ಕಟೀಲಿನಲ್ಲಿ ಅನುರಣಿಸಿದ ಸರ್ವ ಮಂಗಲ ಮಾಂಗಲ್ಯೇ ಮಂತ್ರ
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಕೋಟಿ ಜಪಯಜ್ಞ
Team Udayavani, Feb 3, 2020, 1:26 AM IST
ಕಟೀಲು: ಮಾರ್ಕಂಡೇಯ ಪುರಾಣದಲ್ಲಿ ಉದ್ಧರಿಸಲ್ಪಟ್ಟ ದೇವಿ ಮಹಾತೆ¾ಯ ಸ್ತುತಿ ಶ್ಲೋಕವನ್ನು ಭಕ್ತರು ಕೋಟಿ ಸಂಖ್ಯೆಯಲ್ಲಿ ಜಪಿಸುವ ಕೋಟಿ ಜಪಯಜ್ಞದ ಸಮಾರೋಪವು ಕಟೀಲು ಕ್ಷೇತ್ರದ ಭ್ರಾಮರೀ ವನದಲ್ಲಿ ವೈದಿಕ ವಿಧಿವಿಧಾನಗಳಿಂದ ಜರಗಿತು.
ಕಟೀಲು ದುರ್ಗಾಪರಮೇಶ್ವರೀ ಬ್ರಹ್ಮಕ ಲ ಶೋತ್ಸವ ಸಮಿತಿಯ ಕೋಟಿ ಜಪಯಜ್ಞದ ಸಂಕಲ್ಪದಂತೆ ಕಳೆದ ಡಿ. 15ರಂದು ಕೋಟಿ ಜಪಯಜ್ಞವನ್ನು ಆರಂಭಿ ಸಲಾಗಿತ್ತು. ಮುಂಬಯಿ, ಚೆನ್ನೈ, ಬೆಂಗಳೂರು ಸಹಿತ ವಿವಿಧ ಜಿಲ್ಲೆಗಳಿಂದ ಸುಮಾರು 30 ಸಾವಿರಕ್ಕೂ ಅಧಿಕ ಜನರು ಹೆಸ ರನ್ನು ನೋಂದಾಯಿ ಸಿಕೊಂಡಿದ್ದರು. ರವಿ ವಾರ ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿ ನಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಈ ಕೋಟಿ ಜಪದಲ್ಲಿ ಭಾಗಿಯಾದರು.
ವಿವಿಧ ವೈದಿಕ ಕಾರ್ಯಗಳು
ದೇವ ಸ್ಥಾನದ ಬ್ರಹ್ಮಕಲಶೋತ್ಸವದ ಅಂಗ ವಾಗಿ ರವಿವಾರ ಬೆಳಗ್ಗೆ 7ಗಂಟೆಗೆ ತ್ರಿಕಾಲ ಪೂಜೆ, ಭ್ರಾಮರೀ ವನದಲ್ಲಿ ಬೆಳಗ್ಗೆ ಯಿಂದಲೇ ಸುಮಾರು 80 ಕ್ಕೂ ಅಧಿಕ ಪುರೋಹಿತರಿಂದ ಭ್ರಾಮರೀ ವನದಲ್ಲಿ ನವಾಕ್ಷರಿಯಾಗ, ಸಹಸ್ರನಾರಿಧೀ ಕೇಳ ಗಣಯಾಗ, ಸಹಸ್ರಚಂಡಿ ಕಾಸಪ್ತ ಶತೀಪಾರಾಯಣ, ಕುಮಾರಿ ಪೂಜೆ, ಸಹಸ್ರಚಂಡಿಕಾಯಾಗ ಅಗ್ನಿ ಜನನ, ಕೋಟಿ ಜಪಯಜ್ಞ ಪರಿಸಮಾಪ್ತಿ ಜರಗಿದವು.
ರವಿವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ಸುಮಾರು ವಿವಿಧ 8 ಕಡೆಗಳಲ್ಲಿ ಕ್ಷೇತ್ರದಲ್ಲಿ ಕೋಟಿ ಜಪಮಂತ್ರವನ್ನು ಪಠಿಸಲಾಯಿತು. ಭ್ರಾಮರೀ ವನದಲ್ಲಿ ಕೌಂಟರ್‌ನಲ್ಲಿ ಕುಂಕುಮ ಪಡೆದು ಮಂತ್ರ ಪಠನ ಮಾಡಿ ಭ್ರಾಮರೀ ವನದಲ್ಲಿ ಕುಂಕುಮ ನೀಡಿ ಬಳಿಕ ಪ್ರಸಾದ ಪಡೆದರು.
ಹರಿದುಬಂದ ಭಕ್ತಸಾಗರ
ಕೋಟಿಜಪ ಯಜ್ಞದ ಪ್ರಯುಕ್ತವಾಗಿ ಕ್ಷೇತ್ರಕ್ಕೆ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರವಿವಾರ ರಜೆಯ ದಿನವಾದ್ದರಿಂದ ಕ್ಷೇತ್ರವಿಡೀ ಜ ಜನಸಂದಣಿಯಿಂದ ಕೂಡಿತ್ತು. ಭೋಜನಶಾಲೆಯಲ್ಲಿ ಲಕ್ಷಾಂತರ ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಬೆಳಗ್ಗೆ ಉಪಾಹಾರಕ್ಕೆ ಉಪ್ಪಿಟ್ಟು ಅವಲಕ್ಕಿ, ಬಾಳೆಹಣ್ಣು, ಲಡ್ಡು, ಮಜ್ಜಿಗೆ ಮಧ್ಯಾಹ್ನ ಮಹಾ ಅನ್ನಸಂತರ್ಪಣೆಗೆ ಸುವರ್ಣ ಗಡ್ಡೆ ಪಲ್ಯ, ಕ್ಯಾಬೇಜ್ ಪಲ್ಯ, ಸೌತೆಕಾಯಿ ಸಾಂಬಾರು, ಬೆಳ್ತಿಗೆ ಅಕ್ಕಿ ಪಾಯಸ, ಲಡ್ಡು ಸ್ವೀಕರಿಸಿದರು. ರವಿವಾರ ಲಕ್ಷಾಂತರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರಿಂದಾಗಿ ಸಂಚಾರ ದಟ್ಟಣೆ ಕಂಡುಬಂತು. ಸುಮಾರು ವಿವಿಧ 16ಕಡೆಗಳಲ್ಲಿ ಸುವ್ಯವಸ್ಥಿತ ಪಾರ್ಕಿಂಗ್ ಮಾಡಲಾಗಿತ್ತು.
ಸಭಾ ಕಾರ್ಯಕ್ರಮ
ರಾತ್ರಿ 7ರಿಂದ ಕಟೀಲು ಆರೂ ಮೇಳಗಳಿಂದ ಯಕ್ಷಗಾನ ಶ್ರೀಕೃಷ್ಣಾರ್ಪಣ. ದಿನಂಪ್ರತಿ ಸಂಜೆ ಗಂಟೆ 4.45ರಿಂದ 5.00ರ ತನಕ ವಿದ್ವಾನ್ ಪಂಜ ಭಾಸ್ಕರ ಭಟ್ ಅವರಿಂದ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳ ನ್ನೋಟ ಮುನ್ನೋಟ ಕಾರ್ಯಕ್ರಮ ನಡೆಯಲಿದೆ.
ಇಂದಿನ ಕಾರ್ಯಕ್ರಮ
ಕಟೀಲು ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ 7ರಿಂದ ಭ್ರಾಮರೀವನದಲ್ಲಿ ಸಹಸ್ರಚಂಡಿಕಾಯಾಗ ಪ್ರಾರಂಭ, 11-30ಕ್ಕೆ ಪೂರ್ಣಾಹುತಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಬೆಳಗ್ಗೆ 9ರಿಂದ ಮಂಗಳವಾದ್ಯ ನಾದಸ್ವರ, ಬಾಲ ಮುರುಗನ್ ಶ್ರೀಲಂಕಾ – ಕೆ.ಜಿ. ಬಾಲಸುಂದರಂ ತವಿಲ್ ಅವರಿಂದ. ಬೆಳಗ್ಗೆ 11 ರಿಂದ ಶ್ರಿ ಈಶ್ವರದಾಸ ಕೊಪ್ಪೇಸರಅವರಿಂದ ಹರಿಕಥೆ/ವಾಚನ ಪ್ರವಚನ. ಮಧ್ಯಾಹ್ನ 1ರಿಂದ ವಿದುಷಿ ಪೂರ್ಣಿಮಾ ಭರತ್ ಶೆಟ್ಟಿ ಮತ್ತು ಬಳಗ, ನಟರಾಜ ನೃತ್ಯನಿಕೇತನ, ಮೂಡುಬಿದಿರೆ ಅವರಿಂದ ಭರತನಾಟ್ಯ. ಮಧ್ಯಾಹ್ನ 3 ರಿಂದ ಸುರಪುರದ ಆನಂದದಾಸರು ಅವರಿಂದ ದಾಸರೆಂದರೆ ಸಂಪ್ರವಚನ.
ಹಾಡುಗಾರಿಕೆ: ವಿ| ಅಭಿಷೇಕ್ ಎನ್.ಎಸ್. ಪ್ರಸ್ತುತಿ:ಲಕ್ಷ್ಮೀನಾರಾಯಣ ಭಟ್.
ಇಂದು ಸಹಸ್ರ ಚಂಡಿಕಾಯಾಗ
ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ಭ್ರಾಮರೀವನದಲ್ಲಿ ವೈದಿಕ ವಿಧಿವಿಧಾನಗಳಿಂದ ಸಹಸ್ರಚಂಡಿಕಾಯಾಗ ನಡೆಯಲಿದೆ.
ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಮಹಾಮಾರಿಗಳು ಉಂಟಾದಾಗ, ರಾಜ ಕ್ಷೊàಭೆ ಯಾದಾಗ, ರಾಜನಿಗೆ ವಿಪತ್ತು ಬಂದಾಗ, ದೇಶದಲ್ಲಿ ವಿಪ್ಲವ ಬಂದಾಗ, ವಂಶಕ್ಷಯದ ಲಕ್ಷಣ ಕಂಡುಬಂದಾಗ, ಯುದ್ಧಭೀತಿಗಳು ಪರಾಜಯದ ಭೀತಿಗಳು ಬಂದಾಗ ಸಹಸ್ರ ಚಂಡಿಕಾ ಯಾಗ ಮಾಡಬೇಕೆಂದು ಶಾಸ್ತ್ರಗಳು ತಿಳಿಸಿವೆ.
ದೇವೀ ಮಹಾತ್ಮೆ, ಸಪ್ತಶತಿ ಪಾರಾಯಣವನ್ನು ಸಾವಿರ ಬಾರಿ ಹೇಳುವುದು ಇದರ ದಶಾಂಶ ಅಂದರೆ ನೂರು ಸಲ ಹೋಮ ತರ್ಪಣ ನಡೆಯಲಿದೆ. ಹದಿನೆಂಟು ಕ್ವಿಂಟಲ್‌ನಷ್ಟು ಪರಮಾನ್ನ ಹೋಮಿಸಲ್ಪಡುತ್ತದೆ. ಇದರಲ್ಲಿ ಪರಿವಾರವಾಗಿ ಗಣಪತಿ, ನವಗ್ರ ಹಗಳು, ಯೋಗಿನಿ ದೇವತೆಗಳಿಗೂ ಹೋಮ ನಡೆಯುತ್ತವೆ. ಇದರ ಸಲುವಾಗಿ ಗಣಪತಿಯ ಆರಾಧನೆ ಅಂಗವಾಗಿ ಸಹಸ್ರ ನಾರೀ ಕೇಳ ಗಣಯಾಗ, ಮೃತ್ಯುಂಜಯ ಯಾಗ, ನವಗ್ರಹ ಯಾಗ ನಡೆಯಲಿದೆ. ಒಂದು ಕುಂಡದಲ್ಲಿ ಹತ್ತು ಮಂದಿ ಹೋಮ ಮಾಡಲಿದ್ದು, ಒಂದು ಸಾವಿರ ಸಲ ಪಾರಾಯಣ ಮಾಡಲಿದ್ದಾರೆ.
ಕುಮಾರಿ ಪೂಜೆ, ಸುವಾಸಿನಿ ಪೂಜೆ ನಡೆಯಲಿದ್ದು, ಒಟ್ಟು ಹತ್ತು ಕುಂಡಗಳಲ್ಲಿ ನೂರು ಮಂದಿ ಋತ್ವಿಜರು ಹೋಮ ನಡೆಸಲಿದ್ದಾರೆ.
ಸಪ್ತಶತಿಯಲ್ಲಿ ಉಲ್ಲೇಖೀತವಾದ ಭ್ರಾಮರೀ ರೂಪದ ದೇವೀ ಸಾಕ್ಷಾತ್ಕಾರ ಸ್ವಯಂಭೂ ಚೈತನ್ಯ ದಿಂದ ಕಟೀಲು ಕ್ಷೇತ್ರದಲ್ಲಿ ಆಗಿದೆ. ಹಾಗಾಗಿ ಇಲ್ಲಿ ನಡೆಯಲಿರುವ ಸಹಸ್ರ ಚಂಡಿಕಯಾಗಕ್ಕೆ ಹೆಚ್ಚು ಮಹತ್ವ ಇದೆ ಎಂದು ತಿಳಿಯಬಹುದು.
ಯಾಗದಿಂದ ಸಂಪೂರ್ಣ ಫಲ
ಶ್ರೀದೇವಿಯನ್ನು ಬೆಳಗ್ಗೆ ವಿಧಿವತ್ತಾಗಿ ಪೂಜಿಸಿ, ರಾತ್ರಿ ನಡೆಯಲಿರುವ ಯಕ್ಷಗಾನವನ್ನು ನೋಡಿದರೆ ಯಾಗದ ಸಂಪೂರ್ಣ ಫಲ ಸಿಗುತ್ತದೆ ಎಂಬ ಮಾತಿದೆ. ಲೋಕಕ್ಕೆ ಬಂದ ಮಹಾಮಾರಿಯನ್ನು ಪ್ರತಿಕೃತಿಗೆ ಆವಾಹಿಸಿ, ಅದರ ಬಲಿಯನ್ನು ನೀಡಿ ಲೋಕದಿಂದ ಇಲ್ಲವಾಗಿಸುವ ಕಾರ್ಯವೂ ಈ ಮೂಲಕ ನಡೆಯಲಿದೆ.
-ವೇ| ಮೂ| ದೇವಿಕುಮಾರ ಆಸ್ರಣ್ಣ, ಅರ್ಚಕರು
ಶ್ರೀ ಕ್ಷೇತ್ರ ಕಟೀಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.