ಟಿಸಿಗಳಿಗಿಲ್ಲ ಸುರಕ್ಷತಾ ಬೇಲಿ
ಜೆಸ್ಕಾಂ ಅಧಿಕಾರಿಗಳ ಜಾಣ ಕುರುಡು: ನಿವಾಸಿಗಳ ಆರೋಪ
Team Udayavani, Jan 31, 2020, 12:50 PM IST
ಸಿರುಗುಪ್ಪ: ನಗರದ ವಿವಿಧ ವಾರ್ಡ್ ಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ವಿದ್ಯುತ್ ಕಂಬಗಳು ಸುರಕ್ಷತಾ ಬೇಲಿ ಇಲ್ಲದ ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್) ಅಪಾಯಕ್ಕೆ ಆಹ್ವಾನಿಸುತ್ತಿವೆ.
ಪ್ರತಿನಿತ್ಯ ಮಹಿಳೆಯರು, ವಿದ್ಯಾರ್ಥಿಗಳು, ಸಾರ್ವಜನಿಕರು ವಿದ್ಯುತ್ ಶಾಕ್ ಹೊಡೆಯುವ ಭಯದಲ್ಲೇ ಸಂಚರಿಸಬೇಕಾಗಿದೆ. ಈ ಸಮಸ್ಯೆಗಳ ಬಗ್ಗೆ ದೂರು ನೀಡಿದರೂ ಜೆಸ್ಕಾಂ ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂಬುದು ನಗರ ನಿವಾಸಿಗಳ ಆರೋಪವಾಗಿದೆ. ನಗರದಲ್ಲಿ ಅಳವಡಿಸಲಾಗಿರುವ ಹಲವು ವಿದ್ಯುತ್ ಪರಿವರ್ತಕಗಳ ಸುತ್ತ ಸುರಕ್ಷತೆಗಾಗಿ ಬೇಲಿ ಅಳವಡಿಸಿಲ್ಲ. ಕೆಲವು ಕಡೆ ಪರಿವರ್ತಕಗಳು ನೆಲದ ಮಟ್ಟದಲ್ಲಿವೆ, ಕೆಲವು ಕಡೆ ಪರಿವರ್ತಕಗಳ ಸುತ್ತ ಗಿಡಗಂಟೆಗಳು ಬೆಳೆದು ನಿಂತಿವೆ. ಪರಿವರ್ತಕಗಳ ಮೇಲೆ ಬಳ್ಳಿ ಬೆಳೆದು ವಿದ್ಯುತ್ ಪ್ರವಹಿಸುವ ತಂತಿವರೆಗೆ ತಲುಪಿರುವ ನಿದರ್ಶನಗಳೂ ಇವೆ. ಸಾರ್ವಜನಿಕರು ಈ ಬಗ್ಗೆ ಜೆಸ್ಕಾಂ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆನ್ನುವ ಆರೋಪ ಸಾಮಾನ್ಯವಾಗಿದೆ.
ಬಳ್ಳಾರಿ ಮುಖ್ಯರಸ್ತೆಯಲ್ಲಿ ಹೊಸ ಎಸ್ ಬಿಐ ಬ್ಯಾಂಕ್, 6ನೇ ವಾರ್ಡ್ ಶಾಲೆಯ ಹತ್ತಿರ, ರಾಜೀವ್‌ಗಾಂಧಿ ನಗರದ ಸರ್ಕಾರಿ ಶಾಲೆಯ ಹತ್ತಿರ, ಆ್ಯಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವು ಕಡೆಗಳಲ್ಲಿ ಪರಿವರ್ತಕಗಳಿವೆ. ಆದರೆ ಅವುಗಳ ಸುತ್ತ ಬೇಲಿ ಇಲ್ಲ, ಇವೆಲ್ಲ ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಸಾರ್ವಜನಿಕರು ಓಡಾಡುವ ಸ್ಥಳಗಳು, ಬೀದಿ ಜಾನುವಾರುಗಳು ಕೂಡ ಸಂಚರಿಸುತ್ತಿರುತ್ತವೆ. ಯಾವುದಕ್ಕೂ ಸುರಕ್ಷತೆ ಚೌಕಟ್ಟು ಇಲ್ಲದಿರುವುದರಿಂದ ಅಪಾಯದ ಸ್ಥಿತಿಯಲ್ಲಿವೆ.
ಪರಿವರ್ತಕದ ಬಳಿ ಹೋದವರು ವಿದ್ಯುತ್ ಪ್ರವಹಿಸಿ ತಂತಿ ತಗುಲಿ ಮೃತಪಟ್ಟ ಉದಾಹರಣೆಗಳಿವೆ. ಜೆಸ್ಕಾಂ ಈ ಬಗ್ಗೆ ಗಮನ ಹರಿಸಬೇಕು. ಪರಿವರ್ತಕಗಳ ಸುತ್ತಲು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜೋತಾಡುವ ತಂತಿ ಮತ್ತು ಹಳೇ ಕಂಬಗಳು ಪರಿವರ್ತಕಗಳದ್ದು ಒಂದು ಸಮಸ್ಯೆಯಾದರೆ ಅಲ್ಲಲ್ಲಿ ಜೋತು ಬಿದ್ದಿರುವ ತಂತಿ ಮತ್ತು ಹಳೆ ಕಂಬಗಳದ್ದು ಇನ್ನೊಂದು ಸಮಸ್ಯೆ.
ವಿವಿಧ ವಾರ್ಡ್‌ಗಳು ಸೇರಿದಂತೆ ಮುಖ್ಯರಸ್ತೆಯಲ್ಲಿ ಆಗಾಗ ಜೋರಾಗಿ ಗಾಳಿಬೀಸಿದಾಗ ತಂತಿಗಳು ಜೋತು ಬೀಳುತ್ತವೆ, ಅಲ್ಲದೆ ಗಾಳಿ ಮಳೆಗೆ ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿ ಅನೇಕಬಾರಿ ಅವಘಡಗಳು ಸಂಭವಿಸಿವೆ. ಜನ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆಗಳು ನಡೆದಿವೆ. ಇನ್ನೂ ಕೆಲ ಕಡೆ ಕಟ್ಟಡಗಳಿಗೆ ಅತ್ಯಂತ ಸಮೀಪದಲ್ಲೇ ತಂತಿಗಳು ಹಾದುಹೋಗಿದ್ದು, ಕೈಗೆಟುಕುವಂತಿವೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ವಿದ್ಯುತ್ ನಿರೋಧಕ ರಬ್ಬರ್ ಹೊಂದಿರುವ ತಂತಿಗಳನ್ನು ಜೆಸ್ಕಾಂ ಅಳವಡಿಸಬೇಕೆಂಬುದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.
ನಗರದಲ್ಲಿರುವ ವಿದ್ಯುತ್ ಪರಿವರ್ತಗಳತ್ತ ತಂತಿಬೇಲಿ
ಅಳವಡಿಸಬೇಕು. ಇಲ್ಲವಾದರೆ ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಜೆಸ್ಕಾಂ ಅಧಿಕಾರಿಗಳೇ ನೇರ ಕಾರಣರಾಗುತ್ತಾರೆ.
ಎಚ್.ಬಿ.ಗಂಗಪ್ಪ, ನಿವಾಸಿ
ನಗರದಲ್ಲಿ ಒಟ್ಟು 60 ಕಡೆ ವಿದ್ಯುತ್ ಪರಿವರ್ತಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಸುರಕ್ಷತೆ ದೃಷ್ಟಿಯಿಂದ ತಂತಿಬೇಲಿ ಅಳವಡಿಸುವ ಕಾರ್ಯವನ್ನು ಶೀಘ್ರವಾಗಿ ಮಾಡಲಾಗುವುದು.
ಶ್ರೀನಿವಾಸ್, ಎಇಇ ಜೆಸ್ಕಾಂ ಇಲಾಖೆ
ಆರ್.ಬಸವರೆಡ್ಡಿ, ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.