ಅಧ್ಯಾತ್ಮ ಒಂದು ಜಾತಿ-ಧರ್ಮಕ್ಕೆ ಸೀಮಿತವಲ್ಲ : ರಂಭಾಪುರಿ ಸ್ವಾಮೀಜಿ
Team Udayavani, Feb 1, 2020, 4:46 PM IST
ಲಿಂಗಸುಗೂರು: ಆಧ್ಯಾತ್ಮ ಎಂಬುದು ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತವಲ್ಲ. ಅದು ಇಡೀ ಮಾನವ ಕುಲಕ್ಕೆ ಸೀಮಿತವಾಗಿದೆ ಎಂದು ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಯರಡೋಣಾ ಗ್ರಾಮದ ಸಿದ್ಧರಾಮೇಶ್ವರ ಗುರುಮಠದಲ್ಲಿ ಶುಕ್ರವಾರ ನೂತನ ದೇವಾಲಯ ಲೋಕಾರ್ಪಣೆ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಆಧ್ಯಾತ್ಮ ಎಂಬುದು ಕೆಲವರು ಒಂದೇ ಧರ್ಮಕ್ಕೆ ಸೀಮಿತ ಎಂಬ ಭಾವನೆಯಲ್ಲಿದ್ದಾರೆ. ಪ್ರತಿಯೊಬ್ಬರು ಉತ್ತಮ ಜೀವನ ನಡೆಸಲು ಆಧ್ಯಾತ್ಮ ಅಗತ್ಯವಾಗಿದೆ ಎಂದು ಹೇಳಿದರು. ಆರೋಗ್ಯವಂತ ಸಮಾಜದ ನಿರ್ಮಾಣ ಮಾಡಲು ಪ್ರತಿಯೊಬ್ಬರು ಶಿಕ್ಷಣ, ಆರೋಗ್ಯ, ಆಧ್ಯಾತ್ಮ ಮೂರು ಅಂಶಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಧರ್ಮ, ಜಾತಿ, ಭಾಷೆ, ಪ್ರಾಂತ್ಯದ ಹೆಸರಿನಲ್ಲಿ ಕಲಹಗಳುನಡೆಯುತ್ತಿವೆ. ಇದನ್ನೆಲ್ಲ ಮೀರಿ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ನಾವೆಲ್ಲರೂ ನಡೆದರೆಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಗುರುಮಠದಲ್ಲಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತ ಮಹತ್ವದ ಕೆಲಸ ನಡೆದಿದೆ. ಶ್ರೀಮಠದ ಮುರುಘೇಂದ್ರ ಶಿವಯೋಗಿಗಳು ಹೆಲಿಕಾಪ್ಟರ್‌ನಿಂದ ದೇವಾಲಯಗಳಿಗೆ ಪುಷ್ಟವೃಷ್ಠಿ ಮಾಡಿಸಿದ್ದು ದೊಡ್ಡ ಇತಿಹಾಸ ಹಾಗೂ ಈ ಭಾಗದಲ್ಲಿ ಮೊದಲಾಗಿದೆ ಎಂದು ಹೇಳಿದರು.
ಗುರು ಕೃಪೆಯಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎನ್ನಲು ಶ್ರೀಮಠವೇ ಸಾಕ್ಷಿಯಾಗಿದೆ. ತಮ್ಮ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗುರುವಿನ ಮೇಲಿನ ವಿಶ್ವಾಸ ಗೌರವ ಎತ್ತಿ ತೋರಿಸಿದ್ದಾರೆ. ಮುಂದಿ ದಿನಗಳಲ್ಲಿ ಶ್ರೀಮಠ ಉತ್ತುಂಗ ಸ್ಥಿತಿಗೇರುತ್ತಿದೆ ಎಂದು ಹೇಳಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಅಮರೇಶ್ವರ ಜಾತ್ರಮಹೋತ್ಸವದಲ್ಲಿ ಹೊನ್ನಳ್ಳಿ, ಯರಡೋಣಾ, ದೇವರಭೂಪುರ, ಗುರುಗುಂಟಾ, ಗುಂತಗೋಳ ಗ್ರಾಮಗಳು
ಪ್ರಮುಖ ಪಾತ್ರವಹಿಸುತ್ತಿವೆ. ಯರಡೋಣ ಮುರುಘೇಂದ್ರ ಶಿವಯೋಗಿಗಳು ಹಾಗೂ ಗಜದಂಡ ಶಿವಾಚಾರ್ಯರು ಈ ಭಾಗಕ್ಕೆ ರಡು ಕಣ್ಣು ಇದ್ದಂತೆ. ಧರ್ಮದ
ಕಾರ್ಯಕ್ರಮಗಳನ್ನು ಯಶಸ್ವಿಯಿಂದ ಮುನ್ನಡಿಸುತ್ತಿದ್ದಾರೆ. ದೇವಿ ಆರಾಧನೆ ಎಲ್ಲಿ ಇರುತ್ತಿದೆಯೋ ಅಲ್ಲಿ ಯಾವುದೇ ಸಂಕಷ್ಟ ಇರುವುದಿಲ್ಲ ಎಂದು ಹೇಳಿದರು.
ಈ ಭಾಗ ಮತ್ತುಷ್ಟು ಅಭಿವೃದ್ಧಿಯಾಗಬೇಕಿದೆ. 150ಎ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿದೆ. ಅದರ ಅಭಿವೃದ್ಧಿ ಶೀಘ್ರವೇ ನಡೆಯುವ ವಿಶ್ವಾಸ ಇದೆ. ಅದೇ ಹೈದರಾಬಾದ-ಪಣಜಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು
ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಶ್ರೀಮಠದ ಮುರುಘೇಂದ್ರ ಶಿವಯೋಗಿಗಳು, ಅಮರೇಶ್ವರದ ಗಜದಂಡ ಶಿವಾಚಾರ್ಯರು, ಮಸ್ಕಿ ವರರುದ್ರಮುನಿ ಶಿವಾಚಾರ್ಯರು, ನವಲಕಲ್ಲ ಸೋಮನಾಥ ಶಿವಾಚಾರ್ಯರು, ತುರ್ವಿಹಾಳದ ಅಮರಗುಂಡ ಶಿವಾಚಾರ್ಯರು, ಶಾಸಕರಾದ ಡಿ.ಎಸ್.ಹೂಲಗೇರಿ,
ಅಮರೇಗೌಡ ಬಯ್ನಾಪುರ, ದೊಡ್ಡನಗೌಡ ಲೆಕ್ಕಿಹಾಳ, ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಮುಖಂಡ ಅಮರಗುಂಡಪ್ಪ ಮೇಟಿ, ಶ್ರೀರಾಮಸೇನಾ ಅಧ್ಯಕ್ಷ ರಮಾಕಾಂತದಾದಾ, ಅಮರಯ್ಯಸ್ವಾಮಿ ಜಾಲಿಬೆಂಚಿ, ಡಾ| ಗಂಗಾಧರಯ್ಯ ಶಾಸ್ತ್ರೀ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.