ಕವಿನಹಟ್ಟಿ-ಮಣಗುತ್ತಿಯಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಚಾಲನೆ
Team Udayavani, Feb 2, 2020, 12:38 PM IST
ಯಮಕನಮರಡಿ: ಪ್ರಸ್ತುತ್ತ ವರ್ಷದಲ್ಲಿ ಕವಿನಹಟ್ಟಿ ಹಾಗೂ ಮಣಗುತ್ತಿ ಗ್ರಾಮದ ಹೊರವಲಯದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಹೊಸ ಕೆರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ಹೊರವಲಯದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ 2 ಕೋಟಿ ರೂ.ಗಳಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ಮಾರ್ಚ್ ಅಂತ್ಯದಲ್ಲಿ ಈ ಎರಡು ಕೆರೆಗಳ ಕಾಮಗಾರಿ ಮುಗಿಸಿ ಸುಮಾರು 300 ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಗ್ರಾಮೀಣ ಭಾಗದ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಇದು ಅಲ್ಲದೇ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಮಾಡಲು ಹಗಳಿರುಳು ಶ್ರಮಿಸುತ್ತಾ ಜನರ ಪ್ರೀತಿ, ವಿಶ್ವಾಸ ಸದಾ ಇರಲಿ ಎಂದರು.
ಈ ಸಂದರ್ಭದಲ್ಲಿ ದಡ್ಡಿ ಜಿಪಂ ಸದಸ್ಯೆ ಮನಿಷಾ ಪಾಟೀಲ, ಮಣಗುತ್ತಿ ತಾಪಂ ಸದಸ್ಯ ಸುರೇಶ ಬೆಣ್ಣಿ, ರಮೇಶ ಪಾಟೀಲ, ಪ್ರಮೋದ ರಗಶೆಟ್ಟಿ, ಬಸವರಾಜ ದೇಸಾಯಿ, ಅಶೋಕ ಸಂಸುದ್ದಿ, ವಿಠಲ ಉಕ್ಕೂಜಿ, ಮಹಾನಿಂಗ ಶಿರಗುಪ್ಪಿ, ಎಂ.ಎ.ಪಾಟೀಲ, ಆರ್.ಕೆ. ದೇಸಾಯಿ, ಈರಣ್ಣಾ ದೇಸಾಯಿ, ದಯಾನಂದ ಪಾಟೀಲ, ಸುನೀಲ ಹುಕ್ಕೇರಿ, ನೀರಾವರಿ ಇಲಾಖೆಯ ಅಭಿಯಂತ ಸಂಜೇಯ ಮಾಳಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.