ಸರಕಾರಕ್ಕೆ ಪತ್ರ ಬರೆದ ಸಚಿವ ಕೋಟ

ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಬೇಡಿಕೆ

Team Udayavani, Jan 31, 2020, 2:21 AM IST

youth-48

ಕುಂದಾಪುರ: ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ ಪ್ರಾದೇಶಿಕ ಸಾರಿಗೆ ಕಚೇರಿ ರಚನೆ ಪ್ರಸ್ತಾವ ಮತ್ತೂಮ್ಮೆ ಮುನ್ನೆಲೆಗೆ ಬಂದಿದೆ. ಮಣಿಪಾಲದ ಬಳಿಕ ಕುಂದಾಪುರದಲ್ಲಿಯೂ ಹೊಸದಾಗಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಪ್ರಸಕ್ತ ಸಾಲಿನಲ್ಲಿಯೇ ಆರಂಭಿಸಬೇಕು ಎಂದು ಒತ್ತಾಯಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರೇ ಸ್ವತಃ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಕುಂದಾಪುರ, ಬೈಂದೂರು, ಶಿರೂರು, ಕೊಲ್ಲೂರು, ಹೊಸಂಗಡಿ, ಸಿದ್ದಾಪುರ, ಶಂಕರನಾರಾಯಣ, ಹಾಲಾಡಿಯಂತಹ ಗ್ರಾಮಾಂತರ ಭಾಗದ ಜನರು ಚಾಲನ ಪರವಾನಿಗೆ, ವಾಹನ ನೋಂದಣಿ, ನವೀಕರಣ ಮತ್ತಿತರ ಕೆಲಸಕ್ಕಾಗಿ 60-70 ಕಿ.ಮೀ. ದೂರದ ಮಣಿಪಾಲಕ್ಕೆ ತೆರಳಬೇಕಾದ ಅನಿವಾರ್ಯತೆಯಿದೆ. ಈ ಕಾರಣಕ್ಕೆ ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಆರಂಭಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.

ಕುಂದಾಪುರದಲ್ಲಿ ಎಲ್ಲ ಅರ್ಹತೆಗಳಿದ್ದರೂ ಹಲವು ವರ್ಷಗಳಿಂದ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದರೂ ಸಾರಿಗೆ ಕಚೇರಿ ಆರಂಭಿಸುವ ಕುರಿತಂತೆ ಈವರೆಗೆ ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲ. ಈ ಬಗ್ಗೆ ಇಲ್ಲಿಗೆ ಭೇಟಿ ನೀಡಿದ ಎಲ್ಲ ಸಾರಿಗೆ ಸಚಿವರು, ಸಂಬಂಧಪಟ್ಟ ಅಧಿಕಾರಿಗಳೆಲ್ಲರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ವಿ.ಎಸ್‌. ಆಚಾರ್ಯರಿಂದಲೂ ಪ್ರಸ್ತಾವ
ಕುಂದಾಪುರದಲ್ಲಿ ಸಾರಿಗೆ ಕಚೇರಿ ಆರಂಭಿಸಬೇಕು ಎನ್ನುವುದಾಗಿ ಒತ್ತಾಯಿಸಿ ದಿ| ವಿ.ಎಸ್‌. ಆಚಾರ್ಯ ಕೂಡ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಪತ್ರದಲ್ಲೇನಿದೆ?
ಸಚಿವ ಕೋಟ ಅವರು ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭ ಕುರಿತಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಕುಂದಾಪುರದಲ್ಲಿ 72 ಸಾವಿರಕ್ಕೂ ಅಧಿಕ ವಾಹನಗಳಿದ್ದು, ವಾರದಲ್ಲಿ ಒಂದು ದಿನದ ಕ್ಯಾಂಪ್‌ ನಡೆಸುವುದರಿಂದ ಸರಾಸರಿ 600ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ತಪ್ಪಿದಲ್ಲಿ ಅವರೆಲ್ಲ 60-70 ಕಿ.ಮೀ. ದೂರದ ಮಣಿಪಾಲಕ್ಕೆ ಹೋಗಬೇಕು. ಆದ್ದರಿಂದ ಹೊಸದಾಗಿ ಪ್ರತ್ಯೇಕ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾರಂಭಿಸಬೇಕು ಎನ್ನುವುದು ಕುಂದಾಪುರದ ಜನತೆಯ ಬೇಡಿಕೆಯಾಗಿದ್ದು, ಕುಂದಾಪುರಕ್ಕೆ ಕಚೇರಿ ಮಂಜೂರು ಮಾಡಿ, ಈ ಸಾಲಿನಲ್ಲಿಯೇ ಪ್ರಾರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಾನದಂಡಗಳೇನು?
ಸಾರಿಗೆ ಕಚೇರಿ ಆರಂಭಿಸಬೇಕಾದರೆ ಪ್ರಸ್ತಾವಿತ ಜಾಗದಲ್ಲಿ ಈಗಾಗಲೇ ನೋಂದಣಿಯಾದ ಎಲ್ಲ ವಾಹನಗಳಿಂದ ವಾರ್ಷಿಕ ಕನಿಷ್ಠ 20 ಕೋ.ರೂ. ತೆರಿಗೆ (ರಾಜಸ್ವ) ಮೂಲಕ ಆದಾಯ ಬರಬೇಕು.

 ಪ್ರಸ್ತಾವಿತ ಕಚೇರಿ ಜಾಗದಲ್ಲಿ ಕನಿಷ್ಠ 30 ಸಾವಿರ ವಾಹನಗಳ ನೋಂದಣಿಯಾಗಿರಬೇಕು.

ಆ ಭಾಗದಲ್ಲಿ ಕನಿಷ್ಠ 10,000 ಚಾಲನಾ ಪರವಾನಿಗೆ ನೀಡಿರಬೇಕು.

ವಾರ್ಷಿಕ 10,000 ಚಾಲನಾ ಪರವಾನಿಗೆ ನೋಂದಣಿಯಾಗಿರಬೇಕು.

ಪ್ರಸ್ತಾವಿತ ಕಚೇರಿಯು ಮೂಲ ಕಚೇರಿಯಿಂದ ಗ್ರಾಮೀಣ ಭಾಗಗಳಿಂದ 50 ಕಿ.ಮೀ. ಅಂತರವಿರಬೇಕು.

ಅರ್ಹತೆಗಳೇನು?
ಕುಂದಾಪುರ ಭಾಗಗಳಿಂದ ನೋಂದಣಿಯಾದ ವಾಹನಗಳಿಂದ ಪ್ರತಿ ವರ್ಷ 20 ಕೋ.ರೂ.ಗಿಂತ ಅಧಿಕ ತೆರಿಗೆ (ರಾಜಸ್ವ) ಸಂಗ್ರಹವಾಗುತ್ತದೆ.

ಇಲ್ಲಿ ಈವರೆಗೆ 60,710 ವಾಹನ ನೋಂದಣಿಯಾಗಿ ಉಪಯೋಗದಲ್ಲಿದೆ.

ಕುಂದಾಪುರ ಭಾಗದ 27,529 ಮಂದಿಗೆ ಚಾಲನಾ ಪರವಾನಿಗೆ ನೀಡಲಾಗಿದೆ.

ವಾರ್ಷಿಕ 58,382 ವಾರ್ಷಿಕ ನೋಂದಣಿ ನೀಡಲಾಗುತ್ತದೆ.

50 ಕಿ.ಮೀ. ಅಂತರದಲ್ಲಿದೆ.

ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸಬೇಕು ಎನ್ನುವ ಬೇಡಿಕೆ ಬಹು ವರ್ಷಗಳಿಂದ ಇದೆ. ಈ ಬಗ್ಗೆ ಅರ್ಹತೆಗಳೇನು, ಎಷ್ಟೆಲ್ಲ ವಾಹನ ನೋಂದಣಿಯಾಗುತ್ತವೆ, ಆದಾಯ ಎಷ್ಟು ಬರುತ್ತದೆ ಎನ್ನುವ ಕುರಿತಂತೆ 2018ರಲ್ಲಿಯೇ ಬೆಂಗಳೂರಿನ ಪ್ರಧಾನ ಕಚೇರಿಗೆ ವಿವರ ನೀಡಿ, ಪ್ರಸ್ತಾವನೆ ಸಲ್ಲಿಸಲಾಗಿದೆ.
– ರಾಮಕೃಷ್ಣ ರೈ, ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ

ಟಾಪ್ ನ್ಯೂಸ್

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.