ಬೆಲೆ ಮೊದಲೇ ನಿಗದಿ ಮಾಡಿ
Team Udayavani, Feb 5, 2020, 2:03 PM IST
ಗದಗ: ರೈತರ ಬೆಳೆಗಳಿಗೆ ಮುಂಚಿತವಾಗಿ ಸೂಕ್ತ ಖರೀದಿ ಬೆಲೆ ನಿಗದಿಗೊಳಿಸುವುದು ಹಾಗೂ ಸಂಚಾರಿ ಖರೀದಿ ಕೇಂದ್ರ ವ್ಯವಸ್ಥೆಯನ್ನು ಜಾರಿಗೊಳಿಸಿದಲ್ಲಿ ರೈತರ ಬೆಳೆಗಳಿಗೆ ನ್ಯಾಯ ಸಮ್ಮತ ಬೆಲೆ ದೊರಕಲು ಸಾಧ್ಯವೆಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
ಜಿ.ಪಂ., ಕೃಷಿ ಇಲಾಖೆ ಹಾಗೂ ಐಸಿಎಆರ್ ಕೆ.ಎಚ್. ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಡೆದ ಪಡಿತರ ವ್ಯವಸ್ಥೆಯಲ್ಲಿ ಅವಶ್ಯವಿರುವ ಹಿಂಗಾರು ಜೋಳ ಉತ್ಪಾದಿಸಿ, ವ್ಯವಸ್ಥೆ ಸದೃಢಗೊಳಿಸುವ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸದ್ಯ 4 ಕೋಟಿ 60 ಲಕ್ಷ ಪಡಿತರ ಕಾರ್ಡ್‌ದಾರರಿದ್ದು, 2020- 21ನೇ ಸಾಲಿನ ಜನಗಣತಿ ಪ್ರಕಾರ ಸುಮಾರು 7 ಕೋಟಿ ಜನಸಂಖ್ಯೆ ನಿರೀಕ್ಷಿಸಲಾಗಿದೆ. ಹೀಗಾಗಿ ಭವಿಷ್ಯದಲ್ಲಿ 42 ಲಕ್ಷ ಟನ್ ಅಕ್ಕಿ, 10 ಲಕ್ಷ ಟನ್ ಜೋಳ ಹಾಗೂ 10 ಲಕ್ಷ ಟನ್ ರಾಗಿ ಪಡಿತರದಾರರಿಗೆ ಬೇಕಾಗುತ್ತದೆ. ಪಡಿತರದಾರರಿಗೆ ಕೇವಲ ಅಕ್ಕಿ ಮತ್ತು ಗೋಧಿ ನೀಡುತ್ತಿರುವುದರಿಂದ ಕೊಟ್ಟ ಅಕ್ಕಿಯನ್ನು ಮಾರಾಟ ಮಾಡಿ, ಜೋಳ ಖರೀದಿ ಮಾಡುತ್ತಿರುವ ಪ್ರಸಂಗಗಳು ಕಂಡುಬರುತ್ತಿದ್ದು, ಅಕ್ಕಿ ಮತ್ತು ಗೋಧಿಯ ಜೊತೆಗೆ ಜೋಳ ವಿತರಿಸಬೇಕು. ಇದರಿಂದ ಜೋಳದ ಉತ್ಪಾದನೆ ಹೆಚ್ಚುತ್ತಲ್ಲದೇ, ಪಡಿತರ ವ್ಯವಸ್ಥೆ ಸದೃಢಗೊಳಿಸಿದಂತಾಗುತ್ತದೆ. ಬೆಳೆಯ ಉತ್ಪಾದನೆಗಿಂತ ಮೊದಲೇ ಬೆಲೆ ನಿಗದಿಯಾದರೆ ಮಾರುಕಟ್ಟೆ ಹಾಗೂ ಉತ್ಪಾದನೆಗೆ ನಿರ್ದಿಷ್ಟತೆ ಬರುತ್ತದೆ. ಬೆಳೆ ವಿಮೆ ಯೋಜನೆ ನ್ಯೂನತೆಗಳಿರುವುದರಿಂದ ಯೋಜನೆಯ ಫಲ ಎಲ್ಲರಿಗೂ ದೊರಕುತ್ತಿಲ್ಲ ಎಂದು ಹನುಮನಗೌಡ ಬೆಳಗುರ್ಕಿ ಹೇಳಿದರು.
ತೋಟಗಾರಿಕಾ ಉತ್ಪಾದಕ ಸಂಘದ ಅಧ್ಯಕ್ಷ ಜೆ.ಆರ್. ಓದುಗೌಡರ ಮಾತನಾಡಿ, ಇಡೀ ವಿಶ್ವಕ್ಕೆ ಕೃಷಿಯ ಪಾಠ ಹೇಳಿದ ರಾಷ್ಟ್ರ ನಮ್ಮದು. ರೈತರಿಂದ ಖರೀದಿ ಮಾಡಿದ ಉತ್ಪಾದನೆ ರಪ್ತಾಗುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬೇರೆ ದೇಶಗಳಿಗೆ ಅವಶ್ಯಕವಿರುವ ಬೆಳೆ ಬೆಳೆದು ರಫ್ತು ಮಾಡಿದರೆ ರೈತರ ಆದಾಯ ತನ್ನಿಂದ ತಾನೇ ದ್ವಿಗುಣಗೊಳ್ಳುತ್ತದೆ ಎಂದರು. ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪಟಿ.ಎಸ್. ಮಾತನಾಡಿ, ಪಡಿತರರಿಗೆ ಅಕ್ಕಿ, ಗೋಧಿ ವಿತರಿಸುತ್ತಿರುವುದರಿಂದ ಜೋಳದ ಉತ್ಪಾದನೆ 80 ಸಾವಿರ ಹೆಕ್ಟೇರ್ ನಿಂದ 60 ಸಾವಿರ ಹೆಕ್ಟೇರ್‌ಗೆ ಇಳುವರಿ ಕಡಿಮೆಯಾಗಿದೆ. ಹೀಗಾಗಿ 20-30 ವರ್ಷಗಳಿಂದಿರುವ ಜೋಳದ ಹಳೆ ತಳಿಯ ಬದಲಾಗಿ ಪರ್ಯಾಯ ಹೊಸ ತಳಿ ಬರಬೇಕಿದೆ ಎಂದು ಮಾಹಿತಿ ನೀಡಿದರು.
ಕೃಷಿ ಉಪ ನಿರ್ದೇಶಕ ವೀರೇಶ ಹುನಗುಂದ, ಹುಲಕೋಟಿ ಕೃಷಿ ವಿಜ್ಞಾನ ಮುಖ್ಯಸ್ಥ ಎಲ್.ಜಿ.ಹಿರೇಗೌಡರ, ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.