ನುಡಿಜಾತ್ರೆ ಸೌಂದರ್ಯಕ್ಕೆ ಮೈಸೂರಿನ ಮೆರುಗು
Team Udayavani, Feb 5, 2020, 3:08 AM IST
ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿಗೂ, ಅರಮನೆ ನಗರಿ ಮೈಸೂರಿಗೂ ಅದೇನೋ ಬಿಡದ ನಂಟು. ಅಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರಿನಲ್ಲಿ ಸ್ಥಳ ನೀಡಿ, ಪೋಷಣೆ ಮಾಡಿದರು. ಮೈಸೂರಿನ ಆಸರೆಯ ನೆರಳು ಈಗಿನ ಗಡಿನಾಡಿನ ಕಲಬುರಗಿ ಸಾಹಿತ್ಯ ಸಮ್ಮೇಳನದವರೆಗೂ ಮುಂದುವರಿದಿದೆ.
ತೊಗರಿ ಕಣಜ ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೆರಳು- ಬೆಳಕಿನ ಚಿತ್ತಾರದ ಜತೆಗೆ ವೇದಿಕೆಗೆ ಸೌಂದರ್ಯದ ಮೆರುಗನ್ನು ಕಲ್ಪಿಸಿರುವುದು ಕೂಡ ಮೈಸೂರು ಮೂಲದ ಸಂಸ್ಥೆ! ಅರಮನೆ ನಗರಿ ಮೈಸೂರಿನ ರೆಜೋವೆಟರ್ಸ್ ಸಂಸ್ಥೆ ಇಲ್ಲಿ ವೇದಿಕೆ ನಿರ್ಮಾಣ, ಧ್ವನಿವರ್ಧಕ, ಟೆಂಟ್ ಸೇರಿದಂತೆ ಹಲವು ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದೆ. ಕಳೆದ ಒಂದು ತಿಂಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಅಂದಚೆಂದ ನೀಡುವ ಕೆಲಸದಲ್ಲಿ ನಿರತವಾಗಿದೆ.
ಸಮ್ಮೇಳನದ ಸಭಾಮಂಟಪದ ಸಿಂಗಾರದಲ್ಲಿ ಸುಮಾರು 300 ಜನರ ಶ್ರಮವಿದೆ. ಸಾಂಸ್ಕೃತಿಕ ನಗರಿ ಮೈಸೂರು, ಪೇಡಾನಗರಿ ಹುಬ್ಬಳ್ಳಿ, ಸಿಲಿಕಾನ್ ಸಿಟಿ ಬೆಂಗಳೂರು, ಹೈದರಾಬಾದ್ ಮತ್ತು ಕಲಬುರಗಿಯವರು ಸೇರಿದಂತೆ ಹಲವು ಭಾಗಗಳ ಜನರು ಹಗಲು ರಾತ್ರಿ ಎನ್ನದೆ ಇಲ್ಲಿ ಒಂದಾಗಿ ಕನ್ನಡ ತಾಯಿಯ ಹಬ್ಬವನ್ನು ಅಂದಗಾಣಿಸುತ್ತಿದ್ದಾರೆ.
ಐದು ಸಮ್ಮೇಳನದಲ್ಲಿ ಕಾಯಕ: “ನಮಗೆ ಇದು ಮೊದಲ ಸಮ್ಮೇಳನವಲ್ಲ. ಮೈಸೂರು, ರಾಯಚೂರು, ಕೊಡಗು, ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲಸ ಮಾಡಿರುವ ಖುಷಿ ನಮ್ಮ ಸಂಸ್ಥೆಯದ್ದಾಗಿದೆ’ ಎಂದು ರಜೋವೆಟರ್ಸ್ ಸಂಸ್ಥೆಯ ಮಾಲಿಕ ಶ್ರೀನಿವಾಸ್ ಹೇಳಿದ್ದಾರೆ.
“ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಟೆಂಟ್, ಲೈಟಿಂಗ್, ಧ್ವನಿವರ್ಧಕ, ಎಲ್‌ಇಡಿ ವ್ಯವಸ್ಥೆಗಾಗಿಯೇ ಸುಮಾರು 2 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ವಿದ್ಯುತ್ ಕೈಕೊಟ್ಟರೆ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲು ಹೈದರಾಬಾದ್‌ನಿಂದ ಜನರೇಟರ್ ತರಲಾಗಿದೆ’ ಎಂದರು.
ಎಲ್ಲ ಸಮ್ಮೇಳನಕ್ಕಿಂತಲೂ ದೊಡ್ಡ ವೇದಿಕೆ: ವಿಶೇಷ ಅಂದರೆ ಮೈಸೂರು, ರಾಯಚೂರು, ಕೊಡಗು, ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕಿಂತ ದೊಡ್ಡ ವೇದಿಕೆಯನ್ನು ಹಾಕಲಾಗಿದೆ. ಕಳೆದ ಬಾರಿ ಧಾರವಾಡದಲ್ಲಿ 15 ಅಡಿ ಎತ್ತರದ ವೇದಿಕೆ ನಿರ್ಮಿಸಲಾಗಿತ್ತು. ಆದರೆ, ಈ ಬಾರಿ 24 ಅಡಿ ಎತ್ತರದ ವೇದಿಕೆ ಸಿದ್ಧಪಡಿಸಲಾಗಿದೆ. 20 ಸಾವಿರ ಆಸನಗಳನ್ನು ಅಣಿಗೊಳಿಸಲಾಗಿದೆ.
ಬಿಸಿಲಿನ ರಕ್ಷಣೆಗೆ ಜರ್ಮನ್ ಟೆಂಟ್: ಕಲಬುರಗಿಯ ಬಿಸಿಲಿನ ಝಳ ತಪ್ಪಿಸಲು ಸಮ್ಮೇಳನ ದಲ್ಲಿ ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಿಂದ ಈ ಟೆಂಟ್‌ನ್ನು ತರಲಾಗಿದೆ. ಹೊರಗೆ ಬಿಸಿಲು 45 ಡಿಗ್ರಿ ಸೆಲ್ಸಿಯಸ್ ಇದ್ದರೆ, ಟೆಂಟ್‌ನ ಒಳಗೆ 30 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
ಇದುವರೆಗೂ ಯಾವ ಸಮ್ಮೇಳನಕ್ಕೂ ಇಂಥ ಟೆಂಟ್ ಬಳಕೆ ಮಾಡಿಲ್ಲ. ಜಿಲ್ಲಾಧಿಕಾರಿಗಳು ಆಸಕ್ತಿ ವಹಿಸಿ ಈ ಸಮ್ಮೇಳನಕ್ಕೆ ತರಿಸಿದ್ದಾರೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದರು. ಈ ಜರ್ಮನ್ ಶೀಟ್‌ಗೆ ಬೆಂಕಿ, ಮಳೆ, ಉರಿ ಬಿಸಿಲನ್ನು ಸಲೀಸಾಗಿ ತಡೆದುಕೊಳ್ಳುವ ಶಕ್ತಿ ಇದೆ. ಜೋರಾಗಿ ಗಾಳಿ ಬೀಸಿದರೂ ಮಂಟಪ ಕಿಂಚಿತ್ತೂ ಅಲುಗಾಡದ ರೀತಿಯಲ್ಲಿ ಮಂಟಪದ ಕಂಬಗಳ ಜೋಡಣೆ ಮಾಡಲಾಗಿದೆ.
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.