ತಪ್ಪನ್ನು ತಪ್ಪು ಎನ್ನುವುದೇ ತಪ್ಪಾದರೆ ಸರಿಪಡಿಸುವುದು ಹೇಗೆ?
Team Udayavani, Feb 4, 2020, 6:40 AM IST
ಎನ್‌ಡಿಎ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಂದಿನಿಂದ ಹಲವಾರು ಚಾರಿತ್ರಿಕ ಮಸೂದೆಗಳನ್ನು ಜಾರಿಗೊಳಿಸಿದೆ. ಈ ಮಸೂದೆಗಳ ಜಾರಿಯ ಬಳಿಕ ಕಾಣುವ ಸಮಾನ ಅಂಶವೆಂದರೆ ಮಸೂದೆ ಜಾರಿಗೆ ಬಂದೊಡನೆ ಒಂದು ವರ್ಗದವರಿಂದ ಬೆಂಬಲ ವ್ಯಕ್ತವಾದರೆ, ಇನ್ನೊಂದು ವರ್ಗದವರಿಂದ ಕಟು ಟೀಕೆ, ಉಗ್ರ ಪ್ರತಿಭಟನೆ ಮುಂತಾದವು ನಡೆಯುತ್ತದೆ. ನ್ಯಾಯಾಲಯದ ಮೆಟ್ಟಿಲೇರುವುದೂ, ನ್ಯಾಯಾಲಯ ತಳ್ಳಿ ಹಾಕುವುದು ಇತ್ಯಾದಿ ನಡೆಯುತ್ತಿದೆ.
ಪೌರತ್ವ ತಿದ್ದುಪಡಿ ಕಾಯಿದೆ ವಿವಿಧ ಆಯಾಮಗಳಲ್ಲಿ ಕಾವೇರುತ್ತಿದೆ. ಕೆಲವರು ಇದು ಧರ್ಮಾಧಾರಿತ ವಿಭಜನೆಗೆ ಕಾರಣವಾಗಿದೆ ಎಂದರೆ ಇನ್ನೂ ಕೆಲವರು ಚಾರಿತ್ರಿಕ ಮತ್ತು ಎಂದೋ ಆಗಬೇಕಾಗಿದ್ದ ಮಸೂದೆಯೆಂದರು. ಅಭಿಪ್ರಾಯ ಭೇದ ಸಹಜ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯ ಕೂಡಾ. ಆದರೆ ಈ ನಿಟ್ಟಿನಲ್ಲಿ ಇತ್ತೀಚಿನ ಕೆಲವು ಅಭಿಪ್ರಾಯಗಳನ್ನು ಗಮನಿಸಿದರೆ ಸಾಗುತ್ತಿರುವ ದಾರಿಯ ಬಗ್ಗೆ ಭಯ ಮತ್ತು ಗೊಂದಲಗಳು ಮೂಡುತ್ತಿವೆ.
ಕೆಲವರು ಇನ್ನಷ್ಟು ಮುಂದುವರಿದು 1975ರ ತುರ್ತು ಪರಿಸ್ಥಿತಿಯ ಕಾಲದ ಬೆಳವಣಿಗೆಗಳನ್ನು, ದಿ.ಜಯಪ್ರಕಾಶ್ ನಾರಾಯಣ್ ಅವರ ಹೋರಾಟದ ಉದಾಹರಣೆ ನೀಡುತ್ತಾರೆ. ಆದರೆ ಚುನಾವಣಾ ಅಕ್ರಮದ ಕಾರಣಕ್ಕೆ ತಮ್ಮ ಲೋಕಸಭಾ ಸ್ಥಾನ ಕಳೆದುಕೊಂಡ ಆಗಿನ ಪ್ರಧಾನಿ ದಿ.ಇಂದಿರಾ ಗಾಂಧಿಯವರು ಸಂವಿಧಾನದ 42ನೇ ತಿದ್ದುಪಡಿ ಮೂಲಕ, ಪ್ರಧಾನಿ (ಜತೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸ್ಪೀಕರ್) ಅವರು ಯಾವುದೇ ತನಿಖಾ ಸಂಸ್ಥೆ ಮತ್ತು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲವೆಂಬ ನಿಯಮ ರೂಪಿಸಿದ್ದರು. ಲೋಕಸಭೆಯ ಅವಧಿ ಮುಗಿದಿದ್ದರೂ ಮತ್ತೂಂದು ವರ್ಷಕ್ಕೆ ಮುಂದುವರಿಸುವ ಮೂಲಕ ಸಂವಿಧಾನದ ಮೂಲ ಚೌಕಟ್ಟನ್ನೇ ತಿರುಚುವ ಪ್ರಯತ್ನ ಮಾಡಿದ್ದರು. ಇಷ್ಟು ಮಾತ್ರವಲ್ಲದೆ ತನ್ನ ವಿರುದ್ಧವಿದ್ದ ಚುನಾವಣಾ ಅಕ್ರಮದ ತೀರ್ಪನ್ನು ಸಮರ್ಥನೆ ಮಾಡಿಕೊಳ್ಳಲು ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಹಿರಿತನವನ್ನು ಕಡೆಗಣಿಸಿ, ಕಿರಿಯರಾದ ದಿ.ಎಂ.ಎಚ್. ಬೇಗ್ ಅವರನ್ನು ಮುಖ್ಯನ್ಯಾಯಮೂರ್ತಿ ಹು¨ªೆಗೆ ನೇಮಿಸಿದ್ದು, ಇದನ್ನು ಪ್ರತಿಭಟಿಸಿ ಐವರು ನ್ಯಾಯಮೂರ್ತಿಗಳು ರಾಜೀನಾಮೆ ನೀಡಿದ್ದು ಇತಿಹಾಸ. ಆದರೆ ರಂಜನ್ ಗೊಗೋಯಿ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ನ್ಯಾಯಮೂರ್ತಿಯವರು ಭಾರತದ ನ್ಯಾಯಾಂಗದ ಇತಿಹಾಸದÇÉೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರೂ, ಸೇವಾ ಹಿರಿತನವನ್ನು ಗೌರವಿಸಿ ಗೊಗೋಯಿ ಅವರನ್ನೇ ಮುಖ್ಯ ನ್ಯಾಯಮೂರ್ತಿ ಹು¨ªೆಗೆ ನೇಮಿಸಲಾಗಿತ್ತು. ಆದ್ದರಿಂದ ದಿ.ಇಂದಿರಾಗಾಂಧಿ ಆಡಳಿತ ವೈಖರಿಯನ್ನು ಇಂದಿಗೆ ಹೋಲಿಸುವುದು ಎಷ್ಟು ಸರಿ?
ದೇಶದ ಆಂತರಿಕ ವಿಷಯವನ್ನು ಅನ್ಯ ದೇಶಗಳು ಪ್ರಶ್ನಿಸುವುದಾಗಲಿ, ಐರೋಪ್ಯ ಒಕ್ಕೂ ಟದ ಸಂಸತ್ತಿನಲ್ಲಿ, ವಿಶ್ವಸಂಸ್ಥೆಯಲ್ಲಿ ಚರ್ಚಿಸುವುದಾಗಲಿ ಇಂತಹ ಬೆಳವಣಿಗೆಗಳನ್ನು ಪ್ರತಿಪಕ್ಷಗಳು ಬೆಂಬಲಿಸುವುದೆಲ್ಲ ಸಾಂವಿಧಾನಿಕ ಲೋಪವೆನಿಸದೇ? ಕೆಲವರು ಸಂಸತ್ತಿನಲ್ಲಿ ಬಹುಮತ ಇದೆಯೆಂಬ ಕಾರಣಕ್ಕೆ ಅಡ್ಡದಾರಿಯಲ್ಲಿ ಜನವಿರೋಧಿ ಕಾಯಿದೆ ಅನುಷ್ಠಾನಗೊಳಿಸುವುದು ತಪ್ಪು ಎನ್ನುವಷ್ಟು ಮುಂದುವರಿದಿ¨ªಾರೆ. ಲೋಕಸಭೆಯಲ್ಲಿ ಆಳುವ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿರುವುದಕ್ಕೆ ಯುವ ಮತದಾರರು ಮುಖ್ಯ ಕಾರಣ. ಮೇಲಿನ ವಾದವನ್ನು ಪರಿಗಣಿಸುವುದಾದರೆ, ಆ ರೀತಿ ಮತ ನೀಡಿ ಆರಿಸಿದವರು ದಡ್ಡರೇ?ಒಟ್ಟರ್ಥ ಇಷ್ಟೇ, ಬೇರೆ ದೇಶದಲ್ಲಿ ಅನ್ಯಾಯಕ್ಕೆ ಒಳಗಾಗಿ ಮೂಲತಃ ಭಾರತೀಯರೇ ಆಗಿರುವವರು ಇಲ್ಲಿನ ಮತದಾರರಾದರೆ, ಅನರ್ಹ ಮತದಾರರ ಬೆಂಬಲದಿಂದ ಅಧಿಕಾರ ಪಡೆಯುತ್ತಿದ್ದವರಿಗೆ ನಷ್ಟವಾಗುವ ಭಯಕ್ಕೆ ಮಾಡುವ ಅವಾಂತರಗಳು; ಹೊರತು ಇನ್ನೇನಿಲ್ಲ.
ಇದರ ಜತೆಗೆ ಇದೇ ರೀತಿಯಲ್ಲಿ ತಪ್ಪುಗಳನ್ನು ಸರಿಪಡಿಸಲು ರೂಪಿಸಲಾದ ಕೆಲವು ಕಾನೂನುಗಳ ಮತ್ತು ತತ್ಸಂಬಂಧಿ ಬೆಳವಣಿಗೆಗಳ ನ್ನು ಗಮನಿಸಬೇಕು. ಅವುಗಳಲ್ಲಿ ಕೆಲವು: ಕೇಬಲ್ ಟಿ.ವಿ. ಸಂಪರ್ಕ ಹಿಂದೆÇÉಾ ಬಳಕೆದಾರರ ಆಯ್ಕೆ ಆಗಿರಲಿಲ್ಲ. ಕೇಬಲ್ ಸಂಪರ್ಕ ಒದಗಿಸುವವರ ಮರ್ಜಿಗನುಗುಣವಾಗಿ, ಅವರು ಕೊಟ್ಟದ್ದನ್ನು ನೋಡಬೇಕಾಗಿತ್ತು, ಅವರು ಹೇಳಿದಷ್ಟು ಹಣ ಪೀಕಬೇಕಿತ್ತು. ಯಾವುದಕ್ಕೂ ನಿಯಂತ್ರಣ ಇರಲಿಲ್ಲ. ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ಕಡ್ಡಾಯ ಮಾಡಿದಾಗ ಅದಕ್ಕೊಂದಿಷ್ಟು ಗದ್ದಲವೆಬ್ಬಿಸಲಾಯಿತು.
ಜಾರಿ ಅನಿವಾರ್ಯವಾದಾಗ ಪ್ರತಿಭಟನೆ ತಣ್ಣಗಾಯಿತು. ಆದರೆ ಕೇಬಲ್ ಸಂಪರ್ಕ ಒದಗಿಸುವವರ ಏಕಸ್ವಾಮ್ಯ ಮುಂದುವರಿಯಿತು. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ, ಕೇಬಲ್ ಬಳಕೆದಾರರ ಹಿತದೃಷ್ಟಿಯಿಂದ ಬಳಕೆದಾರರಿಗೆ ಒದಗಿಸಬೇಕಾದ ಉಚಿತ ಸಂಪರ್ಕಗಳ ಸಂಖ್ಯೆ, ವಿಧಿಸಬಹುದಾದ ಗರಿಷ್ಠ ಶುಲ್ಕ ಇತ್ಯಾದಿಗಳ ಬಗ್ಗೆ ನಿಯಮಗಳನ್ನು ರೂಪಿಸಿತು. ಇಲ್ಲಿಯೂ ಸರ್ಕಾರ ಬಳಕೆದಾರರಿಗೆ ಹೆಚ್ಚಿನ ಭಾರವನ್ನು, ಹಿಂದಿ ಭಾಷೆಯನ್ನು ಹೇರುವ ತಂತ್ರ ಎಂದೆÇÉಾ ಕಲ್ಪಿತ ಪ್ರಚಾರ ಮಾಡಿದ್ದನ್ನು ಕಾಯಿದೆಯ ಬಗ್ಗೆ ಸರಿಯಾಗಿ ಅಥೆìçಸಿಕೊಳ್ಳುವ ಪ್ರಯತ್ನ ಮಾಡದೆ, ಪೂರೈಕೆದಾರರು ಹೇಳಿದಷ್ಟನ್ನೇ ನಂಬಿ, ಸರ್ಕಾರದ ವಿರುದ್ಧವೆ ಟೀಕೆ ಮಾಡುವ ಹಾಗೂ ತಮಗೆ ಬೇಕಾದ ಚಾನೆಲ್ ಪಡೆಯಲು ಪಾವತಿಸಬೇಕಾದ ಮೊತ್ತವನ್ನು ಪರಿಶೀಲಿಸುವ ಗೋಜಿಗೆ ಹೋಗದೆ, ಸಂಪರ್ಕ ಒದಗಿಸುವವರು ಹೇಳಿದಷ್ಟು ಪಾವತಿಸುವ ಬುದ್ದಿವಂತರ ಸಂಖ್ಯೆ ದೊಡ್ಡದೇ ಇದೆ.
ಆಧಾರ್ ಜಾರಿಗೊಳಿಸಿದಾಗ ಆಕ್ಷೇಪಿಸಿದರು. ಸಬ್ಸಿಡಿ ಮುಂತಾದ ಸರ್ಕಾರಿ ಯೋಜನೆಗಳಿಗೆ ಇದನ್ನು ಕಡ್ಡಾಯ ಮಾಡಿದಾಗ ಇನ್ನಿಲ್ಲದಂತೆ ಗದ್ದಲವೆಬ್ಬಿಸಿದರು. ಇದರಿಂದ ಸರ್ಕಾ ರಕ್ಕಾದ ಉಳಿತಾಯದ ಬಗ್ಗೆ ಯಾರೂ ಉಸಿರೆತ್ತಲಿಲ್ಲ. ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್ ಇಟ್ಟುಕೊಂಡು ಎಷ್ಟೆಷ್ಟೋ ಬ್ಯಾಂಕ್ ಖಾತೆ ತೆರೆದರು. ತೋರಿಕೆಗೊಂದಿಷ್ಟು ಲೆಕ್ಕ, ಅದಕ್ಕೆ ತೆರಿಗೆ, ಹೆಚ್ಚಿನ ಪಾಲು ತೆರಿಗೆಯಿಲ್ಲದ ವ್ಯವಹಾರ. ಇದು ತಪ್ಪೆಂದ ಸರ್ಕಾ ರವನ್ನು ದೂಷಿಸಿದರು, ಸರಿಯಾಗಿ ತೆರಿಗೆ ಕಟ್ಟುವವರು ಸರಕಾರದ ಕ್ರಮವನ್ನು ಮೆಚ್ಚಿಕೊಂಡರು. ಇದೀಗ ಭೂಮಿ ಖರೀದಿ, ಮಾರಾಟದ ವ್ಯವಹಾರಗಳಿಗೆ ಆಧಾರ್ ಕಡ್ಡಾಯ ಮಾಡುವ ಮೂಲಕ ಬೇನಾಮಿ ವ್ಯವಹಾರಕ್ಕೆ ಅಂಕುಶ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಳ್ಳ ವ್ಯವಹಾರ ಮಾಡುವವರು ಚಡಪಡಿಸಿದರು. ಪ್ರಾಮಾಣಿಕರು ಮೆಚ್ಚಿಕೊಂಡರು.
ಜನೌಷಧಿ ಯೋಜನೆ ತರುವ ಮೂಲಕ ಬಡವರಿಗೆ ಸುಲಭ ದರದಲ್ಲಿ ಔಷಧಿ ದೊರೆಯುವಂತೆ ಮಾಡಿದರೆ, ಇದರಿಂದ ಬಾಧಿತರಾಗುವ ಮಧ್ಯವರ್ತಿಗಳು ಗುಣಮಟ್ಟದ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿಸಿದರು. ಇದರ ಹಿಂದಿನ ಹುನ್ನಾರ ಅರ್ಥ ಮಾಡಿಕೊಳ್ಳದವರು ಪ್ರಚಾರವಷ್ಟೇ ನಂಬಿ ದೂರವುಳಿದರೆ, ಸ್ವಲ್ಪ ತಲೆ ಓಡಿಸಿದವರು ಯೋಜನೆಯ ಪ್ರಯೋಜನ ಪಡೆದರು.
ರಸ್ತೆ ಸುಂಕ ವಸೂಲು ಗುತ್ತಿಗೆ ಪಡೆದ ಸಂಸ್ಥೆಗಳು ಇದನ್ನೂ ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆಂದರೆ, ಎÇÉಾ ವ್ಯವಹಾರಗಳನ್ನು ನಗದಾಗಿಯೇ ಮಾಡುವ ಮೂಲಕ ವಸೂಲಾದ ಮೊತ್ತಕ್ಕೆ ಸರಿಯಾದ ಲೆಕ್ಕಪತ್ರವಿಡದೆ, ನಷ್ಟವಾಗಿದೆಯೆಂದು ಹೇಳಿ ಒಂದೆಡೆ ಸಾಲ ನೀಡಿದ ಬ್ಯಾಂಕಿಗೆ ವಂಚಿಸುವುದು ಮಾತ್ರವಲ್ಲದೆ, ಒಟ್ಟು ವಿನಿಯೋಗಿಸಿದ ಮೊತ್ತದ ಹಲವು ಪಟ್ಟು ವಸೂಲಾದರೂ ಸುಂಕ ವಸೂಲಿ ಮುಂದುವರಿಸುವುದು ನಡೆಯುತ್ತದೆ. ಹೀಗೆ ಸಾರ್ವಜನಿಕರಿಗೂ ಮೋಸವಾಗುವುದನ್ನು ಸರಿಪಡಿಸಲು ಫಾಸ್ಟಾಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ನಿಖರವಾದ ಲೆಕ್ಕ ಸಿಗುವುದರಿಂದ ಯಾವುದೇ ರೀತಿಯ ವಂಚನೆ ಸಾಧ್ಯವಿಲ್ಲ. ಆದರೆ ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದ ಗ್ರಾಹಕರು, ಇಂತಹ ವ್ಯವಸ್ಥೆಯ ದೋಷಗಳನ್ನೇ ಎತ್ತಿ ಸರಕಾರದ ಮೇಲೆ ದೋಷಾರೋಪ ಮಾಡುತ್ತಾರೆ.
– ಮೋಹನದಾಸ ಕಿಣಿ, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.