ಆಸಕ್ತಿದಾಯಕ ಕೋರ್ಸ್‌ನಿಂದ ಯಶಸ್ಸು
Team Udayavani, Feb 2, 2020, 10:57 AM IST
ಧಾರವಾಡ: ಹೆಚ್ಚಿನ ಪಾಲಕರು ಅಂಕ ಗಳಿಕೆಗೆ ಮತ್ತು ತಮ್ಮ ಮಕ್ಕಳು ವೈದ್ಯ ಅಥವಾ ಎಂಜಿನಿಯರ್ ಆಗಬೇಕೆನ್ನುತ್ತಾರೆ. ಹಣ ಗಳಿಕೆಯೇ ಮುಖ್ಯವಲ್ಲ. ಹಣವೊಂದನ್ನು ಬಿಟ್ಟು ಆಸಕ್ತಿಗೆ ಮಹತ್ವ ಕೊಟ್ಟು ವಿದ್ಯೆ ಕಲಿತಲ್ಲಿ ಯಶಸ್ಸು ಶತಸ್ಸಿದ್ಧ ಎಂದು ಎಸ್ ಡಿಎಂ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನಕುಮಾರ ಹೇಳಿದರು.
ಡಾ| ಡಿ.ಜಿ. ಶೆಟ್ಟಿ ಎಜುಕೇಷನಲ್ ಸೊಸೈಟಿ ವತಿಯಿಂದ ಜ್ಞಾನದೇಗುಲದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈದ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಇಂದಿನ ಯುವಪೀಳಿಗೆಗೆ ಟೆಕ್ನಾಲಜಿಯು ವರವಾಗಿಯೂ ಶಾಪವಾಗಿಯೂ ಪರಿಣಮಿಸಿದೆ. ಟೆಕ್ನಾಲಜಿಯು ವಿದ್ಯಾರ್ಥಿಗಳನ್ನು ಆಡಳಿತ ಮಾಡದೆ, ವಿದ್ಯಾರ್ಥಿಗಳು ಟೆಕ್ನಾಲಜಿಯನ್ನು ಸದುಪಯೋಗಪಡಿಸಿಕೊಂಡಲ್ಲಿ ಉತ್ತಮ ಸಮಾಜ ಕಟ್ಟಲು ಶ್ರಮಿಸುವಂತೆ ಸಲಹೆ ನೀಡಿದರು.
ಸ್ಪರ್ಧಾಸ್ಪೂರ್ತಿ-2020 ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದ ಸಿ.ಎಸ್. ದ್ವಾರಕನಾಥ ಮಾತನಾಡಿ, ಉದ್ಯೋಗಕ್ಕೆ ಬೇಕಾದಂತಹ ಕೌಶಲಗಳು ಉದ್ಯೋಗಾಕಾಂಕ್ಷಿಯಲ್ಲಿವೆಯೇ ಎಂಬುದು ಮುಖ್ಯ. ವಿದ್ಯಾರ್ಥಿ ಸಮುದಾಯವು ಪದವಿಗಳನ್ನು ಜ್ಞಾನವೃದ್ಧಿಯ ಉದ್ದೇಶದಿಂದ ಮಾಡಬೇಕು. ಈಗಿನ ಯುವಪೀಳಿಗೆಯು ಎಲ್ಲ ಬಗೆಯ ಕೌಶಲಗಳನ್ನು, ಕನಿಷ್ಠ ಮೂರು ನಾಲ್ಕು ಭಾಷಾ ಜ್ಞಾನ ಹೊಂದಿರುವುದು ಅನಿವಾರ್ಯವಾಗಿದೆ ಎಂದರು.
ವಿದ್ಯಾವಿಕಾಸ ಪ್ರಶಸ್ತಿ ಸ್ವೀಕರಿಸಿದ ದಿ ಇನ್ಸ್ ಟಿಟ್ಯೂಟ್ ಕಂಪನಿಯ ಸಿ.ಎಸ್. ನಾಗೇಂದ್ರ ರಾವ್ ಮಾತನಾಡಿ, ಭಾರತೀಯರಲ್ಲಿ ಏನನ್ನಾದರೂ ಸಾಧಿಸುವ ಅದ್ಭುತ ಶಕ್ತಿಯಿದೆ. ವಿದ್ಯಾರ್ಥಿಗಳಲ್ಲಿ ವಯೋಮಾನಕ್ಕೆ ಆತ್ಮವಿಶ್ವಾಸ, ಹುಮ್ಮಸ್ಸು, ವೇಗ, ಯೌವನಾವಸ್ಥೆಯ ನಂತರ ತಗ್ಗುತ್ತದೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಗುರಿ ಸಾಧನೆ ಹಾದಿಯಲ್ಲಿ ಸಾಗುವುದು ಉತ್ತಮ ಎಂದು ಹೇಳಿದರು.
ಉದ್ಯಮಿ ಸತೀಶಚಂದ್ರ ಶೆಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸಮಾಜದ ಎಲ್ಲರೂ ಪೋಷಕರೆ. ಶಿಕ್ಷಣ ಕ್ಷೇತ್ರವು ಎಲ್ಲರಿಂದಲೂ ಸಹಕಾರ, ಸಹಾಯ ಬಯಸುತ್ತದೆ. ಇದರಿಂದ ಭಾವೀ ಪ್ರಜೆಗಳ, ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದರು. ಆರ್.ಎಸ್. ಶೆಟ್ಟಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ| ಡಿ.ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ|ಎಸ್.ಎಂ. ಸಾಲಿಮಠ ನಿರೂಪಿಸಿದರು. ವಿವಿಧ ಸ ರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಪ್ರೊ|ಎಸ್.ಎನ್. ಗುಡಿ ಹಾಗೂ ಆರತಿ ಕುಲಕರ್ಣಿ ನಡೆಸಿಕೊಟ್ಟರು. ಪ್ರೊ| ಎನ್.ಎಫ್. ನದಾಫ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.