ಹದಗೆಟ್ಟ ರಸ್ತೆಯಲ್ಲೇ ಗ್ರಾಮಸ್ಥರ ನಿತ್ಯ ಸಂಚಾರ-ಪರದಾಟ
Team Udayavani, Feb 1, 2020, 12:48 PM IST
ತೆಲಸಂಗ: ಗ್ರಾಮದಿಂದ ವಿಜಯಪುರಕ್ಕೆ ತೆರಳುವ ಹೊನವಾಡ ಕ್ರಾಸ್‌ದ ವರೆಗಿನ ಜೇರ್ವಗಿ ಸಂಕೇಶ್ವರ ರಾಜ್ಯ ಹೆದ್ದಾರಿ ಸೇರುವ ಗ್ರಾಮದ 4 ಕಿ.ಮೀ ರಸ್ತೆ ಸಂಪೂರ್ಣ ಕೆಟ್ಟಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆ ನಿರ್ಮಾಣ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುವುದಲ್ಲದೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 150ಕ್ಕೂ ಹೆಚ್ಚು ಬಸ್‌ಗಳು ಈ ರಸ್ತೆಯ ಮೂಲಕವೇ ಓಡಿಸಲಾಗುತ್ತಿದೆ. 40 ಕಿ.ಮೀ ಓಡಿಸುವುದು ಅಷ್ಟೇ 4 ಕಿ.ಮೀ ರಸ್ತೆ ಕ್ರಮಿಸುವುದು ಅಷ್ಟೆ ಆಗಿದ್ದು, ಅದೆಷ್ಟು ಬಾರಿ ಮನವಿ ಮಾಡಿದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿಲ್ಲ. ತಕ್ಷಣವೇ ಗ್ರಾಮದ ಜನಸಂಪರ್ಕದ ಮುಖ್ಯ ರಸ್ತೆ ಕಾಮಗಾರಿ ಪ್ರಾರಂಭಿಸಿ ವಾಹನ ಓಡಾಟಕ್ಕೆ ಅನುವು ಮಾಡಿಕೊಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಜನರಿಗೆ ತಿಳಿಸಲಾಗುವುದು.
ರಸ್ತೆ ಕೆಟ್ಟಿದ್ದರ ಪರಿಣಾಮ ಸಾರಿಗೆ ಸಂಸ್ಥೆಯ ಬಸ್‌ಗಳು ಗ್ರಾಮದೊಳಕ್ಕೆ ಬಾರದೆ ಹೆದ್ದಾರಿ ಮೂಲಕ ಸಂಚರಿಸುತ್ತಿವೆ. ಇದು ಪ್ರಯಾಣಿಕರು ಹೈರಾಣಾಗುವಂತೆ ಮಾಡಿದೆ. 20 ವರ್ಷಗಳಿಂದ ಈ ಮಾರ್ಗದ ಮೂಲಕ ಖಾಸಗಿ ಬಸ್ ಓಡಿಸದಂತೆ ಗ್ರಾಮಸ್ಥರು ಕೈಗೊಂಡ ನಿರ್ಣಯಕ್ಕೆ ಈಗಲೂ ಬದ್ಧರಾಗಿದ್ದೇವೆ. ಆದರೆ ಈ ಕೆಟ್ಟ ರಸ್ತೆಯಿಂದ ಖಾಸಗಿ ಬಸ್ ಇಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು ಬರುತ್ತಿಲ್ಲ.
ಸೋಮವಾರದೊಳಗಾಗಿ ರಸ್ತೆ ಕಾಮಗಾರಿ ಪ್ರಾರಂಭಿಸದೇ ಇದಲ್ಲಿ ಕೆಟ್ಟ ರಸ್ತೆ ಮೇಲೆ ಉರುಳು ಸೇವೆ ಪ್ರತಿಭಟನೆ ಮಾಡುವ ಮೂಲಕ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಜನರ ಗಮನಸೆಳೆದು ವೈಫಲ್ಯವನ್ನು ಎತ್ತಿತೋರಿಸಲಾಗುವುದು ಎಂದು ಗ್ರಾಮದ ಯುವಕರಾದ ಧರೆಪ್ಪ ಮಾಳಿ, ಬುರಾನ ಅರಟಾಳ, ರಾಜು ಹೊನಕಾಂಬಳೆ, ರಾಜು ಸಾಗರ, ಆಶೀಫ ಮುಜಾವರ, ಚೆನ್ನಪ್ಪ ದಶಮಾ, ಮಹೇಶ ಕುಂಬಾರ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.