ಉಡುಪಿ ಗ್ರಾ.ಪಂ.ಗಳಲ್ಲಿ “ನಗದುರಹಿತ’ ವ್ಯವಹಾರ
ಕಾಡೂರಿನಲ್ಲಿ ಪೈಲಟ್ ಪ್ರಾಜೆಕ್ಟ್ ಯಶಸ್ವಿ ಮೊದಲ ಹಂತದಲ್ಲಿ 15 ಗ್ರಾ.ಪಂ.ಗಳಲ್ಲಿ ಜಾರಿ
Team Udayavani, Feb 6, 2020, 6:00 AM IST
ಉಡುಪಿ: ಕಾಡೂರು ಗ್ರಾಮ ಪಂಚಾಯತ್‌ನಲ್ಲಿ “ನಗದುರಹಿತ’ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ 158 ಗ್ರಾ.ಪಂ.ಗಳಲ್ಲೂ ಜಾರಿಗೊಳಿಸಲು ಸರಕಾರ ಆದೇಶಿದ್ದು, ಮುಂದೆ ರಾಜ್ಯದ ಎಲ್ಲ 5,659 ಗ್ರಾ.ಪಂ.ಗಳಿಗೆ ವಿಸ್ತರಣೆಯಾಲಿದೆ. ಮೊದಲ ಹಂತದಲ್ಲಿ 15 ಗ್ರಾ.ಪಂ.ಗಳಾದ ಆರೂರು, ಕುಕ್ಕೆಹಳ್ಳಿ, ಚೇರ್ಕಾಡಿ, ಇನ್ನಂಜೆ, ಕುಂಭಾಶಿ, ತೆಕ್ಕಟ್ಟೆ, ಹೊಸಾಡು, ತ್ರಾಸಿ, ಮರ ವಂತೆ, ವಂಡ್ಸೆ, ವರಂಗ, ಬೈಲೂರು, ಎರ್ಲಪಾಡಿ, ಮರ್ಣೆ, ಹಾವಂಜೆ, ಕಡ್ತಲ ಗ್ರಾ.ಪಂ.ಗಳಲ್ಲಿ ಜಾರಿಯಾಗಲಿದೆ.
ಶೇ. 78ರಷ್ಟು ಸಾಧನೆ
ಡಿಜಿಟಲ್ ಇಂಡಿಯಾ ಪರಿಕಲ್ಪನೆ ಅನುಷ್ಠಾನ ನಿಟ್ಟಿನಲ್ಲಿ “ನಗದುರಹಿತ’ ಪೈಲಟ್ ಯೋಜನೆಗಾಗಿ
ಸಂಸದರ ಆದರ್ಶ ಗ್ರಾಮವಾದ ಕಾಡೂರನ್ನು 2018-19ರಲ್ಲಿ ಆಯ್ಕೆ ಮಾಡಲಾಗಿತ್ತು. ಈ ಗ್ರಾ.ಪಂ. ವ್ಯಾಪ್ತಿಯ 1,106 ಮನೆಗಳಲ್ಲಿ 780 ಕುಟುಂಬಗಳ ತೆರಿಗೆ, ನೀರಿನ ಬಿಲ್, ಘನ-ದ್ರವ ತ್ಯಾಜ್ಯ ನಿರ್ವಹಣೆ ಬಿಲ್ ಪಾವತಿಯನ್ನು ನಗದು ರಹಿತವಾಗಿ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಆನ್‌ಲೈನ್ ಅಪ್ಲಿಕೇಶ್‌ನ ಮೂಲಕ ಶೇ. 78ರಷ್ಟು ತೆರಿಗೆ ಪಾವತಿಯಾಗಿದೆ.
“ಯುವ ಪೇ ಆ್ಯಪ್’
ಉಡ್ಮಾ ಟೆಕ್ನಾಲಜಿ ಸಂಸ್ಥೆಯು ಕಾಡೂರು ಗ್ರಾ.ಪಂ.ಗೆ ಯುವ ಪೇ ಆ್ಯಪ್ ಪರಿಚಯಿಸಿದೆ. ಇಂಟರ್‌ನೆಟ್ ಸೇವೆ ಹಾಗೂ ಸ್ಮಾರ್ಟ್ ಫೋನ್ ಇಲ್ಲದೆ ಬಿಲ್, ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ನೆಟ್‌ವರ್ಕ್ ಇಲ್ಲದ ಪ್ರದೇಶದ ಲ್ಲಿಯೂ ಈ ಅಪ್ಲಿಕೇಶನ್ ಕೆಲಸ ನಿರ್ವಹಿಸಲಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಬಹುದು.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕಾಡೂರು ಗ್ರಾ.ಪಂ. “ನಗದು ರಹಿತ’ ಯೋಜನೆಗೆ ಆಯ್ಕೆಯಾಗಿತ್ತು. ಕಾಡೂರು ಹಾಗೂ ನಡೂರಿನ 780 ಕುಟುಂಬದವರು ಆನ್‌ಲೈನ್ ಅಪ್ಲಿಕೇಶನ್ ಮೂಲಕ ತೆರಿಗೆ ಪಾವತಿಸುತ್ತಿದ್ದಾರೆ. ಗ್ರಾ.ಪಂ.ಗೆ ಅಲೆಯುವ ಕೆಲಸ ತಪ್ಪಿದ್ದು, ಶೀಘ್ರವಾಗಿದೆ ತೆರಿಗೆ ಪಾವತಿಯಾಗುತ್ತಿದೆ.
– ಮಹೇಶ್, ಪಿಡಿಒ ಕಾಡೂರು ಗ್ರಾ.ಪಂ.
ಕಾಡೂರು ಗ್ರಾ.ಪಂ.ನ ಶೇ. 78ರಷ್ಟು ತೆರಿಗೆಯನ್ನು ಅಪ್ಲಿಕೇಶನ್ ಮೂಲಕ ಸಂಗ್ರಹಿಸಲಾಗಿದೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಕಾಡೂರಿನಲ್ಲಿ “ನಗದು ರಹಿತ’ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ 158 ಗ್ರಾ.ಪಂ.ಗಳಿಗೆ ವಿಸ್ತರಿಸುವಂತೆ ಆದೇಶ ಬಂದಿದ್ದು, ಹಂತ ಹಂತವಾಗಿ ಜಿಲ್ಲೆಯ ಎಲ್ಲ ವಿಸ್ತರಿಸಲಾಗುವುದು.
– ಶ್ರೀನಿವಾಸ್ ರಾವ್, ಜಿ.ಪಂ. ಮುಖ್ಯಯೋಜನಾಧಿಕಾರಿ, ಉಡುಪಿ ಜಿಲ್ಲೆ
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.