ಯಾವುದೀ ಪ್ರವಾಹವೂ…
Team Udayavani, Feb 7, 2020, 3:06 AM IST
ಕಲಬುರಗಿ: ಕೆಲವೇ ತಿಂಗಳ ಹಿಂದೆ ಉ.ಕ. ಬಹುಭಾಗ ನೆರೆಯ ಹೊಡೆತಕ್ಕೆ ನರಳಾಡಿತ್ತು. ಆ ಕಹಿನೆನಪುಗಳು ಇಲ್ಲಿನವರ ಕಣ್ಣಿನಲ್ಲಿ ಮಾಸಿಲ್ಲ. 85ನೇ ಸಾಹಿತ್ಯ ಸಮ್ಮೇಳನದ ಗುಂಗಿನಲ್ಲಿ, ಭಾಷಾಪ್ರೇಮದ ಕಡಲಲ್ಲಿ ಮುಳುಗಿದ ಜನ ಹೀಗೆಯೇ ಸಂಚರಿಸುತ್ತ ಪುಸ್ತಕ ಮಳಿಗೆಗೆ ಕಾಲಿಟ್ಟಾಗ, ಒಮ್ಮೆಲೆ ತಬ್ಬಿಬ್ಬಾಗುತ್ತಿದ್ದರು. ಕಾಲುಬುಡದಲ್ಲಿ ನೀರು ಬಂದಂತಾಗಿ, ಅವಕ್ಕಾಗಿ ನೋಡುತ್ತಿದ್ದರು.
ಇಲ್ಲಿನ ಪುಸ್ತಕ ಮಳಿಗೆಯಲ್ಲಿ, ಕರ್ನಾಟಕ ಫೋಟೊ ಜರ್ನಲಿಸ್ಟ್ ಅಸೋಸಿಯೇಶನ್, ಪ್ರವಾಹ ಚಿತ್ರಗಳನ್ನು ಪ್ರದರ್ಶಿಸುತ್ತಿದೆ. ಛಾಯಾಗ್ರಾಹಕರು ಪ್ರವಾಹದಲ್ಲಿ ಓಡಾಡಿ, ಸೆರೆಹಿಡಿದ ಚಿತ್ರಗಳು, ಮನಕಲಕುವ ಕಥೆ ಹೇಳುತ್ತಿವೆ. ನೆರೆಯ ಹಾವಳಿಯನ್ನು ಕಣ್ಣಾರೆ ನೋಡಿದವರಿಗೆ, ಈ ಚಿತ್ರಗಳು ಹಳೇ ಕಹಿನೆನಪುಗಳನ್ನು ಕೆದಕಿದರೆ, ಪ್ರವಾಹದ ಬಗ್ಗೆ ಕೇಳಿದ್ದವರು, “ಛೇ ಎಂಥ ದಯನೀಯ ಸ್ಥಿತಿ’ ಎನ್ನುತ್ತಾ, ಮಮ್ಮಲ ಮರುಗುತ್ತಿದ್ದರು.
ನೆರೆಗೆ ನಲುಗಿದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಭಾಗದ ಜನ ಸಮ್ಮೇಳನಕ್ಕೆ ಬರುತ್ತಿದ್ದಾರೆ. “ಪ್ರವಾಹದಿಂದಾಗಿ ನಮ್ಮ ಬದುಕು ಇನ್ನೂ ಚೇತರಿಸಿಕೊಂಡಿಲ್ಲ. ಮನೆ-ಮಠ ಕಳೆದುಕೊಂಡು, ಬೀದಿಯಲ್ಲಿ ನಿಂತಿದ್ದೇವೆ. ಈ ಚಿತ್ರಗಳು ನಮ್ಮ ಸಂಕಷ್ಟಗಳನ್ನು ಹೇಳುತ್ತಿವೆ’ ಎಂದರು ಬಾಗಲಕೋಟೆಯಿಂದ ಬಂದಿದ್ದ ಸಂಗಮೇಶ ಹಿರೇಮಠ. ಛಾಯಾಗ್ರಾಹಕರು ಸಾಕಷ್ಟು ಶ್ರಮಪಟ್ಟು ಫೋಟೊಗಳನ್ನು ತೆಗೆದಿದ್ದಾರೆ. ಆಯ್ದ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ’ ಎಂದು ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಶರಣಬಸವ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.