ಅರಣ್ಯಅತಿಕ್ರಮಣದಾರರ ಪ್ರತಿಭಟನೆ
Team Udayavani, Feb 2, 2020, 3:49 PM IST
ಅಂಕೋಲಾ: ಪಾರಂಪರಿಕ ಅರಣ್ಯ ವಾಸಿಗಳು ಜನವಸತಿ ಪ್ರದೇಶ ಇರುವುದರ ಆಧಾರದ ಮೇಲೆ ನಮಗೆ ಹಕ್ಕನ್ನು ನೀಡಬೇಕು. ಕಾನೂನು ನಮ್ಮ ಪರವಾಗಿದೆ ಅನುಷ್ಠಾನಕ್ಕೆ ತರುವ ಇಚ್ಛಾಶಕ್ಕಿ ಸರಕಾರಕ್ಕೆ ಇಲ್ಲ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ತಾಲೂಕಿನ ಅರಣ್ಯ ಅತಿಕ್ರಮಣ ಹೋರಾಟಗಾರರ ಪ್ರತಿಭಟನೆ ರ್ಯಾಲಿ ನಡೆಸಿ ತಹಶೀಲ್ದಾರ್ ಎನ್.ಜಿ. ಗುನಗಾರಿಗೆ ಮನವಿ ಸಲ್ಲಿಸಿ ಮಾತನಾಡಿ ಇಷ್ಟು ವರ್ಷ ನಮಗೆ ಮನೆ ನಂಬರ್, ಕರ ವಸೂಲಾತಿಯೊಂದಿಗೆ ಎಲ್ಲಾ ಮೂಲ ಸೌಕರ್ಯ ನೀಡಿ, ಈಗ ಅರ್ಜಿ ತಿರಸ್ಕರಿಸದರೆ ನಾವು ಎಲ್ಲಿ ಹೋಗಬೇಕು? ನಮ್ಮಶಾಸಕರು, ಎಂ.ಪಿ ಎಲ್ಲಿದ್ದಿರಿ? ಅರಣ್ಯವಾಸಿಗಳು ಆರ್ಥಿಕವಾಗಿ ತೊಂದರೆಯಲ್ಲಿ ಇದ್ದಾರೆ. ಜಿಲ್ಲೆಯಾದ್ಯಂತ 50 ಸಾವಿರ ಅರಣ್ಯ ವಾಸಿಗಳಿಂದ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇವೆ. ಅರಣ್ಯ ಹಕ್ಕು ಕಾಯಿದೆ ಅತಿಕ್ರಮಣದಾರರ ಪರವಾಗಿದೆ ಎಂದರು.ಅರಣ್ಯ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಜಿ.ಎಂ ಶೆಟ್ಟಿ ಮಾತನಾಡಿ ಅರಣ್ಯ ವಾಸಿಗಳು ತಮ್ಮ ಹಕ್ಕಿಗಾಗಿ ಅನೇಕ ವರ್ಷಗಳಿಂದ ಹೋರಟ ಮಾಡುತ್ತಾ ಬಂದಿದ್ದಾರೆ. ಅನೇಕ ವರ್ಷಗಳಿಂದ ತಮ್ಮ ಹಕ್ಕಿಗಾಗಿ ಸರಕಾರಕ್ಕೆಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ ಎಂದರು. ಜಿಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ, ತಾಪಂ ಅಧ್ಯಕ್ಷೆ ಸುಜಾತಾ ಗಾಂವ್ಕರ್, ಹೋರಾಟ ಸಮಿತಿ ತಾಲೂಕಾಧ್ಯಕ್ಷ ರಮಾನಂದ ನಾಯಕ ಅಚಿವೆ, ವಕೀಲರಾದ ಉಮೇಶ ನಾಯ್ಕ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಪಾಂಡುರಂಗ ಗೌಡ, ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಬಿ.ಡಿ ನಾಯ್ಕ, ವಕೀಲ ವಾಸು ನಾಯಕ, ಪುರಸಭೆ ಸದಸ್ಯ ಅಶೋಕ ಶೇಡಗೇರಿ, ಮಂಜುಳಾ ವೆರ್ಣೇಕರ್, ಶೇಟಗೇರಿ ಗ್ರಾಪಂ ಸದಸ್ಯರಾದ ಮಂಜುನಾಥ ನಾಯಕ ಕಣಗಿಲ್, ಪ್ರದೀಪ ನಾಯಕ ವಾಸರೆ, ಗೊಂವಿಂದ್ರಾಯ ನಾಯಕ, ರಾಜೇಶ ಮಿತ್ರಾ ನಾಯ್ಕ, ವಿಜಯ ಪಿಳ್ಳೆ, ರಾಮ ಹರಿಕಂತ್ರ ಕಣಗಿಲ್, ವೆಂಕಟರಮಣ ಅಂಬಿಗ, ಲಕ್ಷ್ಮಿ ಗೌಡ, ಶೋಭಾ ಗೌಡ, ಮಂಕಾಳಿ ಗೌಡ, ಆಶ್ಮಾ ಶೇಖ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.