ಗಮನ ಸೆಳೆದ ಚಾಕ್‌ಪೀಸ್ ಕಲಾಕೃತಿ!
Team Udayavani, Feb 2, 2020, 12:47 PM IST
ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರದಿಂದ ಆರಂಭವಾದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಾಕ್‌ಪೀಸ್‌ನಲ್ಲಿ ಅರಳಿದ ಹಲವಾರು ಸೂಕ್ಷ್ಮಕಲಾಕೃತಿಗಳು (ಮೈಕ್ರೋ ಆರ್ಟ್ಸ್) ಗಮನ ಸೆಳೆದವು.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಾಗಲೂರು-ಹೊಸಳ್ಳಿ ಗ್ರಾಮದ ರಾಜಶೇಖರ್ ಆಚಾರ್ ಅವರು ಚಾಕ್‌ಪೀಸ್‌ನಲ್ಲಿ ಸೂಕ್ಷ್ಮ ಕಲಾಕೃತಿಗಳನ್ನು ಕೆತ್ತಿದ್ದಾರೆ. ಕೇವಲ ಪಿಯುಸಿವರೆಗಷ್ಟೇ ವ್ಯಾಸಂಗ ಮಾಡಿರುವ ರಾಜಶೇಖರ್ ಆಚಾರ್ ಅವರು ಕಳೆದ 15 ವರ್ಷಗಳ ಹಿಂದೆ ಡಿಡಿ ಚಂದನವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮವೊಂದರಿಂದ ಪ್ರೇರಣೆಯಾಗಿದ್ದು, ಇದನ್ನು ನಾನೇಕೆ ಪ್ರಯತ್ನಿಸಬಾರದು ಎಂದು ಬಿಡುವಿನ ವೇಳೆಯಲ್ಲೆಲ್ಲಾ ಚಾಕ್‌ಪೀಸ್ ಮೇಲೆ ಸೂಕ್ಷ್ಮವಾದ ಕಲಾಕೃತಿಗಳನ್ನು ಕೆತ್ತಿದ್ದಾರೆ.
ಕಳೆದ 15 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಜಶೇಖರ್ ಆಚಾರ್ ಅವರು, ಈವರೆಗೆ ಚಾಕ್‌ಪೀಸ್‌ಗಳ ಮೇಲೆ ಮದರ್ ಥೆರೆಸಾ, ಸಾಯಿಬಾಬಾ, ರವೀಂದ್ರನಾಥ್ ಟ್ಯಾಗೋರ್, ಗೊಮ್ಮಟೇಶ್ವರ, ಶಿಲಾಬಾಲಕಿ, ಶಿಲಾ ಕಂಬಗಳು, ಗಣೇಶ ಮೂರ್ತಿ, ಕನ್ನಡ ಮತ್ತು ತೆಲುಗು, ಆಂಗ್ಲಭಾಷೆಯ ವರ್ಣಮಾಲೆಗಳು ಈತನ ಕೈಯಲ್ಲಿ ಅರಳಿದ್ದು, ಸಮಮೇಳನದಲ್ಲಿ ಗಮನ ಸೆಳೆಯುತ್ತಿವೆ. ಈ ಹಿಂದೆ 15ನೇ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನದಲ್ಲಿ ಈ ಸೂಕ್ಷ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅದಾದ ಬಳಿಕ ಇದೀಗ 21ನೇ ಸಮ್ಮೇಳನದಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರಿಂದ ಯಾವುದೇ ಆದಾಯವನ್ನು ನಿರೀಕ್ಷಿಸದ ರಾಜಶೇಖರ್, ಸದ್ಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.