನುದಾನ ಇರಿಸಿದ್ದರೂ ರಸ್ತೆ ನಿರ್ಮಾಣಕ್ಕೆ ಜೈನ ಮಠದ ಆಡಳಿತದವರು ಅಡ್ಡಿಯಾಗುತ್ತಿದ್ದಾರೆ. ಸರಕಾರದ ಅನುದಾನದಿಂದ ಅಭಿವೃದ್ಧಿ ಪಡಿಸಿದರೆ ಭೂಮಿಯ ಅಧಿಕಾರ ಸರಕಾರಕ್ಕೆ ಹೋಗುತ್ತದೆ ಎಂಬ ಕಾರಣಕ್ಕೆ ಆಕ್ಷೇಪ ಬರುತ್ತಿದೆ ಎಂದು ತಿಳಿದುಬಂದಿದೆ ಎಂದು ಜ್ಯೋತಿ ಹರೀಶ್ ಹೇಳಿದರು.
ಪಟ್ಟಾ ಜಾಗದಲ್ಲಿ ರಸ್ತೆ ನಿರ್ಮಿಸಬೇಕಾದರೆ ಅವರ ಒಪ್ಪಿಗೆ ಬೇಕು ಎಂಬ ಕಾನೂನು ಇದೆ. ಒಪ್ಪಿಗೆ ಇಲ್ಲದೆ ಮಾಡಿದಾಗ ಅದು ತಪ್ಪು ಎಂದು ನ್ಯಾಯಾಲಯವೂ ತೀರ್ಪಿತ್ತಿದೆ ಎಂದು ಪ್ರತಾಪ ಹೆಗ್ಡೆ ಮಾರಾಳಿ ಹೇಳಿದರು. ಹೆಬ್ರಿ ತಹಶೀಲ್ದಾರ್ ಮತ್ತು ಕಾರ್ಕಳ ತಾ.ಪಂ. ಇಒ ಅವರಿಂದ ವರದಿ ತರಿಸಿಕೊಳ್ಳುವುದಾಗಿ ಸಿಇಒ ತಿಳಿಸಿದರು.
ಕಾರ್ಕಳ- ಬೈಲೂರು ರಸ್ತೆ ಬದಿಯ ಅಪಾಯ
ಕಾರಿ ಮರ ಕಡಿಯಲು ಅರಣ್ಯ ಇಲಾಖೆಯಲ್ಲಿ ಹಣವಿಲ್ಲ ಎಂದು ದಿವ್ಯಶ್ರೀ ಅಮೀನ್ ದೂರಿದರು. ಇದಕ್ಕೆ ಉತ್ತರಿಸಬೇಕಾದ ರಾ.ಹೆ. ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ. ತಲ್ಲೂರು ರಸ್ತೆ ಬದಿ ಹೊಂಡ ನಿರ್ಮಿಸಿದ್ದು ಇದನ್ನು ಸರಿಪಡಿಸಿಲ್ಲ ಎಂದು ಜ್ಯೋತಿ ಎಂ. ಹೇಳಿದಾಗ ವಾರದಲ್ಲಿ ಸರಿಪಡಿಸುವ ಭರವಸೆ ನೀಡಲಾಯಿತು. ಪಡುಬಿದ್ರಿ ಭಾಗದಲ್ಲಿ ಸರ್ವಿಸ್ ರಸ್ತೆಯನ್ನು ಸದ್ಯದಲ್ಲಿಯೇ ಆರಂಭಿಸುವದಾಗಿ ಶಶಿಕಾಂತ ಪಡುಬಿದ್ರಿಯವರಿಗೆ ಅಧಿಕಾರಿಗಳು ನೀಡಿದರು.
ಅಕ್ರಮ ಕಟ್ಟಡಗಳ ತೆರವು
ರಾ.ಹೆ. ಇಕ್ಕೆಲಗಳಲ್ಲಿ ಭೂಸ್ವಾಧೀನ ಪಡಿಸಿಕೊಂಡ ಜಾಗದಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟುತ್ತಿದ್ದಾರೆಂದು ಶಿಲ್ಪಾ ಜಿ. ಸುವರ್ಣ ಮತ್ತು ಬ್ರಹ್ಮಾವರದಲ್ಲಿ ಪರಿಹಾರ ನೀಡಿದ ಬಳಿಕವೂ ಕಟ್ಟಡವನ್ನು ಹಾಗೆಯೇ ಇರಿಸಿಕೊಳ್ಳಲಾಗಿದೆ ಎಂದು ಮೈರ್ಮಾಡಿ ಸುಧಾಕರ ಶೆಟ್ಟಿ ಆರೋಪಿಸಿದರು. ಇದರ ಬಗ್ಗೆ ಕುಂದಾಪುರದಿಂದ ತಲಪಾಡಿಯವರೆಗೆ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡ ಬಳಿಕ ಏಕಕಾಲದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತೇವೆ ಎಂದು ಅಧಿಕಾರಿಗಳು ಉತ್ತರಿಸಿದರು. ಇನ್ನು 15 ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಸಿಇಒ ಹೇಳಿದರು.
ನೀರು ಪೂರೈಕೆ ಬಿಲ್- ತೊಂದರೆ
ಕುಡಿಯುವ ನೀರಿಗೆ ಟೆಂಡರ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಈಗ ಲೀ. ಗೆ ಕೇವಲ 25 ಪೈಸೆ ನೀಡುತ್ತಿದ್ದಾರೆ. ಹೀಗಿದ್ದರೆ ಟೆಂಡರ್ ಕರೆದದ್ದು ಏಕೆ ಎಂದು ಬಾಬು ಶೆಟ್ಟಿಯವರು ತಿಳಿಸಿದಾಗ, ಹಿಂದೆ ಜಿಲ್ಲಾಧಿಕಾರಿಯವರು ಈ ಕುರಿತು ನಿರ್ಧಾರ ತಳೆದಿದ್ದರು. ಈಗ ಮತ್ತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿ ಎಂದು ರಘುಪತಿ ಭಟ್ ಸಲಹೆ ನೀಡಿದರು.
ಪಿಂಚಣಿ ಯೋಜನೆಗಳು ವಿಳಂಬ
ಸಂಧ್ಯಾ ಸುರಕ್ಷಾ, ಮನಸ್ವಿನಿ ಮೊದಲಾದ ಸಾಮಾಜಿಕ ಪಿಂಚಣಿ ಯೋಜನೆಗಳು ವರ್ಷವಾದರೂ ಬರುತ್ತಿಲ್ಲ ಎಂದು ಜನಾರ್ದನ ತೋನ್ಸೆಯವರು ಸಭೆಯ ಗಮನಕ್ಕೆ ತಂದರು. ಆಧಾರ್ ಡಬಲ್ ಆದಾಗ ಇಂತಹ ಸಮಸ್ಯೆ ತಲೆದೋರಿದೆ ಎಂದು ರಘುಪತಿ ಭಟ್ ತಿಳಿಸಿದರು. ಕೆ2, ಸರ್ವರ್ ಹೆಸರಿನಲ್ಲಿ ಇದು ಮಾತ್ರವಲ್ಲದೆ 9/11 ಇತ್ಯಾದಿ ಎಲ್ಲ ಆನ್‌ಲೈನ್ ಅರ್ಜಿಗಳ ಸಮಸ್ಯೆ ಹೆಚ್ಚುತ್ತಿದೆ. ಯಾರ್ಯಾರೋ ಸಾಫ್ಟ್ವೇರ್ ಮಾಡಿ ಕೊಡುತ್ತಾರೆ. ಇದಕ್ಕೆ ನಿರೀಕ್ಷಿತ ಸಾಮರ್ಥ್ಯ ಇದ್ದಿರುವುದಿಲ್ಲ ಎಂದು ಪ್ರತಾಪ ಹೆಗ್ಡೆ ಮಾರಾಳಿ ಹೇಳಿದರು. ಈಗ ಇದರ ಮಂಜೂರಾತಿಯ ಅಧಿಕಾರಿ ನಿರ್ದೇಶನಾಲಯಕ್ಕೆ ಇದೆ. ನಾವು ಇಲ್ಲಿಂದ ಕಳುಹಿಸುತ್ತಿದ್ದೇವೆ. ಕೆಲವು ಇತ್ಯರ್ಥವಾಗಿದೆ. 752 ಪ್ರಕರಣಗಳಲ್ಲಿ ಸುಮಾರು 400 ಬಾಕಿ ಇದೆ. ಇದರ ಬಗ್ಗೆ ಫಾಲೋ ಅಪ್ ಕೆಲಸ ಮಾಡುತ್ತೇವೆ ಎಂದು ತಹಶೀಲ್ದಾರ್ ಪ್ರದೀಪ್ ಕುಡೇìಕರ್ ತಿಳಿಸಿದರು.
ಕಾಪುವಿನಲ್ಲಿ ಪ್ಲಾಟಿಂಗ್ ಸಮಸ್ಯೆ
ಕಾಪು ತಾಲೂಕು ಮಜೂರು ಗ್ರಾಮದಲ್ಲಿ ಪ್ಲಾಟಿಂಗ್ ಸಮಸ್ಯೆ ತೀವ್ರವಾಗಿದೆ. ಮೂಲದಾಖಲೆಗಳು ಫಲಾನುಭವಿಗಳಲ್ಲೂ ಇಲ್ಲ, ಸರಕಾರಿ ಕಚೇರಿಯಲ್ಲಿಯೂ ಇಲ್ಲ. ಆದ್ದರಿಂದ ಇವರಿಗೆ ಮನೆ ಕಟ್ಟಲು ಆಗುತ್ತಿಲ್ಲ ಎಂದು ಶಿಲ್ಪಾ ಜಿ. ಸುವರ್ಣ ಹೇಳಿದಾಗ “ಮಿಸ್ಸಿಂಗ್ ಫೈಲ್ ಪ್ರಕರಣಗಳಲ್ಲಿ ಏನು ಮಾಡಬೇಕು ಎಂದು ಸರಕಾರಕ್ಕೆ ಪತ್ರ ಬರೆಯಬೇಕು’ ಎಂದು ತಹಶೀಲ್ದಾರ್ ತಿಳಿಸಿದರು.
ಐದಾರು ಗ್ರಾಮ ಪಮಚಾಯತ್‌ಗಳಲ್ಲಿರುವ ಕಾರ್ಮಿಕರಿಗೆ ಅನುಕೂಲ ಮಾಡಿಕೊಂಡು ಎರಡನೆಯ ಶನಿವಾರದಂದು ಆಧಾರ್ ಕಾರ್ಡ್ ಲಿಂಕ್ ಕೆಲಸವನ್ನು ಮಾಡಬೇಕೆಂದು ಸುಮಿತ್ ಶೆಟ್ಟಿ ಸಲಹೆ ನೀಡಿದಂತೆ ಅಧಿಕಾರಿಗಳು ಒಪ್ಪಿಕೊಂಡರು.
ಪರಿಸರ ಸೂಕ್ಷ್ಮ ವಲಯ
ಕುಂದಾಪುರ, ಬೈಂದೂರು ತಾಲೂಕಿನ ಆಜ್ರಿ, ಸಿದ್ಧಾಪುರ, ಉಳೂ¤ರು ಮೊದಲಾದೆಡೆ ಅತಿಸೂಕ್ಷ್ಮ ಪ್ರದೇಶ ಎಂದು ಘೋಷಣೆಯಾಗಿದೆ. ಇಲ್ಲಿ ಶೇ.80 ಜನರು ಕೃಷಿಕರಾಗಿದ್ದಾರೆ. ಇಲ್ಲಿ ಇನ್ನು ಯಾವುದೇ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವಂತಿಲ್ಲ. ನಾಲ್ಕು ದನಗಳಿಗಿಂತ ಹೆಚ್ಚಿಗೆ ಸಾಕುವಂತಿಲ್ಲ ಎಂದು ರೋಹಿತ್‌ಕುಮಾರ್ ಶೆಟ್ಟಿ ಸಭೆಯ ಗಮನಕ್ಕೆ ತಂದರು. ಪರಿಸರ ಸೂಕ್ಷ್ಮ ವಲಯ ಬೇರೆ, ಕಸ್ತೂರಿ ರಂಗನ್ ವರದಿ ಬೇರೆ. ಪರಿಸರ ಸೂಕ್ಷ್ಮ ವಲಯ ಕೇವಲ ಮೂಕಾಂಬಿಕಾ ಅರಣ್ಯ ಪ್ರದೇಶಕ್ಕೆ ಮಾತ್ರ ಘೋಷಣೆಯಾಗಿದೆ. ಸೋಮೇಶ್ವರ ಅಭಯಾರಣ್ಯ, ಕುದುರೆಮುಖ ಅಭಯಾರಣ್ಯ ಪ್ರದೇಶಕ್ಕೆ ಇನ್ನೂ ಘೋಷಣೆಯಾಗಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
ಅಕೇಶಿಯಾ ಬೆಳೆಸುವ ಅರಣ್ಯ ಇಲಾಖೆ
ನಿಜವಾದ ಕಾಡು ಪ್ರದೇಶದಲ್ಲಿ ಕಾಡು ಬೆಳೆಸದ ಅರಣ್ಯಾಧಿಕಾರಿಗಳು ಅಕೇಶಿಯಾ ಗಿಡ ನೆಟ್ಟು ಕಾಡು ಪ್ರಾಣಿಗಳು ನಾಡಿಗೆ ಬರುವಂತೆ ಮಾಡಿದ್ದಾರೆ ಎಂದು ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಹೇಳಿದರೆ, ಕರ್ಜೆಯಲ್ಲಿ ಪರಿಶಿಷ್ಟ ಪಂಗಡದವರ ಪ್ರದೇಶಕ್ಕೆ ರಸ್ತೆ ನಿರ್ಮಿಸಲು ಅನುದಾನ ತಂದರೆ ಒಂದೇ ಒಂದು ಎಲೆ ಕಡಿಯುವ ಅಗತ್ಯವಿಲ್ಲದಿದ್ದರೂ ಅರಣ್ಯ ಇಲಾಖೆಯವರು ಕಾಮಗಾರಿಗೆ ತಡೆಯೊಡ್ಡುತ್ತಾರೆ. ಇದು ಹೊಸ ರಸ್ತೆಯಲ್ಲ, ಹಳೆಯ ಡಾಮರು ರಸ್ತೆಗೆ ಮರು ಡಾಮರು ಕಾಮಗಾರಿ ನಡೆಸುವುದು. ಹೀಗೆ ಮಾಡಿದರೆ ಅರಣ್ಯ ಇಲಾಖೆ ವಿರುದ್ಧ ದಂಗೆ ಏಳಬೇಕಾಗುತ್ತದೆ ಎಂದು ಭಟ್ ಎಚ್ಚರಿಸಿದರು. ಹಣ ಖರ್ಚಾಗುತ್ತದೆ ವಿನಾ ಗಿಡಗಳನ್ನು ಕೊಡುವುದಿಲ್ಲ ಎಂದು ಶಿಲ್ಪಾ ಸುವರ್ಣ ಹೇಳಿದರು.
ಪಡಿತರ ಚೀಟಿ ವಿಲೇಗೆ ಸರ್ವರ್ ಅಡ್ಡಿ: ಸರಕಾರದ ಗಮನಕ್ಕೆ ಜಿಲ್ಲಾ ಪಂಚಾಯತ್ ನಿರ್ಣಯ
ಉಡುಪಿ: ಪಡಿತರ ಚೀಟಿ ವಿಲೇವಾರಿಗೆ ಅಡ್ಡಿಯಾಗುತ್ತಿರುವ ಸರ್ವರ್ ಸಮಸ್ಯೆ ರಾಜ್ಯ ಮಟ್ಟದ್ದಾಗಿದ್ದು ಇದರ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು ಎಂದು ಮಂಗಳವಾರ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಜಿ.ಪಂ. ಸಿಇಒ ಪ್ರೀತಿ ಗೆಹೊÉàಟ್ ತಿಳಿಸಿದರು.
ಪಡಿತರ ಚೀಟಿ ವಿಲೇವಾರಿಗೆ ಸರ್ವರ್ ಸಮಸ್ಯೆ ಅಡ್ಡಿಯಾಗುತ್ತಿದೆ. ಜನರು ಪ್ರತಿನಿತ್ಯ ಬಂದು ಸರತಿಸಾಲಿನಲ್ಲಿ ನಿಂತು ವಾಪಸು ಹೋಗುತ್ತಿದ್ದಾರೆ. ನೂರಾರು ಪಡಿತರ ಚೀಟಿಗಳ ಅರ್ಜಿಗಳು ಬಾಕಿ ಇವೆ. ಈಗ ದಿನಕ್ಕೆ ನಾಲ್ಕು ಗಂಟೆ ಮಾತ್ರ ಸರ್ವರ್ ಸಿಗುತ್ತಿರುವುದು ತೊಂದರೆಯಾಗಿದೆ ಎಂದು ಸದಸ್ಯರಾದ ಜನಾರ್ದನ ತೋನ್ಸೆ, ಬಾಬು ಶೆಟ್ಟಿ, ಉದಯ ಕೋಟ್ಯಾನ್ ಹೇಳಿದರು.
ಈ ತಿಂಗಳ ಪಡಿತರವನ್ನು ಮುಂದಿನ ತಿಂಗಳು ವಿತರಿಸಲು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದೇವೆ. 10-20 ಇಲಾಖೆಯವರು ನಮ್ಮ ಇಲಾಖೆ ವೆಬ್‌ಸೈಟ್‌ಗೆಲಾಗಿನ್ ಆಗುತ್ತಿರುವುದೂ ಸಮಸ್ಯೆಯಾಗಿದೆ. ಈಗ ಸರಕಾರದಿಂದ ಮಾನವ ಶಕ್ತಿಯಿಂದ ಅರ್ಜಿ ವಿಲೇವಾರಿಗೆ ಸೂಚಿಸಿದೆ. ಇದು ರಾಜ್ಯ ಮಟ್ಟದ ಸಮಸ್ಯೆ ಎಂದು ಅಧಿಕಾರಿಗಳು ತಿಳಿಸಿದರು.ಜಿಲ್ಲಾ ಪಮಚಾಯತ್‌ನಿಂದ ಪತ್ರವನ್ನು ಬರೆಯುತ್ತೇವೆ ಮತ್ತು ರಾಜ್ಯ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಸಿಇಒ ಉತ್ತರಿಸಿದರು.
ಲೋಕಸಭಾ ಚುನಾವಣೆ ವೇಳೆ ಸರಕಾರಿ ಸ್ಥಳದಲ್ಲಿ ವಾಸಿಸುತ್ತಿರುವವರು ಅರ್ಜಿ ಸಲ್ಲಿಸಬೇಕಾದ 57 ನಮೂನೆಗಳು ಸ್ಥಗಿತಗೊಂ ಡಿದ್ದವು. ಮತ್ತೆ ಇದನ್ನು ಆರಂಭಿಸಬೇಕು ಎಂದು ಮೈರ್ಮಾಡಿ ಸುಧಾಕರ ಶೆಟ್ಟಿ ಒತ್ತಾಯಿಸಿದಾಗ ರಘುಪತಿ ಭಟ್ ಅವರೂ ದನಿಗೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.