ಇರಾಂಡಮ್ ಉಲಗಪೊರಿನ್ ಕಡೈಸಿ ಗುಂಡು
Team Udayavani, Feb 8, 2020, 4:49 AM IST
ಇರಾಂಡಮ್ ಉಲಗಪೊರಿನ್ ಕಡೈಸಿ ಗುಂಡು’. 2019 ರಲ್ಲಿ ತೆರೆಕಂಡ ತಮಿಳಿನ ಈ ಸಿನೆಮಾ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿನ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುತ್ತದೆ.
ನಿರ್ದೇಶಕ ಅಥಿಯಾನ್ ಅತಿರೈ ಕಲ್ಪನೆಯಲ್ಲಿ ಮೂಡಿಬಂದ ಈ ಸಿನೆಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಅತ್ತಕತಿ ದಿನೇಶ್ ಕಾಣಿಸಿಕೊಂಡಿದ್ದಾರೆ. ಗುಜರಿ ಅಂಗಡಿಯೊಂದರಲ್ಲಿ ಲಾರಿ ಡ್ರೈವರ್ ಆಗಿ ಕೆಲಸ ಮಾಡುವ ನಟ ಅದೊಂದು ದಿನ ಒಂದು ಅನೀರಿಕ್ಷಿತ ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳುತ್ತಾನೆ.
ಚಿತ್ರವನ್ನು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬಳಕೆಯಾದ ಮದ್ದು ಗುಂಡುಗಳ ಸುತ್ತ ಹೆಣೆಯಲಾಗಿದೆ. ಸಮುದ್ರ ಕಿನಾರೆಯಲ್ಲಿ ತೇಲಿ ಬಂದ ಮದ್ದುಗುಂಡೊಂದು ಗುಜರಿ ಅಂಗಡಿಗೆ ತಲುಪಿ ಅಲ್ಲಿಂದ ನಾಯಕ ಚಾಲಾಯಿಸುವ ಲಾರಿಯಲ್ಲಿ ಸೇರಿಕೊಂಡು, ಅದರ ಸುತ್ತ ನಡೆಯುವ ಘಟನೆಗಳನ್ನು ಅತ್ಯಂತ ರೋಚಕವಾಗಿ ತೋರಿಸಲಾಗಿದೆ. ಮದ್ದುಗುಂಡಿನ ಪತ್ತೆಗಾಗಿ ಹುಡುಕಾಟ ನಡಸುವ ಪತ್ರಕರ್ತೆ, ಮದ್ದುಗುಂಡನ್ನು ಬಳಸಿ ದೊಡ್ಡ ಮಟ್ಟದ ಸ್ಫೋಟವನ್ನು ನಡೆಸಲು ಸಂಚು ರೂಪಿಸುವ ವ್ಯಕ್ತಿಗಳು, ಚಿತ್ರದ ಇನ್ನೊಂದು ವಿಶೇಷ ಅಂದರೆ ಚಿತ್ರ ಸಾಗುವುದು ಲಾರಿ ಡ್ರೈವರ್ ಹಾಗೂ ಲಾರಿಯ ಹಿಂದೆ.
ರೋಚಕತೆಯ ನಡುವೆ ಚಿತ್ರದಲ್ಲಿ ಸೆಳೆಯುವ ಪ್ರೇಮ ಕಥೆಯೂ ಇದೆ. ನಾಯಕಿ ಆಗಿ ಕಾಣಿಸಿಕೊಂಡಿರುವ ಆನಂದಿ ಮುಗ್ಧತೆ ತುಂಬಿದ ನಟನೆ ಪ್ರೇಕ್ಷಕ ವರ್ಗಕ್ಕೆ ಇಷ್ಟವಾಗುತ್ತದೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.
ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಒಂದಿಷ್ಟು ಆಕಸ್ಮಿಕ ತಿರುವುಗಳು, ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ಒಂದು ಮದ್ದು ಗುಂಡಿನ ಸ್ಫೋಟಕವನ್ನು ನಾಯಕ ಅದು ಹೇಗೆ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ಪಾರು ಮಾಡುತ್ತಾನೆ?, ಪ್ರೀತಿಯ ಪಯಣದಲ್ಲಿ ಎದುರಾಗುವ ಮುಳ್ಳಿನ ಪರಿಸ್ಥಿತಿಗಳನ್ನು ನಿರ್ದೇಶಕ ಎಲ್ಲೂ ಹಾದಿ ತಪ್ಪದೆ ಹೇಳುತ್ತಾ ಹೋಗುವುದು ಜನಮಾನಸದಲ್ಲಿ ಉಳಿಯುವಂತೆ ಮಾಡುತ್ತದೆ.
ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.