ಚಿನ್ನದ ರಾಣಿ ಶರಣಮ್ಮ
ಆತ್ಮವಿಶ್ವಾಸವೊಂದಿದ್ದರೆ ಗೆಲುವು ಸಾಧ್ಯ ಎಂದು ತೊರಿಸಿಕೊಟ್ಟ ಶರಣಮ್ಮ
Team Udayavani, Feb 8, 2020, 5:37 AM IST
ವಿಜಯಪುರ: ಜೀವನದಲ್ಲಿ ಏನೂ ಇಲ್ಲ ಎಂದು ಕೊರಗುತ್ತ ಕೂರುವ ಬದಲು ಇರುವುದನ್ನೇ ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಹೆಜ್ಜೆ ಇರಿಸಿದರೆ ಅಂದುಕೊಂಡದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎನ್ನುವುದಕ್ಕೆ ಗುಮ್ಮಟ ನಗರಿಯ ಹುಡುಗಿ ಪ್ರತ್ಯಕ್ಷ ಉದಾಹರಣೆ.
ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ-ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ಪ್ರತಿಭೆಯ ಹೆಸರು ಶರಣಮ್ಮ ಗುರುಬಸಪ್ಪ ಪಾಲಕೆ. 22 ವರ್ಷದ ಶರಣಮ್ಮಗೆ ಚಿಕ್ಕವರಾಗಿದ್ದಾಗಿನಿಂದಲೂ ಮಾತು ಬರುವುದಿಲ್ಲ, ಕಿವಿಯೂ ಕೇಳಿಸುವುದಿಲ್ಲ. ಹಾಗಂತ ಇವರಲ್ಲಿ ಪ್ರತಿಭೆ ಹಾಗೂ ಚೈತನ್ಯಕ್ಕೇನೂ ಕೊರತೆ ಇಲ್ಲ. ಮೌನದ ಕೊರಗಿನ ಕೀಳರಿಮೆ ಕಿತ್ತೆಸೆದಿರುವ ಇವರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಹೊಂಗನಸು ಕಟ್ಟಿಕೊಂಡಿದ್ದಾರೆ. ಕೇವಲ ಕನಸು ಕಟ್ಟಿಕೊಂಡು ಕುಳಿತುಕೊಳ್ಳದೇ ತನ್ನ ನಿರ್ಧಿಷ್ಟ ಗುರಿ ಸಾಧನೆಗೆ ನಿರಂತರ ಕಲಿಯುವಿಕೆಯ ಮೊರೆ ಹೋಗಿದ್ದಾರೆ.
-ಬಹುಮುಖ ಪ್ರತಿಭೆ
ವಿಶೇಷಚೇತನೆಯಾದ ಶರಣಮ್ಮ ಸಾಮಾನ್ಯರೊಂದಿಗೆ ಶಿಕ್ಷಣ ಪಡೆಯುತ್ತಿದ್ದಾರೆ. ಶರಣಮ್ಮ ಓದಿನಲ್ಲಿ ತಕ್ಕ ಸಾಧನೆ ಮಾಡಿದ್ದಾರೆ. ಆದರೆ ಕ್ರೀಡೆಯಲ್ಲಿ ಭರ್ಜರಿ ಪದಕಗಳ ಬೇಟೆಯಾಡಿ ರಾಣಿ ಎನಿಕೊಂಡಿದ್ದಾರೆ. ಬಿಎ 2ನೇ ವರ್ಷದಲ್ಲಿ ವ್ಯಾಸಂಗ ನಡೆಸುತ್ತಿರುವ ಶರಣಮ್ಮ ವಿವಿಧ ಕ್ರೀಡೆಯಲ್ಲಿ ತನ್ನ ಪ್ರತಿಭೆ ತೋರುತ್ತಿದ್ದಾರೆ.
ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಹೈಸ್ಕೂಲ್ ಶಿಕ್ಷಣದ ಬಳಿಕ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಹಿರೇಮಠ ಅವರಿಂದ ಅಥ್ಲೆಟಿಕ್ಸ್ ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆದ ಶರಣಮ್ಮ, ಕೆಲವೇ ವರ್ಷಗಳಲ್ಲಿ ತನ್ನಲ್ಲಿರುವ ಕ್ರೀಡಾ ಪ್ರತಿಭೆಯಿಂದ ಹಲವಾರು ಪದಕಗಳ ಗೆದ್ದರು.
ಶರಣಮ್ಮ 2016 ರಲ್ಲಿದೇವನಹಳ್ಳಿಯಲ್ಲಿ ನಡೆದ ಅಂಗವಿಕಲರ ಕ್ರೀಡಾಕೂಟದ ಜಾವೆಲಿನ್ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನದೊಂದಿಗೆ ಬೆಳ್ಳಿ ಪದಕ ಬಾಚಿದ್ದರು. ಅಲ್ಲಿಂದ ಪದಕ ಬೇಟೆ ಆರಂಭಿಸಿದ ಶರಣಮ್ಮ, 2018 ಹಾಸನದಲ್ಲಿ ಜರುಗಿದ ವಿಕಚೇತನರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಗುಂಡು ಎಸೆತ ಹಾಗೂ ಜಾವೆಲಿನ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳನ್ನು ಕೊರಳಿಗೆ ಹಾಕಿಕೊಂಡಿದ್ದರು. 2019 ರಲ್ಲಿ ಜರುಗಿದು 23ನೇ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಗುಂಡು ಎಸೆತ ಹಾಗೂ ಜಾವೆಲಿನ್ ಸ್ಪರ್ಧೆಗಳಲ್ಲಿ ಕ್ರಮವಾಗಿ ಚಿನ್ನದ ಪದಕಗಳನ್ನು ಗೆದ್ದಿದ್ದರು. ಕ್ರೀಡಾ ಸಾಧನೆಗಾಗಿ ವಿಜಯಪುರ ಮಹಾನಗರ ಪಾಲಿಕೆ 50 ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಿತ್ತು.
ಕೇವಲ ಈ ಎರಡು ಕ್ರೀಡೆ ಮಾತ್ರವಲ್ಲದೇ ಡಿಸ್ಕಸ್ ಎಸೆತದಲ್ಲೂ ಪ್ರವೀಣೆ ಎನಿಸಿಕೊಂಡಿರುವ ಶರಣಮ್ಮ ಕ್ರಿಕೆಟ್‌ನಲ್ಲೂ ಛಾಪು ಮೂಡಿಸಿದ್ದಾರೆ. 2018 ರಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ವಿಜೇತ ತಂಡದ ಆಟಗಾರ್ತಿಯಾಗಿದ್ದರು. ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದ ಹಾಕಿ ತಂಡದಲ್ಲಿ ಈಕೆಯೇ ಗೋಲ್ ಕೀಪರ್ ಎಂಬುದು ಗಮನೀಯ. ಚದುರಂಗ ಕ್ರೀಡೆಯಲ್ಲೂ ಕೈಚಳಕ ತೋರಬಲ್ಲ ಸಾಮರ್ಥ್ಯ ಹೊಂದಿರುವ ಶರಣಮ್ಮ, ಚಿತ್ರ ಬಿಡಿಸುವ ಕಲೆಯನ್ನೂ ಮೈಗೂಡಿಸಿಕೊಂಡಿದ್ದಾರೆ.
ತಾಯಿಗೆ ಮಗಳ ಭವಿಷ್ಯದ ಚಿಂತೆ
ತಾಯಿ ಸಂಗಮ್ಮಗೆ ಮಗಳ ಭವಿಷ್ಯದ ಬಗ್ಗೆ ಸಹಜ ಚಿಂತೆ ಕಾಡುತ್ತಿದ್ದರೂ, ಆಕೆಗೆ ಎಂದೂ ತನ್ನಲ್ಲಿರುವ ನ್ಯೂನ್ಯತೆ ಕೊರತೆ ಕಾಡದಂತೆ ಸದಾ ಎಚ್ಚರವಹಿಸಿದ್ದಾರೆ. ತಂದೆ ಗುರುಬಸಪ್ಪ ಅವರಿಗೆ ಮಗಳ ಸಾಧನೆಯ ವಿಷಯವಾಗಿ ಅಪಾರ ಖುಷಿ ಇದೆ.
ಸಾಮಾನ್ಯ ವಿದ್ಯಾರ್ಥಿನಿಯರಿಗಿಂತ ಶರಣಮ್ಮ ತನ್ನಲ್ಲಿರುವ ನ್ಯೂನ್ಯತೆಯ ಕೀಳರಿಮೆ ಬಿಟ್ಟು ಸಕ್ರೀಯವಾಗಿ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ಪರಿ ಇತರರಿಗೆ ಮಾದರಿ. ಆಕೆಯಿಂದಾಗಿ ನಮ್ಮ ವಿದ್ಯಾಲಯಕ್ಕೆ ಕೀರ್ತಿ ಹೆಚ್ಚುತ್ತಿದ್ದು, ದೇಶಕ್ಕೆ ಭವಿಷ್ಯದ ಉತ್ತಮ ಕ್ರೀಡಾ ಆಸ್ತಿ ಆಗುವ ಎಲ್ಲ ಅರ್ಹತೆ, ಶಕ್ತಿ-ಸಾಮರ್ಥ್ಯ ಆಕೆಯಲ್ಲಿದೆ.
ಎಸ್.ಜೆ.ಪವಾರ, ಪ್ರಾಚಾರ್ಯರು ಎಸ್‌ಬಿಎಸ್ ಕಲಾ-ವಾಣಿಜ್ಯ ಮಹಿಳಾ ಪದವಿ ಕಾಲೇಜು, ವಿಜಯಪುರ
ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.