ನೈಸರ್ಗಿಕ ವಿಕೋಪ ವಿಶ್ವ ಬೊಕ್ಕಸಕ್ಕೆ 16.5ಲ.ಕೋ. ರೂ. ನಷ್ಟ
Team Udayavani, Feb 3, 2020, 6:50 AM IST
ನೈಸರ್ಗಿಕ ವಿಪತ್ತು ಮತ್ತು ಮಾನವ-ನಿರ್ಮಿತ ವಿಪತ್ತುಗಳಿಂದ ಜಾಗತಿಕವಾಗಿ ಆರ್ಥಿಕ ಕ್ಷೇತ್ರಕ್ಕೆ 16.5 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು 2020ರ ಹವಾಮಾನ ಅಧ್ಯಯನ ವರದಿ ಹೇಳಿದೆ. 2019ನೇ ಇಸವಿ ಹಣದುಬ್ಬರದ ದೃಷ್ಟಿಯಿಂದ ಹೇಳುವುದಾದರೆ 8ನೇ ಅತಿ ದುಬಾರಿ ವರ್ಷವಾಗಿದೆ. ಈ ಹಿನ್ನೆಲೆ ವಿಶ್ವ ಮತ್ತು ರಾಷ್ಟ್ರ ಮಟ್ಟದಲ್ಲಿ ಉಂಟಾದ ನೈಸರ್ಗಿಕ ವಿಪತ್ತು ಹಾಗೂ ಅದರಿಂದ ಆದ ನಷ್ಟ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
409 ನೈಸರ್ಗಿಕ ವಿಕೋಪ ಘಟನೆ
2019ರಲ್ಲಿ ವಿಶ್ವಾದ್ಯಂತ ಒಟ್ಟು 409 ನೈಸರ್ಗಿಕ ವಿಕೋಪ ಘಟನೆ ಗಳು ನಡೆದಿವೆ. ಏಷ್ಯನ್ ಪೆಸಿಫಿಕ್ ಪ್ರದೇಶ ಅನುಭವಿಸಿದ ಅತಿದೊಡ್ಡ ಸಂಖ್ಯೆಯ ನೈಸರ್ಗಿಕ ವಿಕೋಪ ಗಳಿಗೆ ಮತ್ತು ಅಧಿಕ ಮಟ್ಟದ ನಷ್ಟಕ್ಕೆ ಈ ವರ್ಷ ಸಾಕ್ಷಿಯಾಗಿದೆ.
15ರಷ್ಟು ಹೆಚ್ಚಳ
2018ರಲ್ಲಿ ಒಟ್ಟು 394 ನೈಸರ್ಗಿಕ ವಿಕೋಪ ಘಟನೆಗಳು ನಡೆದಿದ್ದು, 2019ಕ್ಕೆ ಇದರ ಪ್ರಮಾಣದಲ್ಲಿ 15 ಪ್ರಕರಣಗಳಷ್ಟು ಹೆಚ್ಚಳವಾಗಿದೆ.
ಶೇ.17ರಷ್ಟು
ಹವಾಮಾನ ಸಂಬಂಧಿತ ವಿಪತ್ತುಗಳಿಂದ ಆದ ನಷ್ಟ 21ನೇ ಶತಮಾನದ ಸರಾಸರಿಗಿಂತ ಶೇ.17ರಷ್ಟು ಹೆಚ್ಚು. ಅಂದರೆ 16.40 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಶೇ. 60ರಷ್ಟು ಹೆಚ್ಚಳ
ದಶಕಗಳ ಬಳಿಕ ಭೂಮಿ ಮತ್ತು ಹವಾಮಾನಕ್ಕೆ ಸಂಬಂಧಿಸಿದ ವಿಪತ್ತುಗಳು ಶೇ.60 ಹೆಚ್ಚಾ ಗಿವೆ. ದುಬಾರಿ ನೈಸರ್ಗಿಕ ವಿಕೋಪ ಕಳೆದ ವರ್ಷ ಭಾರತ, ಬಾಂಗ್ಲಾ ದೇಶದ ಮತ್ತು ಒಡಿಶಾದಲ್ಲಿ ಘಟಿಸಿದ ಫಾನಿ ಚಂಡಮಾರುತ ವಿಶ್ವದ ಹತ್ತನೇ ಅತ್ಯಂತ ದುಬಾರಿ ನೈಸರ್ಗಿಕ ವಿಕೋಪವಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.
ದೇಶದ ಕಥೆ ಏನು
2019ನೇ ಸಾಲಿನಲ್ಲಿ ಒಟ್ಟು 13 ನೈಸರ್ಗಿಕ ವಿಕೋಪ ಘಟನೆಗಳು ನಡೆದಿವೆ.
1,750 ಸಾವು: 2019ರಲ್ಲಿ ಮಾನ್ಸೂನ್ ಪ್ರವಾಹದಿಂದ 1,750 ಸಾವು ಸಂಭವಿಸಿದೆ.
72 ಸಾವಿರ ಕೋಟಿ ರೂ. ದೇಶದಲ್ಲಿ ಘಟಿಸಿದ ಪ್ರಕೃತಿ ವಿಕೋಪಗಳಿಂದ 72 ಸಾವಿರ ಕೋಟಿ ರೂ. ನಷ್ಟವಾಗಿದೆ.
ಇವುಗಳಿಂದ ಹೆಚ್ಚು
3 ವರ್ಷಗಳ ನೈಸರ್ಗಿಕ ವಿಕೋಪಗಳ ಪೈಕಿ ಸುಂಟರಗಾಳಿ, ನೆರೆ ಮತ್ತು ಚಂಡಮಾರುತದಿಂದ ಅತೀ ಹೆಚ್ಚು ನಷ್ಟವಾಗಿದ್ದು, 39 ಬಿಲಿಯನ್ ಡಾಲರ್‌ನಷ್ಟು ಚಂಡಮಾರುತದಿಂದ ಮತ್ತು 15 ಬಿಲಿಯನ್ ಡಾಲರ್‌ನಷ್ಟು ಪ್ರವಾಹದಿಂದ ನಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.