ಅಂಗವೈಕಲ್ಯವನ್ನು ಮೆಟ್ಟಿ ನಿಂತು ಕುಮಾರಪರ್ವತ ಏರಿದ ಬೆಂಗಳೂರಿನ ಮೆಸ್ಕಾಂ ಅಧಿಕಾರಿ
26ರ ವಯಸ್ಸು, 26 ಕಿ.ಮೀ. ಚಾರಣ ಹಾಸನ ಮೂಲದ ಸುನಿಲ್ ಸಾಧನೆ
Team Udayavani, Feb 5, 2020, 6:30 AM IST
ಅಂಗವಿಕಲ ಸುನಿಲ್ ಪ್ರಥಮ ಬಾರಿಗೆ ಕುಮಾರಪರ್ವತ ಏರಿದರು.
ಸುಬ್ರಹ್ಮಣ್ಯ: ಅಂಗವೈಕಲ್ಯವನ್ನು ಮೆಟ್ಟಿ ನಿಂತು ಒಂಟಿಗಾಲಿನಲ್ಲಿ ಕುಮಾರ ಪರ್ವತವನ್ನು ಏರಿ ಸಾಧನೆ ಮಾಡಿದ್ದಾರೆ ಹಾಸನ ಮೂಲದ ಬೆಂಗಳೂರಿನ ಮೆಸ್ಕಾಂ ಅಧಿಕಾರಿ ಸುನಿಲ್. ಸುನಿಲ್ 6ನೇ ತರಗತಿ ಓದುತ್ತಿದ್ದಾಗ ಎಡಗಾಲಿಗೆ ಗ್ಯಾಂಗ್ರಿನ್ ಆಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ 10 ವರ್ಷಗಳ ಹಿಂದೆ ವೈದ್ಯರ ಸಲಹೆಯಂತೆ ಎಡಗಾಲನ್ನು ತುಂಡರಿಸಲಾಗಿತ್ತು. ಅಂಗ ವೈಕಲ್ಯದ ನಡುವೆಯೂ ಬಿಇ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಮಾಗಡಿಯಲ್ಲಿ ಮೆಸ್ಕಾಂ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುನಿಲ್‌ಗೆ ಬಾಲ್ಯದಿಂದಲೇ ಚಾರಣದ ಹವ್ಯಾಸ. ಬಿಡುವಿದ್ದಾಗಲೆಲ್ಲ ಗೆಳೆಯರ ಜತೆಗೆ ಚಾರಣಕ್ಕೆ
ಹೋಗುತ್ತಿದ್ದರು. ಬೆಂಗಳೂರು ಆಸು ಪಾಸಿನ ಶಿವಗಂಗೆ ಬೆಟ್ಟ, ಮಾಗಡಿಯ ಸಾವನದುರ್ಗಾ, ಕುಣಿಗಲ್‌ನ ಉತ್ರಿ ದುರ್ಗ, ತಡಿಯಂಡ ಮೋಳ್ ಇತ್ಯಾದಿಗಳನ್ನು ಈಗಾಗಲೇ ಒಂಟಿಗಾಲಿ ನಲ್ಲಿ ಏರಿಳಿದಿದ್ದಾರೆ. ಈ ಬಾರಿ ಕುಮಾರ ಪರ್ವತ ಚಾರಣ ನಿರ್ಧಾರ ಕೈಗೊಂಡಿದ್ದು, ಸಾಧಿಸಿದ್ದಾರೆ. ಅಂಗವಿಕಲರೊಬ್ಬರ ಕುಮಾರ ಪರ್ವತ ಏರಿರುವುದು ಇದೇ ಮೊದಲು.
ಊರುಗೋಲು, ಗೆಳೆಯರ ಸಹಾಯ
26ರ ಹರೆಯದ ಸುನಿಲ್ ಅವರೊಳಗೊಂಡ ಬೆಂಗಳೂರಿನ 8 ಮಂದಿ ಯುವಕರ ತಂಡ ಜ. 26ರಂದು ಕುಮಾರಪರ್ವತಕ್ಕೆ ತೆರಳಿತ್ತು. ಸುನಿಲ್ ತನ್ನ ಸಾಹಸಕ್ಕೆ ಊರುಗೋಲು ಮತ್ತು ಗೆಳೆಯರ ಸಹಾಯ ಪಡೆದಿದ್ದರು. ಮಧ್ಯಾಹ್ನ 1ಕ್ಕೆ ದೇವರಗದ್ದೆಯಿಂದ ಹೊರಟು ಸಂಜೆ 6ಕ್ಕೆ ಗಿರಿಗದ್ದೆ ತಲುಪಿ ರಾತ್ರಿ ವಿಶ್ರಾಂತಿ ಪಡೆದರು. ಜ. 27ರಂದು ಬೆಳಗ್ಗೆ ಪರ್ವತದ ತಪ್ಪಲಿಗೆ ತಲುಪಿ ಸಂಜೆ 6ರ ವೇಳೆಗೆ ಸುಬ್ರಹ್ಮಣ್ಯಕ್ಕೆ ಮರಳಿದರು. ಅವರು ಕ್ರಮಿಸಿದ ಒಟ್ಟು ದೂರ 26 ಕಿ.ಮೀ. ಬೆಂಗಳೂರಿಗೆ ಸ್ಕೂಟಿಯಲ್ಲಿ ಪಯಣ ಸುನಿಲ್ ತಂದೆ ಲಿಂಗರಾಜ್ ಹಾಸನದಲ್ಲಿ ಲಾರಿ ಚಾಲಕ, ತಾಯಿ ಗೃಹಿಣಿ. ಸಹೋದರ ಖಾಸಗಿ ಉದ್ಯೋಗಿ. ಅವಿವಾಹಿತರಾಗಿರುವ ಸುನಿಲ್ ಕಷ್ಟದಲ್ಲಿ ಬೆಳೆದು ಬಂದವರು. ಕ್ರೀಡೆಯಲ್ಲಿ ಆಸಕ್ತಿ ಇರುವ ಅವರು ಹಾಸನ-ಬೆಂಗಳೂರು ನಡುವೆ ಸ್ಕೂಟಿಯಲ್ಲಿ ಸಂಚರಿಸುತ್ತಾರೆ.
ಮೆಚ್ಚುಗೆ
ಸುನಿಲ್ ಅವರ ಕುಮಾರಪರ್ವತ ಏರಿರುವ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬೆಟ್ಟ ಏರುವುದು ಸುಲಭವಲ್ಲ
ಚಾರಣಿಗರಿಗೆ ಕುಮಾರ ಪರ್ವತದ ಚೆಲುವಿನ ಹಾದಿ ಸವಾಲು ಮತ್ತು ಸೆಣಸಾಟದ ದಾರಿಯೂ ಹೌದು. ಕಲ್ಲುಗಳ ಮೇಲೆ ಜಾರಿ ಇಳಿದು ತೆರಳುವ ಕಡಿದಾದ ಮಾರ್ಗದಲ್ಲಿ ಹಲವಾರು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆರಂಭದ ಮೂರ್ನಾಲ್ಕು ಕಿ.ಮೀ. ದೂರ ದಟ್ಟ ಕಾಡು, ಕಾಡುಪ್ರಾಣಿಗಳ
ಹಾವಳಿಯಿದೆ, ಆನೆಗಳು ಅಡ್ಡಾಡುತ್ತವೆ. ಇಲ್ಲಿ ಎಚ್ಚರಿಕೆಯಿಂದ ನಡೆಯಬೇಕು. ಇವೆಲ್ಲದರ ನಡುವೆ ಎಂಟೆದೆಯ ಧೈರ್ಯ ತೋರಿದ್ದಾರೆ ಸುನಿಲ್.
ಒಂಟಿ ಕಾಲಿನಲ್ಲಿ 5 ಕಿ.ಮೀ. ಓಡಿದ ಮಹಾರಾಷ್ಟ್ರದ ಸಾಹಸಿಗ
ಮಂಗಳೂರು, ಫೆ. 4: ಸಾಧನೆ, ಸಾಹಸಕ್ಕೆ ಅಂಗ ಊನ ನೆಪವಲ್ಲ ಎಂಬುದನ್ನು ಮಹಾರಾಷ್ಟ್ರ ಮೂಲದ ಸಾಹಸಿಗರೊಬ್ಬರು ಮಂಗಳೂರಿನಲ್ಲಿ ತೋರಿಸಿಕೊಟ್ಟಿದ್ದಾರೆ. ಕೈಯಲ್ಲಿ ಊರುಗೋಲು ಹಿಡಿದು ಒಂಟಿ ಕಾಲಿನಲ್ಲಿ 5 ಕಿ.ಮೀ. ಓಡುವ ಮೂಲಕ ಸಾಹಸ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಆ್ಯತ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಫಿಟ್ ಇಂಡಿಯಾ ಥೀಂನಡಿ ಇತೀಚೆಗೆ “ಸಹ್ಯಾದ್ರಿ 10ಕೆ ರನ್ ಮಂಗಳೂರು’ ಮೆಗಾ ಮ್ಯಾರಥಾನ್ ನಡೆಸಲಾಗಿತ್ತು. ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದ ಲೋನರ್‌ನ ಜಾವೇದ್ ಚೌದರಿ ಅವರೂ ಮ್ಯಾರಥಾನ್‌ನಲ್ಲಿ ಭಾಗವಹಿಸುವುದಕ್ಕಾಗಿಯೇ ಮಂಗ ಳೂರಿಗೆ ಬಂದಿದ್ದರು. ಆದರೆ ಅಪಘಾತದಲ್ಲಿ ಬಲಗಾಲನ್ನು ಕಳೆದುಕೊಂಡಿದ್ದ ಅವರಿಗೆ ನಡೆದಾಡುವುದಕ್ಕೆ ಎಡಗಾಲೇ ಆಸರೆ. ಹಾಗೆಂದು ಅಂಗ ನ್ಯೂನತೆಗಾಗಿ ಮರುಗದೆ, ಮಂಗಳೂರಿಗೆ ಆಗಮಿಸಿ ಕೈಯಲ್ಲಿ ಊರುಗೋಲು ಹಿಡಿದುಕೊಂಡು ಎಡಗಾಲಿನಲ್ಲೇ ಓಡಿ 5 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ.
ಲಾಲ್‌ಬಾಗ್‌ನ ಮಂಗಳಾ ಸ್ಟೇಡಿಯಂನಿಂದ ಹೊರಟು 10ಕೆ ರನ್ ರೋಡ್ ಮ್ಯಾಪ್‌ನಲ್ಲಿ ತಿಳಿಸಿ ರುವಂತೆ ನಗರದಲ್ಲಿ 5 ಕಿ.ಮೀ. ಓಡಿ ಮತ್ತೆ ಮಂಗಳಾ ಸ್ಟೇಡಿಯಂ ತಲುಪಿದ್ದಾರೆ. ಬದುಕಿನಲ್ಲಿ ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು ಎಂಬ ಅವರ ಇಚ್ಛೆಯೇ ಇದಕ್ಕೆ ಕಾರಣವಂತೆ.
ಒಂಟಿ ಕಾಲಲ್ಲಿ ಬೆಟ್ಟ ಹತ್ತುವುದು ಕಷ್ಟ ಎನಿಸಿದರೂ ದೈಹಿಕ ವ್ಯಾಯಾಮ ನೀಡುವ ಚಾರಣದಿಂದ ದೂರವಿರಲು ಇಷ್ಟವಿಲ್ಲ. ಪರ್ವತಾರೋಹಣಕ್ಕೆ ಹೊರಟಾಗಲೆಲ್ಲ ಸ್ನೇಹಿತರು ಸಹಾಯಕ್ಕೆ ನಿಲ್ಲುತ್ತಾರೆ. ಊರುಗೋಲನ್ನು ಬಳಸಿ ಸಲೀಸಾಗಿ ಬೆಟ್ಟ ಹತ್ತಿದ್ದೇನೆ. ವನ್ಯಜೀವಿ ವಿಭಾಗದ ಅಧಿಕಾರಿಗಳು ಪ್ರೋತ್ಸಾಹ ನೀಡಿದ್ದಾರೆ.
– ಸುನೀಲ್ ಭುವನಹಳ್ಳಿ, ಚಾರಣಿಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.