ರಾಮಪುರ ಶಾಲೆಗಿಲ್ಲ ಮೂಲ ಸೌಕರ್ಯ
ಪ್ರತಿನಿತ್ಯ ಹಣ ನೀಡಿ ಶುದ್ಧ ನೀರು ಖರೀದಿ ತರಗತಿ ಕೋಣೆ ಶಿಥಿಲ-ಮಕ್ಕಳಿಗೆ ಆತಂಕ
Team Udayavani, Feb 5, 2020, 12:46 PM IST
ಗುರುಮಠಕಲ್: ಶುದ್ಧ ಕುಡಿಯುವ ನೀರಿನ ಕೊರತೆ. ತಿಪ್ಪೆ ಗುಂಡಿ ದಾಟಿ ಶಾಲೆಯೊಳಗೆ ಪ್ರವೇಶ. ಶೌಚಾಲಯದ ಕೊರತೆ. ಹೆಚ್ಚುವರಿ ಕೊಠಡಿಗಳ ಕೊರತೆ ಮುಂತಾದ ಸೌಲಭ್ಯಗಳಿಂದ ರಾಮಪುರ ಶಾಲೆ ವಂಚಿತವಾಗಿದೆ.
ತಾಲೂಕಿನ ರಾಮಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1958ರಲ್ಲಿ ಸ್ಥಾಪನೆಯಾಗಿದೆ. 1ರಿಂದ 7ನೇ ತರಗತಿ ವರಗೆ ಒಟ್ಟು 298 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಶಾಲೆ ಎಂದು ತಾಲೂಕಿನಲ್ಲಿ ಗುರುತಿಸಲಾಗಿದೆ. ಶಾಲೆ ಅಂಗಳದಲ್ಲಿರುವ ಕೊಳವೆಬಾವಿಯಿಂದ ಉಪ್ಪಿನ ಅಂಶದಿಂದ ಕೂಡಿರುವ ನೀರು ಬರುತ್ತಿದೆ. ಹಾಗಾಗಿ ನೀರು ಕುಡಿಯಲು ಹಾಗೂ ಅಡುಗೆ ಮಾಡಲು ಉಪಯೋಗವಾಗಿಲ್ಲ. ಆದ್ದರಿಂದ ಶಾಲೆ ಮುಂಭಾಗದಲ್ಲಿರುವ ನೀರು ಶುದ್ಧೀಕರಣ ಘಟಕದಿಂದ ಒಂದು ಕ್ಯಾನ್‌ಗೆ 3 ರೂ. ರಂತೆ ಹಣ ನೀಡಿ ಒಟ್ಟು 6 ಕ್ಯಾನ್ ಖರೀದಿಸುತ್ತಾರೆ. ಸರಕಾರಿ ಶಾಲೆಯಲ್ಲಿ ದಿನನಿತ್ಯ ಹಣ ಎಲ್ಲಿಂದ ತಂದು ಪಾವತಿಸಬೇಕು. ಶಾಲೆ ಮಕ್ಕಳ ಅನುಕೂಲಕ್ಕಾಗಿ ಉಚಿತವಾಗಿ ಫಿಲ್ಟರ್ ನೀರು ಒದಗಿಸುವಂತೆ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಮುಖ್ಯ ಶಿಕ್ಷಕರು ದೂರಿದ್ದಾರೆ.
ಶಾಲೆಯಲ್ಲಿ ಒಟ್ಟು 8 ಕೋಣೆಗಳಿವೆ. ಇನ್ನು ಎರಡು ಕೋಣೆಗಳು ನಿರ್ಮಾಣವಾಗಿವೆಯಾದರೂ ಇನ್ನೂ ಹಸ್ತಾಂತರವಾಗಿಲ್ಲ. ಮತ್ತೂಂದು ಕೋಣೆ ಶಿಥಿಲವಾಗಿದೆ. ಶಿಥಿಲವಾಗಿರುವ ಕಟ್ಟಡ ನೆಲಸಮ ಮಾಡಿ ಹೊಸ ಕೋಣೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಲೆ ಗೇಟ್ ಮುಂದಿರುವ ಖಾಲಿ ಸ್ಥಳವನ್ನು ಗ್ರಾಮಸ್ಥರು ತಿಪ್ಪೆ ಗುಂಡಿಗೆ ಗಳಾಗಿ ಬಳಸಿಕೊಡಿದ್ದಾರೆ. ವಿದ್ಯಾರ್ಥಿಗಳು ತಿಪ್ಪೆ ಗುಂಡಿ ದಾಟಿ ಮೂಗು ಮುಚ್ಚಿಕೊಂಡು ಶಾಲೆಯೊಳಗೆ ಪ್ರವೇಶಿಸುವ ಅನಿವಾರ್ಯತೆ ಎದುರಾಗಿದೆ .
ಶಾಲೆ ಮಕ್ಕಳು ದಿನನಿತ್ಯ ಕುಡಿಯಲು ಉಪ್ಪು ನೀರು ಅವಲಂಭಿಸಿರುವ ವಿಷಯವನ್ನು ಮುಖ್ಯ ಶಿಕ್ಷಕರು ನನ್ನ ಗಮನಕ್ಕೆ ತಂದಿದ್ದಾರೆ. ಹಣ ಪಾವತಿಸಿ ಶುದ್ಧೀಕರಣ ಘಟಕದಿಂದ ಕುಡಿಯಲು ನೀರು ತರುತ್ತಿರುವುದು ಗೊತ್ತಿದೆ. ಶಾಲೆ ಮಕ್ಕಳಿಗೆ ಉಚಿತವಾಗಿ ಕುಡಿಯಲು ನೀರು ಒದಗಿಸುವಂತೆ ಸೂಚಿಸುತ್ತೇನೆ.
ಮಹಾದೇವಪ್ಪ,
ಅಭಿವೃದ್ಧಿ ಅಧಿಕಾರಿ ಗಾಜರಕೋಟ್
ಕೋಣೆ ಶಿಥಿಲವಾಗಿರುವುದರಿಂದ ಮಕ್ಕಳಿಗೆ ಆತಂಕ ಎದುರಾಗಿದೆ. ಹಳೆ ಕೋಣೆ ಶೀಘ್ರ ದುರಸ್ತಿಗೊಳಿಸಬೇಕು ಶಾಲೆ ಗೇಟ್ ಮುಂದಿರುವ ತಿಪ್ಪೆಗುಂಡಿ ತೆರವುಗೊಳಿಸಬೇಕು ಮತ್ತು ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡಬೇಕು.
ನರಸಪ್ಪ,
ಸಹ ಶಿಕ್ಷಕರು ರಾಮಪುರ ಶಾಲೆ’
ಚೆನ್ನಕೇಶವುಲು ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.