ಇನ್ನಿಲ್ಲವಾದ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್
Team Udayavani, Feb 7, 2020, 4:00 AM IST
ಸುಂದರವಾದ ಆಳಂಗ ಶರೀರ-ಶಾರೀರ, ಸ್ಪಷ್ಟ ಉಚ್ಚಾರ, ಅಪೂರ್ವವಾದ ರಂಗತಂತ್ರ, ಪ್ರಸಂಗ ನಡೆಯಿಂದ ಅಸಂಖ್ಯಾತ ಯಕ್ಷಗಾನ ಪ್ರಿಯರ ಮನಗೆದ್ದ ಮಂದಾರ್ತಿ ಮೇಳದ ಪ್ರಧಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ದುರಂತವಾಗಿ ಅಭಿಮಾನಿಗಳನ್ನು ಅಗಲಿದ್ದಾರೆ.ಅವರಿಗೆ 43 ವರ್ಷವಷ್ಟೇ ವಯಸ್ಸಾಗಿತ್ತು.
ಕಣಕಿಬೆಳ್ಳೂರಿನಲ್ಲಿ ಜನಿಸಿದ ಅವರು ಬಾಲ್ಯದಲ್ಲಿಯೇ ಯಕ್ಷಗಾನದ ಸೆಳೆತಕ್ಕೊಳಗಾಗಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಬಡಗುತಿಟ್ಟಿನ ಕುಂಜಾಲು ಶೈಲಿಯ ಪ್ರಾತಿನಿಧಿಕ ಭಾಗವತರಾಗಿ ಮೂಡಿಬಂದರು. ನೃತ್ಯ ಅಭ್ಯಾಸ ಮಾಡಿ, ಮದ್ದಳೆ ವಾದನವನ್ನೂ ಕಲಿತರು.
ಪ್ರಥಮವಾಗಿ ಗೋಳಿಗರಡಿ ಮೇಳದಲ್ಲಿ ಸಂಗೀತಗಾರನಾಗಿ ಸೇರಿಕೊಂಡ ಅವರು ಬಳಿಕ ಎರಡು ವರ್ಷ ಕಮಲಶಿಲೆ ಮೇಳದಲ್ಲಿ ಸಹ ಭಾಗವತರಾಗಿ ಸೇವೆಸಲ್ಲಿಸಿದ್ದರು.ಅವರ ಭಾಗವತಿಕೆಯ ವಿವಿಧ ಮಜಲುಗಳು ಪ್ರೇಕ್ಷಕರಿಗೆ ತಲುಪಿದ್ದು ಮಂದಾರ್ತಿ ಮೇಳದ ತಿರುಗಾಟದಲ್ಲಿ. ಭಾಗವತಿಕೆಗೆ ಪರಂಪರೆಯನ್ನು ಸೇರಿಸಿ ನಿತ್ಯ ನೂತನತೆಯನ್ನು ಪ್ರೇಕ್ಷಕರಿಗೆ ಅವರು ಬಡಿಸುತ್ತಿದ್ದ ರೀತಿ ಅಸಾಧಾರಣ. ರಾಮಾಯಣ ಭಾರತ ಪ್ರಸಂಗಗಳ ಪದ್ಯಗಳಲ್ಲಿ ಅಪಾರವಾದ ಹಿಡಿತದೊಂದಿಗೆ ಅವರು ನಿರ್ದೇಶಿಸುತ್ತಿದ್ದ ರಂಗನಡೆ ಅಪೂರ್ವವಾಗಿತ್ತು. ದೈವೀದತ್ತವಾಗಿ ದಕ್ಕಿರುವ ಏರು ಶ್ರುತಿಯ ಕಂಠ, ಕಲಾವಿದರನ್ನು ದುಡಿಸಿಕೊಳ್ಳುತ್ತಿದ್ದ ರೀತಿಯಿಂದ ಮಂದಾರ್ತಿ ಐದೂ ಮೇಳದ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದರು.
ಬಯಲಾಟ ವಲಯದಲ್ಲಿ ಅತ್ಯುನ್ನತ ಸ್ಥಾನ ಪಡೆದ ಅವರು ಯಕ್ಷಗಾನದ ಗುರುಗಳಾಗಿ ನಾಲ್ಕು ವರ್ಷ ಉಡುಪಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಅನೇಕ ಭಾಗವತರನ್ನು ತರಬೇತಿಗೊಳಿ ಸಿದ್ದಾರೆ.ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಂದ್ರಕಾಂತ ರಾವ್, ಮೊಗೆಬೆಟ್ಟು ಪ್ರಸಾದ ಕುಮಾರ್, ಸುದೀಪ ಕುಮಾರ್ ಶೆಟ್ಟಿ, ಗಣೇಶ ಅಚಾರ್ ಮುಂತಾದವರು ಅವರ ಗರಡಿಯಲ್ಲೇ ಪಳಗಿದವರು.
ಮಳೆಗಾಲದಲ್ಲಿ ಅವರೇ ಯೋಜಿಸಿ ನಿರ್ಧರಿಸಿದ ನೂತನ ಯಕ್ಷ ಪ್ರಯೋಗವೇ ನಡುಮನೆಯಲ್ಲಿ ಯಕ್ಷ ಗಾಯನ, ಮೊದಲು ಕೇವಲ ಪೌರಾಣಿಕ ಪ್ರಸಂಗಗಳ ಪದ್ಯವನ್ನು ಮದ್ದಳೆ ಜೊತೆಗೆ ಮನೆಮನೆಯಲ್ಲಿ ಹಾಡಿ ಭಾಗವತಿಕೆಗೆ ಅಭಿಮಾನಿಗಳನ್ನೇ ಸೃಷ್ಟಿಸಿ ಮೊದಲ ವರ್ಷದಲ್ಲೇ 500 ಪ್ರಯೋಗಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದರು.ಅನಂತರ ರೇಣುಕಾ ಮಹಾತ್ಮೆ, ಸಾಲ್ವ ಶೃಂಗಾರ, ಚಿತ್ರಾಕ್ಷಿ ಕಲ್ಯಾಣ, ದಕ್ಷ ಯಜ್ಞ ಮುಂತಾದ ಪೌರಾಣಿಕ ಪ್ರಸಂಗಳನ್ನು ಎರಡು ತಾಸಿಗೆ ಸೀಮಿತಗೊಳಿಸಿ ಯಶಸ್ವಿ ಪ್ರದರ್ಶನ ನೀಡಿದ್ದರು. ತಾಳವೇ ಹಾಕದೆ ಲಯದಲ್ಲಿ ಪದ್ಯ ಹೇಳುವ ಕ್ರಮ, ಅವರದ್ದೇ ಆದ ರಾಗದ ಸಂಚಾರ ಕ್ರಮ, ಎಷ್ಟೇ ಸಾರಿ ಕೇಳಿದರೂ ಹೊಸತೆನಿಸುವ ರಾಗ ಮಾಧುರ್ಯ, ಹಾಡುಗಾರಿಕೆಯಲ್ಲಿ ತನ್ನತನ ಮತ್ತು ಸರ್ವರನ್ನೂ ಆಕರ್ಷಿಸುವ ಗಂಧರ್ವ ಗುಣವನ್ನು ಅವರ ಪದ್ಯಗಳಲ್ಲಿ ಕಾಣಬಹುದು.ಏರು ಶ್ರುತಿಯ ಕಂಠದಿಂದ ಮೂಡಿಬರುವ ಭಾಮಿನಿ ಪದ್ಯಗಳು ಕರ್ಣಾನಂದ ನೀಡುತ್ತಿದ್ದವು.
ಅಬೇರಿ, ವೃಂದಾವನ ಸಾರಂಗ, ಬಹುದಾರಿ,ದೇಶಿ, ಚಕ್ರವಾಕ, ವಾಸಂತಿ, ಚಾಂದ್, ಮಧ್ಯಮಾವತಿ ರಾಗಗಳಲ್ಲಿ ಅಪಾರ ಹಿಡಿತವಿದ್ದು ರತ್ನಾವತಿ ಕಲ್ಯಾಣದ “ಸರಿಯಾರೀ ತರುಣಿ ಮಣಿಗೆ’ ಮತ್ತು ಪಟ್ಟಾಭಿಷೇಕದ ಬಹುದಾರಿ ರಾಗದಲ್ಲಿ “ಜನಕಾ ಕಿರುಜನನಿಯಹ ವನಜಮುಖೀ ಕೈಕೇಯಿ’ ಇವೆರಡು ಪದ್ಯ ಸಾಕು ಅವರ ಭಾಗವತಿಕೆಯ ಆಳ ವಿಸ್ತಾರ ಅರಿಯಲು.
-ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.