ಕೋರ್ಟ್‌ನಿಂದ ದೂರ ನೆಮ್ಮದಿಗೆ ಹತ್ತಿರ


Team Udayavani, Feb 7, 2020, 5:12 AM IST

big-13

ಕಾನೂನಿನ ಅರಿವಿದ್ದಾಗ ಮೋಸ ಹೋಗುವ ಸಂಭವ ಕಡಿಮೆ. ವೈಯಕ್ತಿಕ ಕಾನೂನು, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಇಂದಿನ ಅಗತ್ಯವೂ ಹೌದು.

ಮನುಷ್ಯನಿಗೆ ಸದಾ ಎದುರಾಗುವ ದೊಡ್ಡ ಸವಾಲು ಎಂದರೆ ಸಂಬಂಧಗಳ ನಿಭಾವಣೆ. “ಎಷ್ಟು ಕಷ್ಟವೋ ಹೊಂದಿಕೆ ಎನ್ನುವುದು ನಾಲ್ಕು ದಿನದ ಬಾಳಿನಲಿ’ ಎಂಬ ಕವಿವಾಣಿಯೇ ಇದೆಯಲ್ಲ!
ವ್ಯಕ್ತಿಗೆ ಶಿಕ್ಷಣ ಇರಲಿ, ಇಲ್ಲದೇ ಇರಲಿ, ಜೀವನಾನುಭವದ ಆಧಾರದ ಮೇಲೆ ಪ್ರತಿಯೊಬ್ಬರಲ್ಲಿಯೂ ತಮ್ಮದೇ ಆದ ಅಭಿಪ್ರಾಯಗಳು ರೂಪುಗೊಳ್ಳುತ್ತ ಹೋಗುತ್ತವೆ. ಎಲ್ಲರ ಅಭಿಪ್ರಾಯವೂ ಒಂದೇ ತೆರನಾಗಿ ಇಲ್ಲದೇ ಇರುವಾಗ ವೈಮನಸ್ಯಕ್ಕೆ ಅವಕಾಶ ಸೃಷ್ಟಿಯಾಗುತ್ತದೆ. ಇದಕ್ಕಿರುವ ಒಂದೇ ಪರಿಹಾರವೆಂದರೆ ಮನುಷ್ಯರು ಇದ್ದ ಹಾಗೆಯೇ ಅವರನ್ನು ಒಪ್ಪಿಕೊಳ್ಳುವುದು. ಆದರೆ, ಅದು ಸುಲಭವಾದ ವಿಚಾರವೇನೂ ಅಲ್ಲ. ಆದ್ದರಿಂದ ವ್ಯಾವಹಾರಿಕವಾಗಿ ಅಥವಾ ಭಾವನಾತ್ಮಕವಾಗಿ ವ್ಯಾಜ್ಯಗಳು ಸೃಷ್ಟಿಯಾದಾಗ ಪರಿಹಾರಕ್ಕಾಗಿ ನ್ಯಾಯಾಲಯಗಳು ದಾರಿ ತೋರುತ್ತವೆ.

ನ್ಯಾಯಾಲಯಕ್ಕೆ ನ್ಯಾಯ ಬಯಸಿಹೋಗುವ ಅಸಹಾಯಕರಿದ್ದಾರೆ. ಇನ್ನೊಬ್ಬರ ಉನ್ನತಿ ಕಂಡು ಕರುಬಿ ಪ್ರಕರಣಗಳನ್ನು ದಾಖಲಿಸುವ ಜನರೂ ಇದ್ದಾರೆ. ಯಾರ ಸುದ್ದಿಗೂ ಹೋಗದೆ, ಶ್ರಮಜೀವಿಗಳಂತೆ ಬದುಕುವವರಿಗೂ ಇತರರು ಹೆಣೆದ ವಿಷವರ್ತುಲದಲ್ಲಿ ಸಿಲುಕಿ ಅನಿವಾರ್ಯವಾಗಿ ನ್ಯಾಯಾಲಯಕ್ಕೆ ಕಾಲಿಡುವ ಸಂದರ್ಭವೂ ಸೃಷ್ಟಿಯಾಗುತ್ತದೆ. ಸ್ವಯಂಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರುವವರೂ ಇದ್ದಾರೆ. ಏನೇ ಆದರೂ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಭಾವನಾತ್ಮಕ ಸಂಬಂಧ ಮಸುಕಾಗುತ್ತದೆ ಎಂಬುದಂತೂ ನಿಜ.

ಹೀಗೆ ಮನಸ್ಸಿನಲ್ಲಿ ಕಹಿ ಭಾವನೆಗಳು ಬೆಳೆದಾಗಲೇ, ನ್ಯಾಯಾಲಯದಲ್ಲಿ ಮೊಕದ್ದಮೆ ವಿಚಾರಣೆ ನಡೆಯುತ್ತಿರುವಾಗ ನ್ಯಾಯಾಲಯದ ಆವರಣದಲ್ಲಿ ಕೊಲೆಯತ್ನ, ಹಲ್ಲೆಯಂತಹ ಪ್ರಕರಣಗಳು ನಡೆಯುತ್ತವೆ. ನ್ಯಾಯಾಲಯದ ಹೊರಗೆ ಅಲ್ಲಲ್ಲಿ ಗುಂಪುಗೂಡಿ ಎದುರಾಳಿಯ ವಿರುದ್ಧ ಕತ್ತಿಮಸೆಯುವ, ಸಂಚು ಮಾಡುವ, ಸುಳ್ಳಿನ ಕಂತೆ ಹೆಣೆಯುವ ಜನರೂ ಇರುತ್ತಾರೆ. ನೆರವು ದೊರೆಯದೇ ಅಳುವ ಅಬಲರು, ಹೆಜ್ಜೆ ಇಡಲೂ ಆಗದೆ ನಿಧಾನವಾಗಿ ನಡೆಯುತ್ತ, ತಮ್ಮ ಮಕ್ಕಳ ವಿರುದ್ಧವೇ ಮೊಕದ್ದಮೆ ಹೂಡುವ ಪರಿಸ್ಥಿತಿ ಯಲ್ಲಿ ರುವ ವೃದ್ಧರು, ಕಾರು ನಿಲ್ಲಿಸಿ ಓಡಾಡುವ ಕರಿಕೋಟಿನ ವಕೀಲರು, ಅವರನ್ನು ಬೆಂಬೆತ್ತಿ ಹೋಗಿ ತಮ್ಮ ಪ್ರಕರಣಗಳ ಮಾಹಿತಿ ಪಡೆಯುವ ಕಕ್ಷಿದಾರರು- ಹೀಗೆ ನೂರಾರು ಚಿತ್ರಗಳು ಎದುರಾಗುತ್ತವೆ.

ಸಾಮಾನ್ಯವಾಗಿ ದೈನಂದಿನ ಹಲವು ವಿಚಾರಗಳು ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹೋಗಲು ಪ್ರೇರೇಪಿಸುತ್ತವೆ.  ಅನಿವಾರ್ಯ ಕೌಟುಂಬಿಕ ಕಾರಣಗಳು: ಹೆಣ್ಣಿನ ಮೇಲೆ ಆಗುವ ಅತ್ಯಾಚಾರ, ಕೊಲೆ, ಕಳ್ಳತನ, ಮನೆಯೊಳಗೆ ನಡೆಯುವ ದೌರ್ಜನ್ಯ ಇತ್ಯಾದಿ ಕಾರಣಗಳೇ ಹೆಚ್ಚು ವರದಿಯಾಗುತ್ತವೆ. ಮುರಿದ ಸಂಬಂಧಗಳ ಕಾರಣಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುವುದು ಬಹಳ ನೋವಿನ ಸಂಗತಿ. ಇಂತಹ ಸಂದರ್ಭಗಳಲ್ಲಿ ಆರ್ಥಿಕ ಭದ್ರತೆ ಇಲ್ಲದೇ ಇರುವ ಅಸಹಾಯಕರಿಗೆ ಸರ್ಕಾರ ಉಚಿತ ಕಾನೂನು ನೆರವು ನೀಡುವ ಅವಕಾಶವೂ ಇದೆ.

ಆಸ್ತಿ ತಗಾದೆ, ದಾಯಾದಿ ಜಗಳ: ದಾಯಾದಿ ಮತ್ಸರ, ದಾರಿಗಾಗಿ ಜಾಗ ಕೊಡದೇ ಇರುವವರ ವಿರುದ್ಧ ಜಗಳ, ಸರ್ವೆ ನಂಬರ್‌ಗಳ ವಿವಾದ, ನೀರಿಗಾಗಿ ಜಗಳ, ದೇವರ ನೆಪದಲ್ಲಿ ಜಗಳಗಳು ಸೃಷ್ಟಿಯಾದಾಗ ನ್ಯಾಯಾಲಯವೇ ಕೊನೆಯ ನಿಲ್ದಾಣವಾಗಿಬಿಡುತ್ತದೆ. ಮನೆಗೆ ದಾರಿ ಸಮರ್ಪಕವಾಗಿಲ್ಲದೇ ಇದ್ದಾಗ ಜೀವನ ನಿರ್ವಹಿಸುವುದಕ್ಕೆ ಕಷ್ಟವಾಗಿ ಕೊನೆಗೆ ನ್ಯಾಯಾಲಯದ ತೀರ್ಪಿಗಾಗಿ ಕಾಯುವ ಸಾವಿರಾರು ಕುಟುಂಬಗಳಿವೆ. ಎರಡೂ ಕಡೆಯವರು ಮಾನವೀಯವಾಗಿ ಯೋಚಿಸಿ ಒಂದು ಕ್ಷಣದಲ್ಲಿ ಬಗೆಹರಿಸಬಹುದಾದ ಸಮಸ್ಯೆಯು ನ್ಯಾಯಾಲಯದಲ್ಲಿ ವರ್ಷಗಟ್ಟಲೆ ವಿಚಾರಣೆಗೆ ಒಳಗಾಗುತ್ತಾ, ಎರಡೂ ಕಡೆಯವರು ಮಾನಸಿಕ ತಲ್ಲಣವನ್ನು ಅನುಭವಿಸಬೇಕಾಗಿ ಬರುತ್ತದೆ.

ಉದ್ಯೋಗ ಕ್ಷೇತ್ರದ ಸಮಸ್ಯೆ: ಉದ್ಯೋಗ ಕ್ಷೇತ್ರದಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಸಮಸ್ಯೆಗಳು ಸೃಷ್ಟಿಯಾದಾಗಲೂ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗುತ್ತದೆ. ಉದ್ಯೋಗದಾತರು ಕೆಲಸಗಾರರ ಶೋಷಣೆ ನಡೆಸದಂತೆ ಉದ್ಯೋಗಿಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಕಾರ್ಮಿಕ ಕಾನೂನುಗಳು ನೆರವಾಗುತ್ತವೆ. ಸಾಮಾನ್ಯವಾಗಿ ಒಂದು ಕಂಪೆನಿ ಅಥವಾ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದವರು ಕಾರ್ಮಿಕ ಕಾಯಿದೆಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಹಕ್ಕು, ಕರ್ತವ್ಯಗಳ ಅರಿವಿರಲಿ
ಜಾತಿನಿಂದನೆ, ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ವೈಯಕ್ತಿಕ ಕಾನೂನುಗಳ ಸಣ್ಣಮಟ್ಟಿನ ಅರಿವು ಮೂಡಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಮಹಿಳೆಯರು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು. ಬೇಸರದ ವಿಷಯವೆಂದರೆ ವಿದ್ಯಾವಂತರಾದರೂ, ಇಂತಹ ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳುವ ಗೊಡವೆಗೆ ಹೋಗುವುದಿಲ್ಲ. ಕೊನೆಗೆ ಯಾವುದಾದರೂ ಸಮಸ್ಯೆಯ ಸುಳಿಯಲ್ಲಿ ಸಿಲುಕಿದಾಗ ವಕೀಲರು ಹೇಳಿದ್ದನ್ನೇ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ತಮಗೆ ಅನ್ಯಾಯ ಆದಾಗ, ಅದರ ವಿರುದ್ಧ ಕಾನೂನು ಹೋರಾಟ ನಡೆಸಬೇಕು ಎಂಬ ಅರಿವು ಇದ್ದರೆ ತಾನೆ ವಕೀಲರನ್ನು ಭೇಟಿಯಾಗಲು ಸಾಧ್ಯ ಆಗುವುದು.

ಲೋಕ್‌ಅದಾಲತ್‌, ಕೌಟುಂಬಿಕ ನ್ಯಾಯಾಲಯ, ಸ್ಥಳೀಯ ನ್ಯಾಯಾಲಯಗಳು, ಉಚ್ಚ ನ್ಯಾಯಾಲಯ, ಹಸಿರು ಪೀಠ, ವಿಭಾಗೀಯ ಪೀಠ, ಸುಪ್ರೀಮ್‌ಕೋರ್ಟ್‌ ಇತ್ಯಾದಿಗಳ ಕಾರ್ಯ ವ್ಯಾಪ್ತಿಯ ಸರಿಯಾದ ಅರಿವು ನಮ್ಮಲ್ಲಿ ಇರಬೇಕಾಗುತ್ತದೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರ ಪ್ರಕಾರ, “ಕಾನೂನಿನ ಸಮರ್ಪಕ ಬಳಕೆ ಮತ್ತು ತಿಳಿವಳಿಕೆಗಳ ಅರಿವಿಲ್ಲದಿರುವಿಕೆಯೇ ಮನುಷ್ಯನ ದೊಡ್ಡ ದೌರ್ಬಲ್ಯವಾಗಿದೆ’.

ಪ್ರಕರಣಗಳು ನ್ಯಾಯಾಲಗಳ ಮೆಟ್ಟಿಲೇರಿದ ಬಳಿಕವೂ, ಕೆಲವೊಮ್ಮೆ ಎರಡೂ ಕಡೆಯವರು ಪರಸ್ಪರ ಸಂವಾದ ನಡೆಸಿ ರಾಜೀಸೂತ್ರದ ಮೂಲಕ ಸಮಸ್ಯೆ ಬಗೆಹರಿಸುವ ಅವಕಾಶವನ್ನು ನ್ಯಾಯಾಲಯವೇ ಕಲ್ಪಿಸುತ್ತದೆ. ಇದು ಉತ್ತಮ ವಿಧಾನವಾದರೂ, ದುರ್ಬಲರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಕೀಲರ ಹೆಗಲಮೇಲಿರುತ್ತದೆ. ಲೋಕ್‌ ಅದಾಲತ್‌ಗಳಲ್ಲಿ ಕ್ಷಿಪ್ರವಾಗಿ ಪ್ರಕರಣಗಳ ವಿಲೇವಾರಿ ನಡೆಯುವುದೂ ಉಂಟು.

ಏನೇ ಆಗಲಿ, ನಮ್ಮ ಹಿರಿಯ ತಲೆಮಾರಿನವರಂತೂ ಪೊಲೀಸ್‌ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲೇರುವ ಸಂದರ್ಭಗಳನ್ನು ತಪ್ಪಿಸುತ್ತಿದ್ದರು. ಆಣೆಪ್ರಮಾಣಗಳು, ಅಥವಾ ದೇವರ ಪ್ರಸಾದ ಕೇಳುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಇದು ಎರಡು ಕುಟುಂಬಗಳ ನಡುವೆ ಕಹಿ ಭಾವನೆಯನ್ನು ಸೃಷ್ಟಿಸುವುದಿಲ್ಲ. ಅಲ್ಲದೆ ವಾದಿ-ಪ್ರತಿವಾದಿಗಳಿಗೆ ಆರ್ಥಿಕ ಹೊರೆಯನ್ನೂ ಉಂಟುಮಾಡುವುದಿಲ್ಲ. ಸಂಬಂಧಗಳೂ ಶಿಥಿಲವಾಗುವುದಿಲ್ಲ. ಇಂದು ಪರಿಸ್ಥಿತಿ ಬದಲಾಗಿದೆ. ಆದ್ದರಿಂದ ಸಾಮಾನ್ಯ ಸಮಸ್ಯೆಗಳಿಗೆ ಕಾನೂನಿನಲ್ಲಿ ಏನು ಪರಿಹಾರ ಇದೆ ಎಂದು ಓದಿ ತಿಳಿಯುವುದೂ ಅನಿವಾರ್ಯವಾಗಿದೆ.

ವನಿತಾ ರಾಮಚಂದ್ರ ಕಾಮತ್‌

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.