ಹಸ್ತಕ್ಷೇಪಕ್ಕೆ ಅವಕಾಶವಿಲ್ಲ; ಆಂತರಿಕ ವಿಚಾರದಲ್ಲಿ ಬೇರೆ ದೇಶಗಳು ಮೂಗುತೂರಿಸುವಂತಿಲ್ಲ
ರಾಜ್ಯಸಭೆಯಲ್ಲಿ ನಾಯ್ಡು ಸ್ಪಷ್ಟನೆ
Team Udayavani, Feb 5, 2020, 9:16 PM IST
ನವದೆಹಲಿ:”ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾವುದೇ ದೇಶಕ್ಕೂ ಇಲ್ಲ. ಎಲ್ಲ ದೇಶಗಳಿಗೂ ಈ ಸಂದೇಶ ಸ್ಪಷ್ಟವಾಗಿ ರವಾನೆಯಾಗಬೇಕು’ ಎಂದು ರಾಜ್ಯಸಭೆ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಪೌರತ್ವ ಕಾಯ್ದೆ ಕುರಿತು ವಿವಿಧ ದೇಶಗಳಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. ಸಿಎಎ ವಿರುದ್ಧ ಐರೋಪ್ಯ ಒಕ್ಕೂಟದ ಸಂಸತ್‌ನಲ್ಲಿ ನಿರ್ಣಯ ಮಂಡಿಸಿರುವ ಕುರಿತು ಶಿವಸೇನೆ ಸಂಸದ ಅನಿಲ್ ದೇಸಾಯಿ ಪ್ರಸ್ತಾಪಿಸಿದ್ದಕ್ಕೆ ಪ್ರತಿಯಾಗಿ ಸಭಾಧ್ಯಕ್ಷ ನಾಯ್ಡು ಈ ಸ್ಪಷೆ° ನೀಡಿದ್ದಾರೆ. ನಮ್ಮ ಆಂತರಿಕ ವಿಚಾರವನ್ನು ಸಂಸತ್‌ನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಹೊರಗಿನ ದೇಶಗಳು ಅದರಲ್ಲಿ ಮೂಗು ತೂರಿಸಬಾರದು. ಆಯಾಯ ದೇಶಗಳು ತಮ್ಮ ಕೆಲಸ ಏನಿದೆಯೋ ಅದನ್ನು ನೋಡಿಕೊಳ್ಳಲಿ ಎಂದು ನಾಯ್ಡು ಖಡಕ್ಕಾಗಿ ನುಡಿದಿದ್ದಾರೆ.
ಸಂವಿಧಾನ ಅಪಾಯದಲ್ಲಿದೆ:
ಈ ನಡುವೆಯೇ, ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಿಡಿಕಾರಿದ್ದು, “ಪೌರತ್ವ ಕಾಯ್ದೆ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿಯು ದೇಶದ ಸಾಮಾಜಿಕ ಆಶಯವನ್ನೇ ಧ್ವಂಸ ಮಾಡುತ್ತಿದೆ. ಸಂವಿಧಾನವು ಅಪಾಯದಲ್ಲಿದೆ’ ಎಂದು ಆರೋಪಿಸಿದವು. ಇದೇ ವೇಳೆ, ಸರ್ಕಾರವು ತರಲುದ್ದೇಶಿಸಿದ ಸಿಎಎ, ಎನ್‌ಆರ್‌ಸಿಯಂಥ ಕುಟಿಲ ನೀತಿಯನ್ನು ಜನರೇ ವಿಫಲಗೊಳಿಸಿದರು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಹೇಳಿದ್ದಾರೆ.
ಇನ್ನು ಎನ್‌ಸಿಪಿ, ಡಿಎಂಕೆ, ಟಿಡಿಪಿ ಹಾಗೂ ಆರ್‌ಜೆಡಿ ಸದಸ್ಯರು ಜಮ್ಮು-ಕಾಶ್ಮೀರದಲ್ಲಿ ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾರನ್ನು ಗೃಹಬಂಧನದಲ್ಲಿ ಇಟ್ಟಿರುವುದನ್ನು ಖಂಡಿಸಿದರು.
ಹಿರಿಯ ನಾಗರಿಕರಿಗೆ ನೆರವು:
2011ರ ಗಣತಿ ಪ್ರಕಾರ, ದೇಶದಲ್ಲಿ ಸುಮಾರು 10.38 ಕೋಟಿ ಹಿರಿಯ ನಾಗರಿಕರಿದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ ಏಕಾಂಗಿಯಾಗಿ ಜೀವಿಸುತ್ತಿರುವ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಎನ್‌ಜಿಒಗಳಿಗೆ ವಹಿಸುವಂತೆ ಹೊಸ ಯೋಜನೆಯೊಂದನ್ನು ಸರ್ಕಾರ ಜಾರಿ ಮಾಡಲು ಚಿಂತನೆ ನಡೆಸಿದೆ. ಜತೆಗೆ, ಅವರಿಗಾಗಿ ಡೇ ಕೇರ್ ವ್ಯವಸ್ಥೆ ಕಲ್ಪಿಸಲೂ ಯೋಜಿಸಿದ್ದೇವೆ ಎಂದು ಸಚಿವ ಥಾವರ್‌ಚಂದ್ ಗೆಹೊÉàಟ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಪ್ರಮುಖ ಬಂದರು: ಸಂಪುಟ ಅಸ್ತು
ಮಹಾರಾಷ್ಟ್ರದ ವಧವಾನ್‌ನಲ್ಲಿ ಹೊಸದಾದ ಬೃಹತ್ ಬಂದರು ನಿರ್ಮಾಣಕ್ಕೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. 65,544 ಕೋಟಿ ರೂ. ವೆಚ್ಚದಲ್ಲಿ ಈ ಬಂದರು ನಿರ್ಮಿಸಲು ಯೋಜಿಸಲಾಗಿದೆ. ಇದೇ ವೇಳೆ, ಬ್ಯಾಂಕಿಂಗ್ ನಿಬಂಧನೆ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ಠೇವಣಿದಾರರ ಹಿತಾಸಕ್ತಿ ಕಾಪಾಡುವ, ಸಹಕಾರಿ ಬ್ಯಾಂಕುಗಳನ್ನು ಬಲಿಷ್ಠಗೊಳಿಸುವ ಹಾಗೂ ಪಿಎಂಸಿಯಂಥ ಬಿಕ್ಕಟ್ಟಿನಿಂದ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.