ಕುಡಿಯುವ ನೀರಿಗೆ ಮೊದಲ ಆದ್ಯತೆ:ರವಿ
Team Udayavani, Jan 31, 2020, 12:08 PM IST
ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ನೂತನ ಬಯಪ್ಪ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಂಟಿ ಕಾರ್ಯದರ್ಶಿ ಸೊಣ್ಣಪ್ಪ ಹಾಗೂ ಸಚಿವರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಟ್ಟಡ ಸ್ಥಾಪಿಸಲು ಮುಂದಾಗಲಾಗುವುದು ಎಂದು ನೂತನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ರವಿ ತಿಳಿಸಿದರು.
ಪಟ್ಟಣದ ಸೂಲಿಬೆಲೆ ರಸ್ತೆಯ ಬಯಪ್ಪ ಕಚೇರಿಯಲ್ಲಿ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಅಧಿಕಾರಿಗಳ ಮಾಹಿತಿಯಂತೆ 2010-11ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 46.80ಕೋಟಿ, 2015-16ನೇ ಸಾಲಿನಲ್ಲಿ 22.09ಕೋಟಿ, 2017-18ನೇ ಸಾಲಿನಲ್ಲಿ 50.74 ಕೋಟಿ ರೂ.ಗಳ ಅನುದಾನ ಈಗಾಗಲೇ ಬಿಡುಗಡೆಯಾಗಿದೆ.
2019-20ನೇ ಸಾಲಿನಲ್ಲಿ ವಿವಿಧ ಕೆರೆಗಳ ಅಭಿವೃದ್ಧಿಗಾಗಿ 39.19ಕೋಟಿ ರೂ. ಸರ್ಕಾರದ ಆಡಳಿತಾತ್ಮಕ ಅನು ಮೋದನೆಗೆ ಸಲ್ಲಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಚನ್ನಹಳ್ಳಿ ಬಳಿ ರೈಲ್ವೆಕೆಳ ಸೇತುವೆ ಕಾಮಗಾರಿಗೆ 3ಕೋಟಿ ರೂ.ಪುರಸಭೆ ವ್ಯಾಪ್ತಿಯ ಸಿಟಿಟಿಎಸ್ ಯೋಜನೆ ಕಾಮಗಾರಿಗೆ 6.55 ಕೋಟಿ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾರಾ ಯಣಸ್ವಾಮಿ, ತಾ.ಅಧ್ಯಕ್ಷ ಸುಂ ದರೇಶ್ ಪ್ರ.ಕಾರ್ಯ ದರ್ಶಿ ನಿಲೇರಿಮಂಜುನಾಥ್, ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಚ್.ರವಿಕುಮಾರ್, ಕೆ.ಆರ್ .ಎನ್.ಬಾಬು, ರಾಜ ಗೋ ಪಾಲ್, ದೇ.ಸು.ನಾಗರಾಜ್, ಗೋವಿಂ ದರಾಜು, ಗುರುಸ್ವಾಮಿ, ಬೂದಿ ಗೆರೆ ನಾರಾಯಣಸ್ವಾಮಿ, ಎಸ್.ರಮೇಶ್, ಕೆ.ಸಿ.ಮುನಿರಾಜು ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.