ಅಧ್ಯಕ್ಷ ಭಾಷಣದ ಹಿಂದಿನ ಕತೆ


Team Udayavani, Feb 6, 2020, 5:54 AM IST

sam-8

ಪ್ರತಿಯೊಂದು ಸಾಹಿತ್ಯ ಸಮ್ಮೇಳನದ ಅತಿಮುಖ್ಯ ಅಂಶವೆಂದರೆ ಸಮ್ಮೇಳನಾಧ್ಯಕ್ಷರ ಭಾಷಣ. ಅದನ್ನು ತಯಾರಿಸುವುದು ಹೇಗೆ? ತಂತಮ್ಮ ಭಾಷಣಗಳನ್ನು ಸಿದ್ಧಪಡಿಸುವಾಗ ಹೇಗೆಲ್ಲಾ ಶ್ರಮ ಹಾಕಿದರು? ಯಾರ್ಯಾರ ಮಾದರಿಗಳನ್ನು ಅಧ್ಯಯನಕ್ಕೊಳಪಡಿಸಿದರು? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಈ ಮೊದಲು ಸಮ್ಮೇಳನಾಧ್ಯಕ್ಷರಾಗಿದ್ದವರು ಉತ್ತರಿಸಿದ್ದಾರೆ.

ನನ್ನ ಭಾಷಣ, ಸಮಕಾಲೀನ ಚೌಕಟ್ಟಿನೊಳಗೆ ಕಲೆ- ಸಾಹಿತ್ಯ- ಸಾಮಾಜಿಕ- ರಾಜಕೀಯ ಇವಿಷ್ಟೂ ವಿಷಯಗಳನ್ನು ಒಳಗೊಳ್ಳಬೇಕು ಎಂಬುದರತ್ತಲೇ ನನ್ನ ಚಿತ್ತವಿತ್ತು. ಹಿಂದಿನ ಸಮ್ಮೇಳನಾಧ್ಯಕ್ಷರ ಭಾಷಣಗಳತ್ತ ಒಮ್ಮೆ ಕಣ್ಣಾಡಿಸಿದೆ. ನೆನಪಾದಾಗಲೆಲ್ಲಾ ಟಿಪ್ಪಣಿ ಮಾಡಿಟ್ಟುಕೊಳ್ಳುತ್ತಿದ್ದೆ. ಏಕೆಂದರೆ, ಬರೆಯುವುದಕ್ಕೆ ಕುಳಿತರೆ ಮತ್ತೆ ಮಧ್ಯದಲ್ಲಿ ಟಿಪ್ಪಣಿ ಮಾಡುವುದಿಲ್ಲ, ಇನ್ಯಾವುದೋ ವಿಷಯದ ಬೆನ್ನತ್ತುವುದಿಲ್ಲ. ಏನೇ ಬರೆಯುವುದಿದ್ದರೂ ಹಾಳೆ ಮತ್ತು ಇಂಕ್‌ ಪೆನ್ನು ನನ್ನ ಸಂಗಾತಿ. ಅಧ್ಯಕ್ಷ ಭಾಷಣವನ್ನು ಬರೆದು ಮುಗಿಸಲು ಒಂದು ವಾರ ತೆಗೆದುಕೊಂಡೆ. ಬರೆದು ಮುಗಿಸಿ, ಸೀದಾ ಪರಿಷತ್ತಿನವರಿಗೆ ತಲುಪಿಸಿ ಹಗುರಾದೆ.
– ಚಂಪಾ
ಸಮ್ಮೇಳನಾಧ್ಯಕ್ಷರು, ಮೈಸೂರು, 2017

ಬರೆಯುವ ಮುನ್ನ ಹಳೆಯ ಸಮ್ಮೇಳನಾಧ್ಯಕ್ಷರ ಭಾಷಣಗಳು ಹೇಗಿದ್ದವು ಎಂದು ತಿಳಿಯಲು ಪತ್ರಿಕೆ ಮತ್ತು ಪುಸ್ತಕಗಳನ್ನು ತಿರುವಿ ಹಾಕಿದೆ. ಅವುಗಳಲ್ಲಿ ನನ್ನನ್ನು ಪ್ರಭಾವಿಸಿದ್ದು ಅ.ನ.ಕೃ ಅವರ ಭಾಷಣ ಪ್ರತಿ. ಯಾವುದೇ ವಿಚಾರದ ಕುರಿತು ಅವರಿಗಿದ್ದ ಸ್ಪಷ್ಟ ನಿಲುವು, ವೇದಿಕೆ ಮೇಲಿನ ರಾಜಕಾರಣಿಗಳನ್ನು ಮೆಚ್ಚಿಸಲು ಇಲ್ಲದ ಒಲವು ನನಗಿಷ್ಟವಾಯಿತು. ನನಗೆ ಬರೆಯುವುದಕ್ಕೆ ಇಂಥದ್ದೇ ಸಮಯ ಎಂದೇನಿಲ್ಲ. ಯಾವಾಗ ಬರೆಯುವ ಮನಸ್ಸು ಬರುತ್ತೋ ಆವಾಗ ಬರೆದುಬಿಡುತ್ತೇನೆ. ನಾನು ಮಲೆನಾಡಿನವನಾದ್ದರಿಂದ ಭಾಷಣದಲ್ಲಿ ಇಕ್ಕೇರಿ, ಕೆಳದಿ ಪ್ರದೇಶಗಳ ಪ್ರಸ್ತಾಪವನ್ನು ಮಾಡಿದೆ. ಆಗಿನ ಕಾಲದ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನೂ ನನ್ನ ಭಾಷಣ ಒಳಗೊಂಡಿತ್ತು.
– ನಾ. ಡಿಸೋಜ
ಸಮ್ಮೇಳನಾಧ್ಯಕ್ಷರು, ಕೊಡಗು, 2014

ನಾನು ವಿಶೇಷ ತಯಾರಿಯನ್ನೇನೂ ಮಾಡಿಕೊಳ್ಳಲಿಲ್ಲ. ನನ್ನ ಎಲ್ಲಾ ಕಾರ್ಯಕ್ರಮಗಳಿಗೆ ಯಾವ ರೀತಿ ಸಿದ್ಧಪಡಿಸುತ್ತೇನೆಯೋ ಅದೇ ಸಿದ್ಧತೆ. ಬಿಡುವು ಸಿಕ್ಕಾಗ ಅಂಶಗಳನ್ನು ಗುರುತಿಟ್ಟುಕೊಳ್ಳುತ್ತಿದ್ದೆ. ಬರೆಯುವಾಗ ಅವನ್ನು ಕ್ರೋಢೀಕರಿಸಿ ಬರೆಯುತ್ತಿದ್ದೆ.. ನನ್ನ ಹಿಂದಿನ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲಿ ಕುವೆಂಪು, ಕಾರಂತರ ಭಾಷಣಗಳು ಹಿಡಿಸಿದವು. ಯಾವ ಕಾರಣಕ್ಕೆ ಅಂತಂದರೆ ಅದರಲ್ಲಿದ್ದ “ಸಮಕಾಲೀನ ಪ್ರಜ್ಞೆ’ಯಿಂದಾಗಿ. ನನ್ನ ಪರಿಚಿತ ವಲಯದ ಅನೇಕರು ಕೆಲವೊಂದು ಅಂಶಗಳನ್ನು ಒಳಗೊಳ್ಳುವಂತೆ ಸೂಚಿಸಿದ್ದರು. ಕೆಲವರಂತೂ, ಯಾವುದೋ ಕಾಯಿಲೆ ಕುರಿತು ಪ್ರಸ್ತಾಪ ಮಾಡಿ ಎಂದಿದ್ದರು. ಆದರೆ, ಕನ್ನಡ ಎನ್ನುವುದು ಒಂದು ಸಮುದಾಯ, ಸಂಸ್ಕೃತಿ. ಅದನ್ನು ಒಳಗೊಳ್ಳುವ ಸಮ್ಮೇಳನದ ಭಾಷಣಕ್ಕೆ ಒಂದು ಸಾಂಸ್ಕೃತಿಕ ಚೌಕಟ್ಟಿದೆ. ಏನು ಹೇಳಿದರೂ ಅದರೊಳಗೆಯೇ ಹೇಳಬೇಕಿರುತ್ತದೆ.
– ಬರಗೂರು ರಾಮಚಂದ್ರಪ್ಪ
ಸಮ್ಮೇಳನಾಧ್ಯಕ್ಷರು, ರಾಯಚೂರು, 2016

ನಾನು ಸಾಹಿತ್ಯದ ವಿದ್ಯಾರ್ಥಿ. ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ಹಿಂದಿನ ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಒಟ್ಟಾಗಿಸಿ ಸೇರಿಸಿ ಮುದ್ರಿಸಿದ್ದರು. ಆ ಪುಸ್ತಕವನ್ನು ಬಹಳ ಹಿಂದೆಯೇ ಓದಿ ಹೀರಿಕೊಂಡಿದ್ದೆ. ಹೀಗಾಗಿ, ನನಗೆ ಕನ್ನಡ ನಾಡು ನುಡಿ ನೆಲದ ಜಲದ ಕುರಿತು ವಿಶೇಷ ಅಧ್ಯಯನದ ಅಗತ್ಯ ಬರಲಿಲ್ಲ. ಮೂರು ವಾರಗಳ ಕಾಲ ಭಾಷಣ ತಯಾರಿಯಲ್ಲಿ ತೊಡಗಿದೆ. ಯುವಜನತೆ, ವೈಜ್ಞಾನಿಕ ಮನೋಭಾವ, ಮೂಢನಂಬಿಕೆ ನಿರ್ಮೂಲನೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದೆ. ಭಾಷಣ ಬರೆದು ಮುಗಿಸಿದ ನಂತರ ಅದನ್ನು ನಮ್ಮ ಮನೆಯವರಾದ ನಾಗರಾಜ ಹಂಪನಾರಿಗೆ ತೋರಿಸಿದೆ. ಅವರು ಬಹುತೇಕ ಅಂಶಗಳನ್ನು ಸೇರಿಸಿದ್ದೀಯಾ ಎಂದು ಖುಷಿಪಟ್ಟರು.
– ಕಮಲಾ ಹಂಪನಾ
ಸಮ್ಮೇಳನಾಧ್ಯಕ್ಷರು, ಮೂಡಬಿದ್ರೆ, 2003

ಅಧ್ಯಕ್ಷ ಭಾಷಣದಲ್ಲಿ ಸೇರಿಸಬೇಕಾದ ವಿಚಾರಗಳ ಬಗ್ಗೆ ಆಲೋಚನೆ ಮಾಡುವುದಕ್ಕೇ ಸುಮಾರು ಹದಿನೈದು ದಿನಗಳು ಹಿಡಿದವು. ಮುಖ್ಯ ವಿಚಾರಗಳನ್ನು ಪಟ್ಟಿ ಮಾಡಿ ಅವುಗಳನ್ನು ಮೂರು ನಾಲ್ಕು ದಿನಗಳ ಕಾಲ ವಿಶ್ಲೇಷಣೆ ಮಾಡಿದೆ. ಅನಂತರ ಭಾಷಣದ ಬರವಣಿಗೆಗೆ ಎರಡು ದಿನಗಳು ತಗುಲಿದವು. ಭಾಷಣ ಸುಮಾರು 45 ಪುಟಗಳಷ್ಟಿತ್ತು. ಬರವಣಿಗೆಯ ಸಂದರ್ಭದಲ್ಲಿ ಎಂ. ಆರ್‌. ಶ್ರೀನಿವಾಸಮೂರ್ತಿಯವರು ಮಾಡಿದ್ದ ಸಮ್ಮೇಳನಾಧ್ಯಕ್ಷರ ಭಾಷಣ ಮತ್ತು ಡಿ.ವಿ.ಗುಂಡಪ್ಪನವರ ಜೀವನ ಸೌಂದರ್ಯ ಮತ್ತು ಸಾಹಿತ್ಯ’, “ಸಂಸ್ಕೃತಿ’ ಮತ್ತು ಎ.ಆರ್‌. ಕೃಷ್ಣಶಾಸ್ತ್ರಿಯವರ ಭಾಷಣಗಳು ಮತ್ತು ಲೇಖನಗಳು’ ಪುಸ್ತಕಗಳನ್ನು ಪರಿಶೀಲಿಸಿದ್ದೆ. ಹದಿನೈದು ದಿನಗಳ ನಂತರ ಅದನ್ನು ಮತ್ತೆ ಓದಿ ಪರಿಷ್ಕರಣೆಗೆ ಒಳಪಡಿಸಿದೆ. ಅಧ್ಯಕ್ಷ ಭಾಷಣವನ್ನು ಬರೆದು ಮುಗಿಸಿದ ನಂತರ ನನ್ನ ಕೈಬರಹದಲ್ಲಿ ಇರಬಹುದಾದ ಸಾಲಿತ್ಯಗಳನ್ನು ಪರಿಶೀಲಿಸಲು ಮತ್ತು ಕರಡಚ್ಚನ್ನು ತಿದ್ದಲು ನನ್ನ ಮಗ ಜಿ.ವಿ ಅರುಣನ ಸಹಾಯ ಪಡೆದೆ.
– ಪ್ರೊ. ಜಿ. ವೆಂಕಟಸುಬ್ಬಯ್ಯ
ಸಮ್ಮೇಳನಾಧ್ಯಕ್ಷರು, ಬೆಂಗಳೂರು, 2011

ನಿರೂಪಣೆ: ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.