ಕೊರೊನಾ ನಿರ್ಲಕ್ಷ ಬೇಡ: ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ
Team Udayavani, Feb 5, 2020, 6:00 AM IST
ಸಾಮಾನ್ಯವಾಗಿ ತ್ವರಿತವಾಗಿ ಹರಡುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ರಾಜ್ಯ ವಿಪತ್ತು ಅಥವಾ ದೇಶ ವಿಪತ್ತು ಎಂದು ಘೋಷಿಸಲಾಗುತ್ತದೆ.ಇಂತಹ ಸಂದರ್ಭದಲ್ಲಿ ಮುಕ್ತವಾಗಿ ಹಾಗೂ ಸುಲಭವಾಗಿ ಔಷಧಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ.
ಹೆಚ್ಚುವರಿ ಕ್ಲಿನಿಕ್‌ಗಳ ಮೂಲಕ ಜನರನ್ನು ಸುಲಭವಾಗಿ ಆರೈಕೆ ಮಾಡಲು ಹೆಚ್ಚುವರಿ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ಸಾಂಕ್ರಾಮಿಕರೋಗಗಳು ತೀವ್ರವಾಗಿ ಹರಡುತ್ತಿರುವುದರಿಂದ ಜನರು ಜೀವಾಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಗಟ್ಟಲು ಹೆಚ್ಚುವರಿ ತೀವ್ರ ನಿಗಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದು ಪ್ರತಿಯೊಬ್ಬರು ಚಿಕಿತ್ಸೆ ಪಡೆದುಕೊಳ್ಳಲು ನೆರವಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ರೋಗಿಯನ್ನು ಪರೀಕ್ಷೆ ಮಾಡುವುದಕ್ಕೂ ಇಂತಹ ಸಂದರ್ಭ ಪರೀಕ್ಷೆ ಮಾಡುವುದಕ್ಕ ತುಂಬಾ ವ್ಯತ್ಯಾಸಗಳಿರುತ್ತದೆ.
ಯಾವಾಗೆಲ್ಲ ಈ ಹಿಂದೆ ಘೋಷಣೆಯಾಗಿತ್ತು?
2009 ಪ್ರಪಂಚಾದ್ಯಂತ ಹಂದಿ ಜ್ವರ ವ್ಯಾಪಿಸಿದ ಹಿನ್ನೆಲೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಈ ವೈರಸ್‌ನಿಂದ 5.75 ಲಕ್ಷಕ್ಕೂ ಹೆಚ್ಚು ಸಾವಿಗೀಡಾಗಿದ್ದರು.
2014 : 2012ರಲ್ಲಿ ಕಾಣಿಸಿಕೊಂಡಿದ್ದ ಪೋಲಿಯೊ ಕಾಯಿಲೆಯ ನಿಯಂತ್ರಣ ವಿಫಲವಾಗಿದ್ದಲ್ಲದೆ 2014ರ ವೇಳೆಗೆ ಬಲಿಯಾದವರ ಸಂಖ್ಯೆ ದುಪ್ಪಟ್ಟಾಗಿತ್ತು. ಈ ಹಿನ್ನೆಲೆ ಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು.
2016 : 2016ರಲ್ಲಿ ಅಮೆರಿಕಾದ್ಯಂತ ಕಾಣಿಸಿಕೊಂಡ ಜಿಕಾ ರೋಗ ವೇಗವಾಗಿ ಹರಡಿದ ಪರಿಣಾಮ ವಿಶ್ವ ಆರೋಗ್ಯ ಸಂಸ್ಥೆ 2016ರಲ್ಲಿ ಜಿಕಾವನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು.
ಮಾರಕ ವೈರಸ್ ಕೊರೊನಾಗೆ ಜಗತ್ತೇ ತತ್ತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು “ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ’ ಘೋಷಿಸಿದೆ. ಕೇರಳ ದಲ್ಲಿಯೂ ಘೋಷಣೆ ಮಾಡಲಾಗಿದೆ. ಆರೋಗ್ಯ ತುರ್ತುಪರಿಸ್ಥಿತಿ ಎಂದರೇನು?, ಅನುಸರಿ ಸಬೇಕಾದ ಕ್ರಮಗಳೇನು ಮೊದಲಾದ ಮಾಹಿತಿ ಇಲ್ಲಿದೆ.
ನಾವು ಏನು ಮಾಡಬೇಕು ?
– ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದವರ ಮಾಹಿತಿಯು ಸದಾ ನಿಮ್ಮ ಬಳಿ ಇರಲಿ. ಫೋನ್‌ನಲ್ಲಿ ಸ್ಪೀಡ್ ಡಯಲ್ ರೂಪದಲ್ಲೋ ಅಥವಾ ಜೇಬಿನಲ್ಲಿ ಚೀಟಿ ಬರೆದಿಟ್ಟುಕೊಳ್ಳಿ.
– ನಿಮ್ಮ ಕುಟುಂಬ ಅಥವಾ ಸಂಬಂಧಿಕರೊಂದಿಗೆ ಮೊಬೈಲ್‌ನ ಜಿಪಿಎಸ್ ಸಂಪರ್ಕ ಇಟ್ಟುಕೊಳ್ಳಿ. ಸೋಂಕಿನ ಕುರಿತು ಸಂಶಯ ಬಂದಲ್ಲಿ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ.
– ಸೋಂಕು ಖಚಿತವಾದರೆ ನಿರ್ಲಕ್ಷ ಮಾಡಬೇಡಿ. ನಿಮ್ಮ ಗೆಳೆಯರ ಬಳಗದಲ್ಲಿಯೂ ನಿರ್ಲಕ್ಷ್ಯವಾಗದಂತಿರಲಿ.
– ಸೋಂಕು ಖಚಿತವಾದ ಮೇಲೆ ಸಾರ್ವಜನಿಕ ಸ್ಥಳ ಅಥವಾ ಸಾರ್ವಜನಿಕ ಸಾರಿಗೆ ಬಳಕೆಯಿಂದ ದೂರ ಇರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು
Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.