ಗುರು ಕಾರುಣ್ಯದಿಂದ ಮೋಕ್ಷ ಪ್ರಾಪ್ತಿ
ಬಸವಲಿಂಗ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ಸಮಾಜದ ಕೊಳೆ ತೊಳೆಯುವುದೇ ಗುರುವಿನ ಕಾಯಕ
Team Udayavani, Feb 3, 2020, 1:52 PM IST
ಸುರಪುರ: ದೇವರು ನಿಮಿತ್ತ ಗುರು. ವಾಸ್ತವ ಸಮಾಜದ ಕೊಳೆಯನ್ನು ದೇವರಿಂದ ತೊಳೆಯಲು ಸಾಧ್ಯವಿಲ್ಲ. ಅದು ಗುರುವಿನಿಂದ ಮಾತ್ರ ಸಾಧ್ಯ. ಸಮಾಜದಲ್ಲಿ ದೇವರಿಗಿಂತಲೂ ಗುರುವಿಗೆ ಮಹತ್ವಪೂರ್ಣವಾದ ಸ್ಥಾನವಿದೆ. ಕಾರಣ ಸರ್ವರು ಗುರುಕಾರುಣ್ಯ ಪಡೆದು ಮೋಕ್ಷ ಮಾರ್ಗ ಕಂಡುಕೊಳ್ಳಬೇಕು ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಶ್ರೀ ಗಿರಿಮಠದ ಬಸವಲಿಂಗ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ರವಿವಾರ ನಡೆದ ಧರ್ಮಸಭೆಯಲ್ಲಿ ಸ್ವಾಮೀಜಿ ಸಂದೇಶ ನೀಡಿದರು. ಭಕ್ತರ ಸಂಕಷ್ಟ ದೂರ ಮಾಡಲು ಗುರವಿನ ಅನುಗ್ರಹ, ಮಹಿಮೆ ಅಪಾರವಾಗಿದೆ. ಗುರುವಿನ ಬಳಿಗೆ ಬಂದಾಗ ಎಲ್ಲ ಕಷ್ಟಗಳು, ಸಮಸ್ಯೆಗಳು ದೂರವಾಗುತ್ತವೆ. ಕಾರಣ ಭಕ್ತರು ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಜನನ, ಬಾಲ್ಯ, ಯೌವ್ವನ, ವೃದ್ಧಾಪ್ಯಗಳ ನಡುವೆ ಹಲವು ಘಟನೆಗಳು ನಡೆಯುತ್ತವೆ. ಕಷ್ಟ ನಷ್ಟಗಳು ಎದುರಾಗುತ್ತವೆ. ಆ ಸಂದರ್ಭದಲ್ಲಿ ಗುರು ನಾಮಸ್ಮರಣೆ ಮಾಡಿ ಸಾಕು. ಸಂಕಷ್ಟದಿಂದ ಪಾರಾಗುತ್ತೀರಿ. ಅಂತಹ ಶಕ್ತಿ ಗುರುವಿನಲ್ಲಿದೆ. ದೇವರು ಜನ್ಮಕ್ಕೆ ಕಾರಣಿಭೂತನಾದರೆ, ಗುರು ಬದುಕಿನ ಅರ್ಥ ತಿಳಿಸಿಕೊಡುವ ಮೂಲಕ ಇಡೀ ಬದುಕಿನುದ್ದಕ್ಕೂ ಸನ್ಮಾರ್ಗ ತೋರಿ ಕೈ ಹಿಡಿದು ನಡೆಸುತ್ತಾನೆ. ಹೀಗಾಗಿ ಸಮಾಜದಲ್ಲಿ ಗುರುವಿಗೆ ಹಿರಿದಾದ ಸ್ಥಾನವಿದೆ. ದೇವರನ್ನು ಬಿಟ್ಟು ಗುರುವಿಗೆ ಮೊದಲು ನಮಸ್ಕರಿಸುವುದು. ಈ ಸತ್ಯವನ್ನು ಅರಿತು ಗುರುವಿನ ಸನ್ಮಾರ್ಗದಲ್ಲಿ ನಡೆ ಯಬೇಕು ಎಂದು ಹೇಳಿದರು.
ಶ್ರೀ ಕೃಷ್ಣ ಪರಮಾತ್ಮ ಹಲವಾರು ವಿರಾಟ ರೂಪ ಎತ್ತಿದರೂ ದುಷ್ಟರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿಲ್ಲ. ದುಷ್ಟರ ವಿಚಾರಗಳಲ್ಲಿ ದುಷ್ಟತನ ಮೇಳೈಸುತ್ತಿರುತ್ತದೆ. ದುಷ್ಟ ವಿಚಾರ ನಾಶಮಾಡುವುದು ಎಂದರೆ ದುಷ್ಟರ ನಾಶ ಮಾಡಿದಂತೆ. ಈ ಹಿನ್ನೆಲೆಯಲ್ಲಿ ದೇವರೇ ಗುರುವಿನ ರೂಪದಲ್ಲಿ ಅವತರಿಸಿರುತ್ತಾನೆ. ಗುರು ಸ್ಥಾನದಲ್ಲಿ ನಿಂತು ಜ್ಞಾನೋಪದೇಶದ ಮೂಲಕ ದುಷ್ಟರನ್ನು ಅಂದರೆ ವಿಚಾರಗಳನ್ನು ಸಂಹರಿಸುತ್ತಾನೆ ಎಂದು ಹೇಳಿದರು.
ನೂತನ ಪಟ್ಟಾಧಿಕಾರಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗೆ ಧರ್ಮನುಸಾರ ನಡೆಯಲು ಹೊನ್ನಾಳಿ ಹಿರೇಕಲ್ಮಠದ ಚನಮಲ್ಲಿಕಾರ್ಜುನ ಶಿವಾಚಾರ್ಯರು ಗುರುದೀಕ್ಷೆ ನೀಡಿದ್ದಾರೆ. ಭಕ್ತರು ಗುರುಗಳ ಮಾರ್ಗದರ್ಶನದಲ್ಲಿ ನಡೆದು ಮಠದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ದೇವಪುರ ಮಠದ ಶಿವಮೂರ್ತಿ ಶಿವಾಚಾರ್ಯ, ಕಡ್ಲೆಪ್ಪನವರ ಮಠದ ಪ್ರಭುಲಿಂಗ ಸ್ವಾಮೀಜಿ, ರುಕ್ಮಾಪುರ ಮಠದ ಗುರುಶಾಂತಮೂರ್ತಿ ಶಿವಾಚಾರ್ಯರು, ಎಮ್ಮೆಗನೂರು ವಾಮದೇವ ಶಿವಾಚಾರ್ಯರು, ಸಿದ್ದೇಶ್ವರ ಶಿವಾಚಾರ್ಯರು, ಮರುಳಮಹಾಂತ ಶಿವಾಚಾರ್ಯರು, ಶೀಲವಂತ ಶಿವಾಚಾರ್ಯರು, ಸೋಮೇಶ್ವರ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಅಭಿನವ ಜಯಶಾಂತಲಿಂಗ ಶಿವಾಚಾರ್ಯರು, ಅಡವಿಲಿಂಗ ಮಹಾರಾಜ್, ಶ್ರೀಕಂಠ ಶಿವಾಚಾರ್ಯರು, ರಾಜೇಂದ್ರ ಶಿವಾಚಾರ್ಯರು, ಮಹಾಂತದೇವರು, ಶರಣಪ್ಪ ಶರಣರು, ಶಾಸಕರ ಸಹೋದರ ಬಬ್ಲುಗೌಡ, ಡಾ| ಬಿ.ಎಂ. ಹಳ್ಳಿಕೋಟಿ, ಡಾ| ಸುರೇಶ ಸಜ್ಜನ, ಸೂಗೂರೇಶ ವಾರದ, ಶರನಗೌಡ ಆಲ್ದಾಳ, ವೀರುಪಕ್ಷಿ ಮೊಸರಕಲ್, ಲಚಮರೆಡ್ಡಿ ಬಿಜಾಸ್ಪೂರ, ವೀರಣಗೌಡ ದರ್ಶನಾಪುರ, ಆನಂದ ಬಡಿಗೇರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.