ಜಲಸಂಗ್ರಹ: ಮರಳು ಕಟ್ಟ ನಿರ್ಮಾಣಕ್ಕೆ ಸಿದ್ಧತೆ
ಪಯಸ್ವಿನಿ ನದಿ ನೀರಿನ ಹರಿವು ಕ್ಷೀಣ: ಮಿತ ಬಳಕೆ ಅಗತ್ಯ
Team Udayavani, Feb 4, 2020, 4:59 AM IST
ನಾಗಪಟ್ಟಣ ಸೇತುವೆ ಬಳಿ ತಾತ್ಕಾಲಿಕ ಮರಳು ಕಟ್ಟ ನಿರ್ಮಾಣ ಮಾಡುವ ಸ್ಥಳ.
ಸುಳ್ಯ: ನಗರಕ್ಕೆ ನೀರೊದಗಿಸುವ ಪಯಸ್ವಿನಿಯಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಗಪಟ್ಟಣ ಸೇತುವೆ ಬಳಿ ತಾತ್ಕಾಲಿಕ ಮರಳು ಕಟ್ಟ ನಿರ್ಮಾಣಕ್ಕೆ ಸಿದ್ಧತೆಗಳು ಫೆ. 4ರಿಂದ ಆರಂಭಗೊಳ್ಳಲಿವೆ.
ಬಹು ನಿರೀಕ್ಷಿತ cc ನಿರ್ಮಾಣ ಪ್ರಸ್ತಾವನೆ ಅನುಷ್ಠಾನಗೊಳ್ಳದ ಕಾರಣ ನಗರದ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳಲು ಮರಳಿನ ಕಟ್ಟ ಆಶ್ರಯಿಸಲಾಗುತ್ತಿದೆ. ಈ ಬಾರಿ ಡಿಸೆಂಬರ್ ತನಕ ಮಳೆ ಇದ್ದ ಕಾರಣ ಫೆಬ್ರವರಿ ಆರಂಭದ ತನಕವೂ ನೀರಿನ ಹರಿವು ಇತ್ತು. ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ ನದಿ ನೀರಿನ ಮಟ್ಟ ಕೊಂಚ ಉತ್ತಮ ಮಟ್ಟದಲ್ಲೇ ಇದೆ. ಆದರೂ ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ಮರಳು ಕಟ್ಟದ ಮೂಲಕ ನೀರು ಸಂಗ್ರಹಿಸಲು ನ.ಪಂ. ಸಿದ್ಧಗೊಂಡಿದೆ.
4ರಿಂದ 5 ಲಕ್ಷ ರೂ. ವೆಚ್ಚ
ಸುಮಾರು 4ರಿಂದ 5 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಆಗಿದೆ. ಕಲ್ಲುಮುಟ್ಲು ಪಂಪ್‌ಹೌಸ್ ಬಾವಿ ಯಿಂದ ಹೂಳು ಎತ್ತಿ ಟ್ಯಾಂಕ್ ಶುದ್ಧೀಕರಣ ನಡೆಸಲಾಗುತ್ತದೆ. ಅನಂತರ 50 ಕೆ.ಜಿ.ಯ ಪ್ಲಾಸ್ಟಿಕ್ ಚೀಲಗಳಲ್ಲಿ ಮರಳು ತುಂಬಿಸಿ, ನದಿಯಲ್ಲಿ ಒಂದೂವರೆ ಅಡಿಯಷ್ಟು ಎತ್ತರದಲ್ಲಿ ಮರಳಿನ ಕಟ್ಟ ನಿರ್ಮಾಣಗೊಳ್ಳಲಿದೆ.
ನಗರಕ್ಕೆ ನೀರು
ವರ್ಷದ 365 ದಿನವೂ 24 ತಾಸು ಇಲ್ಲಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. ಕಲ್ಲುಮಟ್ಲು ಪಂಪ್‌ಹೌಸ್ ಬಳಿಯಲ್ಲಿ 50 ಎಚ್‌ಪಿಯ 1 ಮತ್ತು 45 ಎಚ್‌ಪಿಯ 2 ಪಂಪ್‌ಗ್ಳಿದ್ದು, ಆ ಮೂಲಕ ನೀರನ್ನು ಸಂಗ್ರಹಿಸಿ ಪಂಪ್‌ಹೌಸ್‌ನಲ್ಲಿರುವ ಬಾವಿಗೆ, ಅಲ್ಲಿಂದ ಅನತಿ ದೂರದಲ್ಲಿರುವ ಶುದ್ಧೀಕರಣ ಘಟಕಕ್ಕೆ ಪೂರೈಕೆಯಾಗುತ್ತದೆ.
ಕಲ್ಲುಮಟ್ಲು ನೀರು ಶುದ್ಧೀಕರಣ ಘಟಕದ ಬಳಿ ಇರುವ 1 ಲಕ್ಷ ಗ್ಯಾಲನ್ ಮತ್ತು 50 ಸಾವಿರ ಗ್ಯಾಲನ್ ಟ್ಯಾಂಕಿ ಮೂಲಕ ನಗರಕ್ಕೆ ನೀರು ಹರಿದರೆ, ಇನ್ನೊಂದು ಪೈಪ್ ಮೂಲಕ ಕುರುಂಜಿಗುಡ್ಡೆ ಟ್ಯಾಂಕಿಗೆ ನೀರು ಹರಿಸಲಾಗುತ್ತದೆ. ಅಲ್ಲಿಂದ ನಗರದ ಮನೆ ಹಾಗೂ ಗೃಹೇತರ ಕಟ್ಟಡಕ್ಕೆ ನಳ್ಳಿ ಸಂಪರ್ಕದ ಮುಖಾಂತರ ನೀರು ಹರಿಸಲಾಗುತ್ತದೆ.
ಕಾಡುತ್ತಿದೆ ನೀರಿನ ಕೊರತೆ
2011ರ ಜನಗಣತಿ ಆಧಾರದಲ್ಲಿ ನಗರದ ಜನಸಂಖ್ಯೆ 19,958. ಅದೀಗ 25 ಸಾವಿರ ದಾಟಿರಬಹುದು. ದಿನಕ್ಕೆ ನಗರಕ್ಕೆ ಬೇಕಾದ ನೀರಿನ ಪ್ರಮಾಣ 1.69 ಎಂ.ಎಲ್.ಡಿ. ಓರ್ವ ವ್ಯಕ್ತಿಗೆ ದಿನಕ್ಕೆ 135 ಲೀ. ನೀರು ಬೇಕಿದ್ದು, ಸದ್ಯ 90 ಲೀಟರ್ ಪೂರೈಸಲಾಗುತ್ತಿದೆ. ದಿನಕ್ಕೆ ಒಬ್ಬರಿಗೆ 45 ಲೀ. ನೀರಿನ ಕೊರತೆ ಇದ್ದು, ಬೇಸಗೆಯಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ.
ಇಂದಿನಿಂದ ಆರಂಭ
ಮರಳಿನ ಕಟ್ಟ ನಿರ್ಮಾಣಕ್ಕೆ ಪೂರ್ವ ಸಿದ್ಧತೆಗಳು ಫೆ. 4ರಿಂದ ಆರಂಭಗೊಳ್ಳಲಿವೆ. ಪಂಪ್‌ಹೌಸ್ ಬಾವಿಯಿಂದ ಹೂಳು ಎತ್ತಿ ಸ್ವತ್ಛಗೊಳಿಸಲಾಗುತ್ತದೆ. ಎರಡು ದಿನದೊಳಗೆ ಮರಳು ಚೀಲಕ್ಕೆ ಮರಳು ತುಂಬಿಸುವ ಕೆಲಸ ಆಗಲಿದೆ. ಅನಂತರ ಜೋಡಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
– ಶಿವಕುಮಾರ್ ಎಂಜಿನಿಯರ್, ನ.ಪಂ. ಸುಳ್ಯ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.