![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 6, 2020, 4:05 PM IST
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ನಾಟಕ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಸಂಭಾಷಣೆ ಆರೋಪದಲ್ಲಿ ಬೀದರ್ ನ ಶಾಹಿನ್ ವಿದ್ಯಾಸಂಸ್ಥೆಯ ಮೇಲೆ ಪೊಲೀಸರು ಕ್ರಮ ಕೈಗೊಂಡಿರುವ ಕುರಿತು ಅಸಮಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸರಕಾರ ವಿರುದ್ದ ಗುಡಿಗಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಕ್ಕಳು ಮತ್ತು ಹೆತ್ತವರ ಬಗ್ಗೆ ಕ್ರಮ ಕೈಗೊಳ್ಳುತ್ತಿರುವ ರಾಜ್ಯ ಸರಕಾರ ನಡೆಯನ್ನು ಖಂಡಿಸುತ್ತೇನೆ. ಪುಟ್ಟ ಮಕ್ಕಳ ಪ್ರತಿರೋಧವನ್ನು ಎದುರಿಸಲಾಗದಷ್ಟು ಬಿಜೆಪಿ ಸೈದ್ಧಾಂತಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದರು.
ಬೀದರ್ ಶಾಲೆಯ ಮಕ್ಕಳು ತನಗೆ ಇಷ್ಟವಾಗದ ನಾಟಕ ಪ್ರದರ್ಶಿಸಿದರು ಎನ್ನುವ ಕ್ಷುಲಕ ಕಾರಣಕ್ಕೆ ಮಕ್ಕಳು ಮತ್ತು ಹೆತ್ತವರ ಮೇಲೆ ಪೊಲೀಸರನ್ನು ಛೂ ಬಿಟ್ಟು ಹಿಂಸಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ.
ಪುಟ್ಟ ಮಕ್ಕಳ ಪ್ರತಿರೋಧವನ್ನು ಎದುರಿಸಲಾಗದಷ್ಟು ಬಿಜೆಪಿ ಸೈದ್ಧಾಂತಿಕವಾಗಿ ದಿವಾಳಿಯಾಗಿದೆ.#Bidar
1/4— Siddaramaiah (@siddaramaiah) February 6, 2020
ಬೀದರ್ ಶಾಲೆಯ ಮಕ್ಕಳ ನಾಟಕದಲ್ಲಿ ದೇಶದ್ರೋಹ ಕಂಡ ಕುರುಡು @BJP4Karnatakaಕ್ಕೆ ಕಲ್ಲಡ್ಕದ ಶಾಲೆಯಲ್ಲಿ ಮಕ್ಕಳು ಬಾಬರಿ ಮಸೀದಿ ಧ್ವಂಸದ ಕಾರ್ಯಾಚರಣೆಯ ಪ್ರದರ್ಶನ ನೀಡಿ ನೆಲದ ಕಾನೂನನ್ನು ಉಲ್ಲಂಘಿಸಿದ ಮತ್ತು ನ್ಯಾಯಾಲಯವನ್ನು ಅಣಕ ಮಾಡಿದ ಕಿಡಿಗೇಡಿತನ ದೇಶದ್ರೋಹವಾಗಿ ಕಾಣುತ್ತಿಲ್ಲವೇ?#Bidar #Kalladka
2/4— Siddaramaiah (@siddaramaiah) February 6, 2020
ಹೌದು,
ಸರ್ವಾಧಿಕಾರಿ ದುರ್ಬಲನಾದಷ್ಟು ಕ್ರೂರಿಯಾಗುತ್ತಾನೆ.
ದೆಹಲಿ ವಿಶ್ವವಿದ್ಯಾಲಯಗಳಿಗೆ ಪೊಲೀಸರನ್ನು ನುಗ್ಗಿಸಿದ, ಶಾಂತಿಯುತ ಪ್ರತಿಭಟನೆಕಾರರ ಮೇಲೆ ಗುಂಡು ಹಾರಿಸಲು ಪ್ರಚೋದನೆ ನೀಡಿದ ಸರ್ವಾಧಿಕಾರಿ ಮನಸ್ಸೇ ಬೀದರ್ ನಲ್ಲಿ ಪುಟ್ಟಮಕ್ಕಳ ಮೇಲೆ ಸೇಡು ತೀರಿಸಲು ಹೊರಟಿದೆ.#Bidar
3/4— Siddaramaiah (@siddaramaiah) February 6, 2020
ಬೀದರ್ ನ ಶಾಹಿನ್ ವಿದ್ಯಾಸಂಸ್ಥೆ,ವಿದ್ಯಾರ್ಥಿಗಳು ಮತ್ತು ಹೆತ್ತವರ ಮೇಲೆ ದಾಖಲಿಸಿರುವ ದೇಶದ್ರೋಹದ ಪ್ರಕರಣವನ್ನು ಪೊಲೀಸರು ತಕ್ಷಣ ವಾಪಸು ಪಡೆಯಲು ಆಗ್ರಹಿಸುತ್ತಿದ್ದೇನೆ.
ಭ್ರಷ್ಟರನ್ನು ಖರೀದಿಸಿ ಅಧಿಕಾರದಲ್ಲಿರುವ ಸರ್ಕಾರ, ಜನವಿರೋಧಿ ಕೃತ್ಯಕ್ಕಿಳಿದರೆ ನಿರೀಕ್ಷೆಗಿಂತ ಮೊದಲೇ ನಾಶವಾಗಲಿದೆ.#Bidar
4/4— Siddaramaiah (@siddaramaiah) February 6, 2020
You seem to have an Ad Blocker on.
To continue reading, please turn it off or whitelist Udayavani.