ಹಳೆಯ ಹಳಿಗೆ ಬಂದ ಈರುಳ್ಳಿ ದರ
Team Udayavani, Feb 3, 2020, 2:03 AM IST
ಮಂಗಳೂರು: ಕಳೆದ ಸುಮಾರು 5 ತಿಂಗಳ ಅವಧಿಯಲ್ಲಿ ಹಲವಾರು ಏರಿಳಿತಗಳನ್ನು ಕಂಡು, ಗೃಹಿಣಿಯರ ಕಣ್ಣಲ್ಲಿ ನೀರು ಬರಿಸಿದ್ದ ಈರುಳ್ಳಿ ದರವು ಇದೀಗ ಯಥಾಸ್ಥಿತಿಗೆ ಬಂದಿದೆ.
2019ರ ಆಗಸ್ಟ್ ತಿಂಗಳಲ್ಲಿ ಈರುಳ್ಳಿ ದರ 30- 35 ರೂ. ಇದ್ದು, ಈಗ ಅದೇ ಹಂತದ ದರಕ್ಕೆ ಇಳಿಕೆಯಾಗಿದೆ. ಫೆ. 2ರಂದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಈರುಳ್ಳಿ ದರ ಕೆ.ಜಿ.ಗೆ 36 ರೂ. ಇತ್ತು.
ಹೊಸ ಈರುಳ್ಳಿ ಇದೀಗ ಧಾರಾಳವಾಗಿ ಆವಕವಾಗುತ್ತಿದ್ದು, ಇದು ಬೆಲೆ ಇಳಿಕೆಗೆ ಕಾರಣ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಜುಲೈ-ಆಗಸ್ಟ್ ತಿಂಗಳಿನಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಮಹಾ ಮಳೆ ಮತ್ತು ನೆರೆ ಪರಿಸ್ಥಿತಿಯಿಂದಾಗಿ ಈರುಳ್ಳಿ ಕೃಷಿ ನಾಶವಾಗಿದ್ದರಿಂದ ಈರುಳ್ಳಿ ಬೆಲೆ ದಿಢೀರನೆ ಏರಿಕೆ ಆಗಿತ್ತು. ಕೆಲವರು ಅಕ್ರಮ ದಾಸ್ತಾನು ಇರಿಸಿದ್ದು, ಸರಕಾರ ಮಧ್ಯ ಪ್ರವೇಶಿಸಿ ದಾಳಿಗಳನ್ನೂ ನಡೆಸಿತ್ತು.
2019 ಆಗಸ್ಟ್ ಅಂತ್ಯಕ್ಕೆ ಹಾಗೂ ಸೆಪ್ಟಂಬರ್ ಮೊದಲ ವಾರದಲ್ಲಿ ಈರುಳ್ಳಿ ಬೆಲೆ ಏರುಮುಖ ಕಂಡಿದ್ದು, ನವೆಂಬರ್-ಡಿಸೆಂಬರ್ ಮಾಹೆಯಲ್ಲಿ ಅದು 160 ರೂಪಾಯಿ ತನಕವೂ ತಲುಪಿತ್ತು.
ದೇಶೀಯ ಈರುಳ್ಳಿಯ ಕೊರತೆ ಯಿಂದಾಗಿ ಈಜಿಪ್ಟ್, ಇರಾನ್, ಟರ್ಕಿ ದೇಶಗಳಿಂದಲೂ ಈರುಳ್ಳಿ ಆಮದು ಮಾಡಲಾಗಿತ್ತು. 2020ರ ಜನವರಿ ಪ್ರಥಮ ವಾರದ ಬಳಿಕ ದೇಶೀಯ ಈರುಳ್ಳಿ ಲಭ್ಯವಾಗತೊಡಗಿದ್ದು, ಈ ಸಂದರ್ಭದಲ್ಲಿ ಬೆಲೆ ಇಳಿಕೆಯಾಗಲು ಆರಂಭವಾಗಿತ್ತು.
ಫೆಬ್ರವರಿ ತಿಂಗಳು ಆರಂಭ ವಾಗುತ್ತಿದ್ದಂತೆ ಹೊಸ ಈರುಳ್ಳಿ ಧಾರಾಳವಾಗಿ ಪೂರೈಕೆ ಆಗುತ್ತಿರುವ ಕಾರಣ ಬೆಲೆಯು 5 ತಿಂಗಳ ಹಿಂದಿನ ಹಂತಕ್ಕೆ ತಲುಪಿದೆ. ಈ ಮೂಲಕ ಗ್ರಾಹಕರಿಗೆ ಖುಷಿ ತಂದಿದೆ.
ತರಕಾರಿಗಳ ಬೆಲೆ ಇಳಿಕೆ
ಮಾರುಕಟ್ಟೆಗೆ ಸ್ಥಳೀಯ ತರಕಾರಿಯೂ ಬಂದಿರುವುದರಿಂದ ಹಲವು ತರಕಾರಿಗಳ ಬೆಲೆ ಇಳಿಕೆ ಯಾಗಿದೆ. ಕ್ಯಾರೆಟ್, ಬೆಂಡೆ, ಹಸಿ ಮೆಣಸು, ಪಡುವಲ, ಹಾಗಲ, ತೊಂಡೆ, ಸೋರೆ, ಹೀರೆಕಾಯಿ ಸಹಿತ ಹಲವು ತರಕಾರಿಗಳ ಬೆಲೆ ಕಡಿಮೆಯಾಗಿದೆ.
ಸಾಮಾನ್ಯವಾಗಿ ಪ್ರತೀ ವರ್ಷ ಫೆಬ್ರವರಿ ಆರಂಭವಾಗುತ್ತಿದ್ದಂತೆ ಹೊಸ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತದೆ. ಈ ವರ್ಷ ಮಳೆಯಿಂದ ಈರುಳ್ಳಿ ಬೆಳೆ ನಾಶವಾಗಿದ್ದರೂ ಇದೀಗ ಈಗ ಮಾರುಕಟ್ಟೆಗೆ ವಿಫುಲವಾಗಿ ಆವಕವಾಗುತ್ತಿದೆ. ಹಾಗಾಗಿ ನಿರೀಕ್ಷೆಯಂತೆ ಬೆಲೆಯೂ ಇಳಿಮುಖವಾಗಿದೆ.
– ಡೇವಿಡ್ ಡಿ’ಸೋಜಾ, ವ್ಯಾಪಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.