ತಾಪಂ ಸಾಮಾನ್ಯ ಸಭೆಗೆ ಬಹಿಷ್ಕಾರ
ಅಧಿಕಾರಿಗಳ ಕೋರಂ ಕೊರತೆಗೆ ಸದಸ್ಯರ ಆಕ್ರೋಶಇನ್ನು ಮುಂದೆ ಗೈರಾದರೆ ಕಠಿಣ ಕ್ರಮದ ಎಚ್ಚರಿಕೆ
Team Udayavani, Feb 1, 2020, 1:32 PM IST
ಶಿಕಾರಿಪುರ: ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ ಸಾಮಾನ್ಯ ಸಭೆಗೆ ಅಧಿ ಕಾರಿಗಳು ಗೈರಾಗಿರುವ ಕಾರಣದಿಂದ ಸಭೆಯನ್ನು ಬಹಿಷ್ಕರಿಸಿದ ಸದಸ್ಯರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ತಾಲೂಕಿನ ವಿವಿಧ ಇಲಾಖೆಗಳ ಅನೇಕ ಉನ್ನತ ಆಡಳಿತ ಅಧಿಕಾರಿಗಳು ಗೈರು ಹಾಜರಾದ ಕಾರಣಕ್ಕೆ ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ತಾಪಂ ಸಭಾಂಗಣದಲ್ಲಿ ನಡೆದಿದೆ. ಬೆಳಗ್ಗೆ 11 ಗಂಟೆಗೆ ಆರಂಭಿಸಬೇಕಿದ್ದ ಸಭೆ 12 ಗಂಟೆಯಾದರೂ ಅಧಿ ಕಾರಿಗಳು ಸಭೆಯಲ್ಲಿ ಹಾಜರಾಗದ ಕಾರಣ ಸಭೆ ತಡವಾಗಿ ಆರಂಭವಾಯಿತು. ಸದಸ್ಯರಾದ ಸುರೇಶ್ ನಾಯ್ಕ, ಜಯಣ್ಣ, ಪರಮೇಶ್ವರಪ್ಪ, ವಿಜಯಲಕ್ಷ್ಮೀ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿರುವ
ಬಿ. ಎಸ್. ಯಡಿಯೂರಪ್ಪ ಅವರ ಕ್ಷೇತ್ರವಾಗಿದ್ದು ತಾಲೂಕಿನ ಸರ್ವತೋಮುಖ ಅಭಿವೃದ್ಧಿ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳಿಗೆ ಅನೇಕ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ತಾಲೂಕಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಭೆ ಕರೆಯಲಾಗುತ್ತದೆ.
ಅಧಿಕಾರಿಗಳು ಗೈರಾಗುವ ಮೂಲಕ ಮುಖ್ಯಮಂತ್ರಿಗಳ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಬಾರದೆ ಇರುವ ಕಾರಣಕ್ಕೆ ತಾಪಂ ಇಒ ಪರಮೇಶ್ವರ್ ಅಧಿಕಾರಿಗಳ ಪರವಾಗಿ ಆಗಮಿಸಿದ ಸಿಬ್ಬಂ ದಿಗಳಿಗೆ ಎಚ್ಚರಿಕೆ ನೀಡಿದರು. ಗಂಭೀರ ಕಾರಣ ಇಲ್ಲದೇ ಸಭೆಗೆ ಗೈರಾಗಿರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಮುಖ್ಯ ಅಧಿಕಾರಿಗಳನ್ನು ಕಳುಹಿಸದೇ ಸಿಬ್ಬಂಧಿಯನ್ನು ಕಳುಹಿಸಿದ ಕೆಲ ಅಧಿ ಕಾರಿಗಳಿಗೂ ಸೂಚನೆ ನೀಡಿದರು. ಇನ್ನು ಮುಂದೆ ಈ ರೀತಿ ಘಟನೆ
ಮರಳು ಕಳಿಸದಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಧ್ಯಕ್ಷ ಶಂಭು ಆರ್. ಕೆ., ಉಪಾಧ್ಯಕ್ಷೆ ಪ್ರೇಮಾ ಲೋಕೇಶ್, ತಾಪಂ ಸದಸ್ಯರಾದ ದಾಕ್ಷಾಯಣಮ್ಮ, ಗಾಯತ್ರಮ್ಮ, ಮಮತಾ, ವಿಜಯಲಕ್ಷ್ಮೀ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.