ತೆರಿಗೆ ವಂಚನೆ : ಐಟಿ ಅಧಿಕಾರಿಗಳಿಂದ ಚಿತ್ರನಟ ವಿಜಯ್ ವಿಚಾರಣೆ
Team Udayavani, Feb 5, 2020, 8:29 PM IST
ಚೆನ್ನೈ: ತೆರಿಗೆ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜನಪ್ರಿಯ ತಮಿಳು ಚಿತ್ರನಟ ವಿಜಯ್ ಅವರನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.
2019ರಲ್ಲಿ ಬಿಡುಗಡೆಗೊಂಡು ವ್ಯಾವಹಾರಿಕ ಯಶಸ್ಸು ಗಳಿಸಿದ್ದ ವಿಜಯ್ ಅಭಿನಯದ ಬಿಗಿಲ್ ಚಿತ್ರ ನಿರ್ಮಾಣ ಸಂಸ್ಥೆಎ.ಜಿ.ಎಸ್. ಸಿನೇಮಾಸ್ನ ಆಸ್ತಿಗಳು ಹಾಗೂ ಈ ಚಿತ್ರಕ್ಕೆ ಹಣಕಾಸು ನೆರವು ನೀಡಿದ್ದ ಅನ್ಬು ಚೆಲಿಯನ್ ಅವರ ಮಧುರೈ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು.
ವಿಜಯ್ ಅವರು ತಮ್ಮ ಮುಂಬರುವ ಚಿತ್ರ ‘ಮಾಸ್ಟರ್’ಗಾಗಿ ಇನ್ನೊಬ್ಬ ತಮಿಳು ನಟ ವಿಜಯ್ ಸೇತುಪತಿ ಅವರೊಂದಿಗೆ ನವ್ವೇಲಿ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಶೂಟಿಂಗ್ ನಿರತರಾಗಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ತಲುಪಿ ವಿಜಯ್ ಅವರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಗಿಲ್ ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಜಯ್ ಅವರಿಗೆ ಸಮನ್ಸ್ ನೀಡಿದ್ದು ವಿಜಯ್ ಅವರು ಚೆನ್ನೈಗೆ ತಲುಪಿದ ಬಳಿಕ ಅವರನ್ನು ವಿಸ್ತೃತ ವಿಚಾರಣೆಗೆ ಒಳಪಡಿಸುವ ನಿರೀಕ್ಷೆ ಇದೆ.
ತಮಿಳು ಚಿತ್ರರಂಗದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ನಟರಲ್ಲಿ ಒಬ್ಬರಾಗಿರುವ ವಿಜಯ್ ಅವರ ‘ಬಿಗಿಲ್’ ಚಿತ್ರ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ತೆರೆಕಂಡಿತ್ತು ಮಾತ್ರವಲ್ಲದೇ ವಿಶ್ವಾದ್ಯಂತ ಈ ಚಿತ್ರ 300 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.