ಸರ್ಕಾರದಿಂದ ವಿದ್ಯಾರ್ಥಿ ವೇತನ ಬಂದ್
Team Udayavani, Feb 7, 2020, 5:49 PM IST
ರಾಮನಗರ: ರಾಜ್ಯದ ಹಿಂದುಳಿದ ಸಮುದಾಯಗಳಿಗೆ ಸೇರಿದ ಸುಮಾರು 18 ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಈ ವಿಚಾರದಲ್ಲಿ ತಮ್ಮ ಸಂಘ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳ ಗಮನ ಸೆಳೆದರು ಉಪಯೋಗವಾಗಿಲ್ಲ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಕಿಡಿಕಾರಿದರು.
ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಹಿರಿಯ ಪ್ರಾಥ ಮಿಕ ಶಾಲೆಗಳ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಸಾಲಿನಲ್ಲಿ ವಿದ್ಯಾರ್ಥಿ ವೇತನ ಮೊಟಕು ಗೊಳಿಸಲಾಗಿದೆ. ಈ ವಿಚಾರ ದಲ್ಲಿ ತಮ್ಮ ಸಂಘಟನೆ ಹೋರಾಟ ನಡೆಸಿತ್ತು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಖಾಸಗಿ ಹಾಸ್ಟೆಲ್‌ಗಳ ನಿರ್ವಹಣೆಗೆಂದು ಕೊಡುತ್ತಿದ್ದ ಅನುದಾನವನ್ನು ಈ ಸರ್ಕಾರ ಮೊಟಕುಗೊಳಿಸಿದೆ. ವಿದ್ಯಾಸಿರಿ ಯೋಜನೆಯ ಅನುದಾನವೂ ಕಡಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳಿಗೆ ರಾಜಕೀಯ, ಉದ್ಯೋಗ ಮೀಸಲಾತಿ ಪ್ರಾಮಾಣಿಕವಾಗಿ ದೊರೆಯುತ್ತಿಲ್ಲ. ಮೇಲ್ವ ರ್ಗದ ಜನತೆ ಈ ಮೀಸ ಲಾತಿಯನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿರುವ ಅನೇಕ ಉದಾ ಹರಣೆಗಳಿವೆ ಎಂದು ಆರೋಪಿಸಿದರು.
ಎಸ್ಸಿ, ಎಸ್ಟಿ ವರ್ಗಗಳ ಜನಸಂಖ್ಯೆಯನ್ನು ಆಧರಿಸಿ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತಿರುವಂತೆ, ಹಿಂದುಳಿದ ವರ್ಗ ಗಳ ವಿಷಯದಲ್ಲಿಯೂ ಅದೇ ವ್ಯವಸ್ಥೆ ಜಾರಿಯಗಬೇಕು, ಜನ ಸಂಖ್ಯೆಯನ್ನು ಆಧರಿಸಿ ಅನುದಾನ ಮೀಸಲಿಡಬೇಕು. ಸಧ್ಯದಲ್ಲೇ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಿಂದಲೇ ಈ ವ್ಯವಸ್ಥೆ ಜಾರಿಯಗಲಿ. ಇದು ಸಾಧ್ಯ ವಾಗ ಬೇಕಾದರೆ ಜಾತಿವಾರು ಸಮೀಕ್ಷೆ ವರದಿ ಬಹಿರಂಗವಾಗಬೇಕು ಎಂದರು.
ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್ ಮಾತನಾಡಿ ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಮಂದಿ ಹಿಂದುಳಿದ ವರ್ಗಗಳ ಸಮುದಾಯಗಳ ಜನಸಂಖ್ಯೆ ಇದೆ. ಈ ಸಮುದಾಯದ ಮತಗಳಿಂದಲೇ ಬೆಳೆದು ಇಂದು ಈ ಸಮುದಾಯವನ್ನೇ ಕೆಲವು ರಾಜಕರಣಿಗಳು ಕಡೆಗಣಿ ಸುತ್ತಿದ್ದಾರೆ. ರಾಜಕೀಯವಾಗಿ, ಶೈಕ್ಷಣಿಕವಾಗಿ ಬೆಳೆ ಯಲು ಸಾಧ್ಯ ವಾಗುತ್ತಿಲ್ಲ. ಹಿಂದುಳಿದ ವರ್ಗಗಳನ್ನು ಕಡೆ ಗಣಿಸಿದರೆ ಹೋರಾಟ ಅನಿ ವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಮರಿಬಸವಾಚಾರ್, ಪ್ರಧಾನ ಕಾರ್ಯದರ್ಶಿ ಆರ್.ವೆಂಕ ಟರಾಮನ್, ಜಂಟಿ ಕಾರ್ಯದರ್ಶಿ ರಂಗಪ್ಪ, ಖಜಾಂಚಿ ವಿ.ಜೆ.ಬದರಿನಾಥ್, ಪ್ರಮುಖರಾದ ಸೀತಾರಾಂ, ಆರ್. ವೇಣುಗೋಪಾಲ್, ಡಾ.ಚನ್ನಯ್ಯ ವಿಶ್ವ ಕರ್ಮ, ಟಿ.ವಿ. ನಾರಾಯಣ, ಮುನಿ ಕೃಷ್ಣ, ನಾಗೇಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.