ಕೊರೋನಾ: ತನ್ನ ಪ್ರಜೆಗಳನ್ನು ರಕ್ಷಿಸಲು ಹಲವು ದೇಶಗಳ ಹರಸಾಹಸ: ಮೃತರ ಸಂಖ್ಯೆ 304ಕ್ಕೆ ಏರಿಕೆ
Team Udayavani, Feb 2, 2020, 8:00 AM IST
ನವದೆಹಲಿ: ಕೊರೋನಾ ವೈರಸ್ ನಿಂದ ತನ್ನ ನಾಗರಿಕರನ್ನು ರಕ್ಷಿಸಲು ಭಾರತಸರ್ಕಾರ ಸೇರಿದಂತೆ ಹಲವು ದೇಶಗಳ ಸರ್ಕಾರ ಯತ್ನಿಸುತ್ತಿರುವ ನಡುವೆಯೇ ಈ ಮಹಾಮಾರಿಗೆ ಸಾವನ್ನಪ್ಪಿದವರ ಪ್ರಮಾಣ 304ಕ್ಕೆ ಏರಿಕೆಯಾಗಿದೆ. ಶನಿವಾರ ಒಂದೇ ದಿನ 45 ಜನರು ಅಸುನೀಗಿದ್ದಾರೆ.
ಈಗಾಗಲೇ ಥೈಲ್ಯಾಂಡ್ ನಲ್ಲಿ 14 ಜನರ ಈ ಮಾರಾಣಾಂತಿಕ ಸೋಂಕುವಿಗೆ ತುತ್ತಾಗಿದ್ದರೇ ಹಾಂಕಾಂಗ್ ನಲ್ಲಿ 10 ಜನರು, ಜಪಾನ್ ನಲ್ಲಿ 11, ಅಮೇರಿಕಾ , ತೈವಾನ್ , ಫ್ರಾನ್ಸ್, ಆಸ್ಟ್ರೇಲಿಯಾ ದಲ್ಲಿ ತಲಾ 5 ಜನರು, ಸಿಂಗಾಪೂರ್ , ಸೌತ್ ಕೊರಿಯಾ,ಜರ್ಮನಿ, ಮಲೇಶ್ಯಾ ದಲ್ಲಿ 4 ಜನರು, ಕೆನಾಡದಲ್ಲಿ 3 ಜನರು, ವಿಯೇಟ್ನಾಂ ನಲ್ಲಿ 2 ಜನರು, ನೇಪಾಳ, ಕಾಂಬೋಡಿಯಾ, ಸಂಯುಕ್ತ ಅರಬ್ ಸಂಸ್ಥಾನದಲ್ಲಿ ತಲಾ ಒಬ್ಬರು ಈ ಸೋಂಕುವಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ: ಕೊರೊನಾ ವೈರಸ್ನ ಕೇಂದ್ರ ಸ್ಥಾನ ವುಹಾನ್ನಿಂದ 324 ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. 211 ವಿದ್ಯಾರ್ಥಿ ಗಳು, 110 ವೃತ್ತಿಪರರು ಹಾಗೂ 3 ಮಕ್ಕಳನ್ನು ಹೊತ್ತ ಏರ್ಇಂಡಿಯಾ ವಿಮಾನ ಶನಿವಾರ ಬೆಳಗ್ಗೆ 7.30ಕ್ಕೆ ದಿಲ್ಲಿ ತಲುಪಿತು.
ಮತ್ತೊಂದು ವಿಮಾನವು ದಿಲ್ಲಿಯಿಂದ ವುಹಾನ್ಗೆ ತೆರಳಿದ್ದು, ಇಂದು ಮುಂಜಾನೆ ಕೆಲವು ಭಾರತೀಯರನ್ನು ಕರೆತರಲಿದೆ. ಈಗಾಗಲೇ ದೇಶಕ್ಕೆ ಆಗಮಿಸಿರುವ ಭಾರತೀಯರನ್ನು ಹರಿ ಯಾಣದ ಮಾನೇಸರ್ನಲ್ಲಿ ನಿರ್ಮಿಸಲಾದ 300 ಹಾಸಿಗೆಗಳ ನಿಗಾ ಕೇಂದ್ರದಲ್ಲಿರಿಸಿದ್ದು, ಎರಡು ವಾರ ಅವರು ಅಲ್ಲಿಯೇ ಇರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.