ಸ್ಮಾರ್ಟ್ ಫೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಅನುಸರಿಸಬೇಕಾದ ತಂತ್ರಗಳಾವುವು ?


ಮಿಥುನ್ ಪಿಜಿ, Feb 4, 2020, 6:00 PM IST

battery-1

ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ ಫೋನ್‘ನ ಬ್ಯಾಟರಿ ಅತೀ ಹೆಚ್ಚು ಕಾಲ ಬಾಳಿಕೆ ಬರಬೇಕೆಂದು ಆಲೋಚಿಸುತ್ತಾರೆ. ಕೆಲವೊಮ್ಮೆ ಫೋನ್ ಹಳೆಯದಾದರಂತೂ ಬ್ಯಾಟರಿ ಬ್ಯಾಕಪ್ ತುಂಬಾ ಕಡಿಮೆಯಾಗಿಬಿಡುತ್ತದೆ. ಆದರೇ ಬ್ಯಾಟರಿ ಬಾಳಿಕೆ ಎಂಬುದು ಎಷ್ಟು ಭಾರೀ ಸ್ಮಾರ್ಟ್ ಫೋನ್ ಬಳಸುತ್ತೇವೆ ಮತ್ತು ಎಷ್ಟು ಬೇಗ ಕಡಿಮೆಯಾಗುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.

2020ರಲ್ಲಿ ಸ್ಮಾರ್ಟ್‌ಫೋನ್‌ ತಯಾರಕರ ನಡುವೆ ಕ್ಯಾಮರಾ ವಿಷಯವಾಗಿ ಪೈಪೋಟಿ ನಡೆಯುವುದಿಲ್ಲ ಎನ್ನುವ ಭವಿಷ್ಯವಾಣಿಯನ್ನು ಪರಿಣಿತರು ನುಡಿದಿದ್ದಾರೆ. ಯಾಕೆಂದರೇ  ತಯಾರಕರ ಗಮನ ಸಂಪೂರ್ಣ ಫೋನಿನ ಬ್ಯಾಟರಿ ಮೇಲೆ ಹರಿಯುತ್ತಿರುವುದು ಇದಕ್ಕೊಂದು ಉದಾಹರಣೆ. ಹಾಗಾಗಿ ಹಲವು ಕಂಪನಿಗಳು ಕ್ಷಿಪ್ರ ಗತಿಯಲ್ಲಿ ಫ‌ುಲ್‌ ಚಾರ್ಜ್‌ ಆಗುವ ಬ್ಯಾಟರಿಯನ್ನು ಅಭಿವೃದ್ಧಿಪಡಿಸುವ ಸಂಶೋಧನೆಯಲ್ಲಿ ನಿರತವಾಗಿವೆ. ಕಳೆದ ಕೆಲವು ತಿಂಗಳಲ್ಲಿ 5,000mAh ನ ಬ್ಯಾಟರಿ ಸಾಮರ್ಥ್ಯವಿರುವ ಫೋನ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಆದರೇ ಸಾಮಾನ್ಯವಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಸ್ಮಾರ್ಟ್ ಫೋನ್’ನ ಬ್ಯಾಟರಿ ಬಾಳಿಕೆ ಎಂಬುದು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುತ್ತದೆ. ಆ್ಯಂಡ್ರಾಯ್ಡ್  ಮತ್ತು ಐಓಎಸ್‘ನಲ್ಲಿ ಬ್ಯಾಟರಿ  ಬಾಳಿಕೆ ಹೆಚ್ಚಾಗಲೂ ಅನುಸರಿಸಬೇಕಾದ ತಂತ್ರಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಫೋನ್ ಬ್ಯಾಟರಿಗಳನ್ನು ಸಾಮಾನ್ಯವಾಗಿ ಲೀಥಿಯಂ ಐಯಾನ್ ಗಳನ್ನು ಬಳಸಿ ಮಾಡಲಾಗಿರುತ್ತದೆ.

  • 3ಜಿ ಅಥವಾ 4ಜಿ ಇರುವಂತಹ ಇಂಟರ್ ನೆಟ್ ಡಾಟಾಗಳನ್ನು ಬಳಸುವ ಬದಲು ಅಷ್ಟೇ ವೇಗ ಹೊಂದಿರುವ ವೈಫೈಗಳನ್ನು ಬಳಸುವುದು ಉತ್ತಮ. ಇಂಟರ್ನೆಟ್ ಡಾಟಾಗಳಿಗೆ  ವೈಫೈಗಳಿಗಿಂತಲೂ 40% ಹೆಚ್ಚಿನ ಶಕ್ತಿಸಾಮರ್ಥ್ಯ ಬೇಕಾಗುವುದು. ಆದುದರಿಂದ ವೈಫೈ ಬಳಸುವ ಮೂಲಕ ಬ್ಯಾಟರಿ ಬಾಳಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಸಾಧ್ಯವಾಗುತ್ತದೆ.
  • ಆ್ಯಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಬ್ಯಾಟರಿ ಸೇವಿಂಗ್ ಮೋಡ್’ಗಳು ಇರುತ್ತವೆ. ಆ್ಯಂಡ್ರಾಯ್ಡ್‘ನಲ್ಲಿ ಪವರ್‘ಸೇವಿಂಗ್ ಮೋಡ್ ಎಂದು ಹೆಸರಾಗಿದ್ದರೆ, ಐಓಎಸ್‘ನಲ್ಲಿ ಲೋ ಪವರ್ ಮೋಡ್ ಎಂಬ ಹೆಸರಿದೆ.

ಸ್ಮಾರ್ಟ್‘ಫೋನ್‘ನಲ್ಲಿರುವ ಈ ಮೋಡ್‘ಗಳನ್ನು ಬಳಸಿದರೆ ಪ್ರಮುಖವಾಗಿ ಸಿಪಿಯು (ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್), ವಿವಿಧ ಆ್ಯಪ್ ಗಳನ್ನು, ನೋಟಿಫಿಕೇಶನ್ ಗಳನ್ನು, ಬ್ರೈಟ್ನೆಸ್, ಮತ್ತು ಬ್ಯಾಟರಿ ಹೆಚ್ಚಾಗಿ ಉಪಯೋಗಿಸಲ್ಪಡುವ ಆ್ಯಪ್ ಗಳ ಮೇಲೆ ನಿಯಂತ್ರಣ ಹೇರುತ್ತದೆ. ಇದರಿಂದ ಬ್ಯಾಟರಿ ಬಾಳಿಕೆ ಹೆಚ್ಚಾಗುವುದು.

  • ಯೂಟ್ಯೂಬ್ ಮತ್ತು ಇತರ ಆ್ಯಪ್ ಗಳ ಮೂಲಕ, ಮತ್ತು ಡಿವೈಸ್ ಗಳಲ್ಲಿರುವ ವಿಡಿಯೋಗಳನ್ನು ಹೆಚ್ಚಾಗಿ ನೋಡುವುದರಿಂದ ಬ್ಯಾಟರಿ ಬೇಗನೆ ಖಾಲಿಯಾಗುವುದು. ಯಾಕೆಂದರೇ ವಿಡಿಯೋ ಪ್ರೊಸೆಸಿಂಗ್ ಎಂಬುದು ಹೆಚ್ಚು ಬ್ಯಾಟರಿ ಬಳಸುವ ವಿಧಾನವಾಗಿದೆ.
  • ಅಗತ್ಯವಿರದಿದ್ದಾಗ ಸ್ಮಾರ್ಟ್ ಫೋನಿನ ಬ್ರೈಟ್ನೆಸ್ ಅನ್ನು ಕಡಿಮೆ ಮಾಡುವುದು ಕೂಡ ಬ್ಯಾಟರಿ ಉಳಿಸಲು ಇರುವ ಸುಲಭದ ಉಪಾಯ. ಇತ್ತೀಚಿಗೆ ಹಲವು ಪ್ರಮುಖ ಆ್ಯಪ್ಗಳು, ಸ್ಮಾರ್ಟ್ ಫೋನ್ ಕಂಪೆನಿಗಳು ಡಾರ್ಕ್ ಮೋಡ್ ಅಥವಾ ನೈಟ್ ಮೋಡ್ ಫೀಚರ್ ಅನ್ನು ಬಳಕೆಗೆ ತಂದಿದೆ. ಇವು ಕೂಡ ಬ್ಯಾಟರಿ ಉಳಿಸಲು ಪ್ರಮುಖ ಪಾತ್ರವಹಿಸುತ್ತದೆ.

  • ಪ್ರಮುಖವಾಗಿ ಸ್ಮಾರ್ಟ್‘ಫೋನ್ ಏರೋಪ್ಲೇನ್ ಮೋಡ್‘ನಲ್ಲಿದ್ದಾಗ ಕನಿಷ್ಟ ಪ್ರಮಾಣದ ಬ್ಯಾಟರಿಯನ್ನು ಬಳಸುತ್ತದೆ. ಯಾಕೆಂದರೇ ಈ ಸಂದರ್ಭದಲ್ಲಿ ಇಂಟರ್ನೆಟ್, ವೈಫೈ, ಬ್ಲೂಟೂತ್, ಜಿಪಿಎಸ್ ಮುಂತಾದವು ಅಟೋಮ್ಯಾಟಿಕ್ ಆಗಿ ಡಿಸೇಬಲ್ ಆಗುವುದರಿಂದ ಚಾರ್ಜ್ ಖಾಲಿಯಾಗುವ ಅವಕಾಶ ಇರುವುದಿಲ್ಲ. ಫೋನ್ ಏರೋಪ್ಲೇನ್ ಮೋಡ್ ನಲ್ಲಿದ್ದಾಗ  ಕೇವಲ 5% ಬ್ಯಾಟರಿಯನ್ನು ಮಾತ್ರ ಬಳಸುತ್ತದೆ.

  • ಅತೀ ಹೆಚ್ಚು ಬ್ಯಾಟರಿ ಸಾಮರ್ಥ್ಯವನ್ನು ಬಳಸುವ ಅನಗತ್ಯ ಆ್ಯಪ್ ಗಳನ್ನು ಸ್ಮಾರ್ಟ್ ಪೋನ್ ನಿಂದ ಅನ್ ಇನ್ ಸ್ಟಾಲ್ ಮಾಡುವುದು ಒಳಿತು. ಮಾತ್ರವಲ್ಲದೆ ಆಟೋಮ್ಯಾಟಿಕ್  ಆಗಿ ಆ್ಯಪ್ ಗಳು ಅಪ್ ಡೇಟ್ ಆಗುವುದರಿಂದ ಚಾರ್ಜ್ ಬೇಗನೆ ಖಾಲಿಯಾಗುವುದು.

– ಮಿಥುನ್ ಮೊಗೇರ

ಟಾಪ್ ನ್ಯೂಸ್

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.