ಹಣ್ಣು ಗ್ರೇಡಿಂಗ್‌ಗೆ ದೈತ್ಯಯಂತ್ರ!
ಗುಣಮಟ್ಟ ಆಧಾರದಲ್ಲಿ ಪ್ರತ್ಯೇಕಿಸುವ ಯಂತ್ರ ಟೊಮೆಟೊ, ಈರುಳ್ಳಿ, ಮಾವಿಗೂ ವಿಸ್ತರಣೆ
Team Udayavani, Feb 8, 2020, 6:15 AM IST
ಬೆಂಗಳೂರು: ಯಾವ ಹಣ್ಣುಗಳು ವಿದೇಶಕ್ಕೆ ರಫ್ತು ಮಾಡಲು ಯೋಗ್ಯವಾಗಿವೆ? ಅಂತಹ ಉತ್ಪನ್ನಗಳಿಗೆ ಇರ ಬೇಕಾದ ಲಕ್ಷಣಗಳಾವುವು? ಯಾವುದನ್ನು ಅಂತರರಾಜ್ಯಗಳಿಗೆ ಕಳುಹಿಸಬಹುದು? ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿರಬೇಕಾದ ಹಣ್ಣುಗಳು ಯಾವುವು? ಇದೆಲ್ಲವನ್ನೂ ನಿರ್ಧಾರ ಮಾಡಿ, ಬೇರ್ಪಡಿಸಲಿಕ್ಕಾಗಿಯೇ ದೇಶದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ಯಂತ್ರ ಬಂದಿದೆ. ಇದು ಕ್ಷಣಾರ್ಧದಲ್ಲಿ ಹಣ್ಣುಗಳ ಚಿತ್ರಗಳನ್ನು ಸೆರೆಹಿಡಿದು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ, ಗುಣ ಮಟ್ಟದ ಆಧಾರದ ನಾಲ್ಕು ಪ್ರಕಾರಗಳಲ್ಲಿ ವಿಂಗಡಿಸುತ್ತದೆ. ಅದೂ ಪ್ರತಿ ಗಂಟೆಗೆ ಒಂದು ಲಾರಿ ಲೋಡ್ ಹಣ್ಣುಗಳನ್ನು ಬೇರ್ಪಡಿಸಿ, ಬಿಸಾಕುವ ಸಾಮರ್ಥ್ಯ ಹೊಂದಿದೆ.
ಸದ್ಯ ಕಿತ್ತಳೆ ಮತ್ತು ಸೇಬು ಹಣ್ಣುಗಳ ಬೇರ್ಪಡಿಸುವ ಕೆಲಸವನ್ನು ಈ ಯಂತ್ರ ಮಾಡುತ್ತಿದೆ. ಪ್ರತಿ ಸೆಕೆಂಡಿಗೆ 10 ಹಣ್ಣುಗಳನ್ನು ಗಾತ್ರ, ಬಣ್ಣ, ತೂಕ, ಹಣ್ಣಿನ ಮೇಲ್ಮೆ„ಯನ್ನು ಆಧರಿಸಿ ವಿಂಗಡಿಸುತ್ತದೆ. ಉದಾಹರಣೆಗೆ ಅತ್ಯುತ್ತಮ ಗುಣಮಟ್ಟ ಹೊಂದಿದ್ದರೆ, ಅಂತಹ ಹಣ್ಣುಗಳನ್ನು ವಿದೇಶಕ್ಕೆ ರಫ್ತಾಗಲಿರುವ ಬುಟ್ಟಿಗೆ ತಂದುಹಾಕುತ್ತದೆ. ಮೂರ್‍ನಾಲ್ಕು ದಿನ ತಡೆದುಕೊಳ್ಳುವ ಸಾಮರ್ಥ್ಯ ಇರುವ ಹಣ್ಣುಗಳನ್ನು
ಬೇರೆ ರಾಜ್ಯಗಳಿಗೆ ಕಳುಹಿಸುವ ಬುಟ್ಟಿಗೆ ಹಾಕುತ್ತದೆ. ಈ ವಿನೂತನ ಯಂತ್ರವನ್ನು ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಅಂದಹಾಗೆ, ಝೆಂಟ್ರಾನ್ ಎಂಬ ಸಾಫ್ಟ್ವೇರ್ ಲ್ಯಾಬ್ಸ್ ಎಂಬ ಸ್ಟಾರ್ಟ್‌ಅಪ್ ಕಂಪನಿಯು ಇದನ್ನು ಅಭಿವೃದ್ಧಿಪಡಿಸಿದ್ದು, ಈಗ ಹಣ್ಣುಗಳ ಆಂತರಿಕ ಗುಣ (ಸಿಹಿ/ಹುಳಿ ಇತ್ಯಾದಿ)ಗಳನ್ನೂ ಆಧರಿಸಿ ಬೇರ್ಪಡಿಸುವ ಸಂಬಂಧ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಮೊರೆ
ಹೋಗಿದೆ. ಈ ಬಗ್ಗೆ ಮಾತುಕತೆ ನಡೆದಿದೆ.
ಪ್ರಸ್ತುತ ದೇಶದಲ್ಲಿ ಈ ರೀತಿ ಹಣ್ಣುಗಳ ಗುಣಮಟ್ಟ ಆಧರಿಸಿ ಬೇರ್ಪಡಿಸುವ ಯಂತ್ರ ಇಲ್ಲ. ಹಾಗಾಗಿ ಮ್ಯಾನ್ಯುವಲ್ ಆಗಿ ಈ ಕ್ರಿಯೆ ನಡೆಯುತ್ತಿದ್ದು, ಅದೂ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ “ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಸಿಗುತ್ತಿಲ್ಲ’ ಎಂಬ ಕೊರಗು ರೈತರದ್ದಾದರೆ, “ನೀವು (ರೈತರು) ಗುಣಮಟ್ಟದ ಉತ್ಪನ್ನ ಪೂರೈಸಿ, ಉತ್ತಮ ಬೆಲೆ ಸಿಗುತ್ತದೆ’ ಎಂಬ ವಾದ ವ್ಯಾಪಾರಿಗಳದ್ದಾಗಿದೆ. ಈ
ಮಧ್ಯೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇನ್ಮುಂದೆ ಈ ಸಮಸ್ಯೆ ಬಗೆಹರಿಯಲಿದೆ. ವೈಜ್ಞಾನಿಕವಾಗಿ
ಯಂತ್ರವು ಹಣ್ಣುಗಳ ಗುಣಮಟ್ಟಕ್ಕೆ ತಕ್ಕಂತೆ ಬೇರ್ಪಡಿಸುವುದರಿಂದ ರೈತರಿಗೆ ಮೋಸ ಮಾಡಲು
ಆಗುವುದಿಲ್ಲ ಎಂದು ಝೆಂಟ್ರಾನ್ ಲ್ಯಾಬ್ಸ್ನ ಜಗದೀಶ್ ಸಿ. ಸುಂಕದ “ಉದಯವಾಣಿ’ಗೆ ತಿಳಿಸಿದರು.
ಯಂತ್ರದ ಬೆಲೆ 35 ಲಕ್ಷ ರೂ.: ಇದರ ಬೆಲೆ 35 ಲಕ್ಷ ರೂ. ಆಗಿದ್ದು, ರೈತರು ಪ್ರತ್ಯೇಕವಾಗಿ ಖರೀದಿಸಲು
ಕಷ್ಟವಾಗುತ್ತದೆ. ಹಾಗಾಗಿ, ರೈತ ಉತ್ಪಾದಕ ಸಂಘಗಳ ಮೂಲಕ ಹಲವು ರೈತರು ಸೇರಿ ಖರೀದಿಸುವುದು ಸೂಕ್ತ. ಯಂತ್ರದ ಮೂಲಕ ಒಂದು ಹಣ್ಣು ಬೇರ್ಪಡಿಸಲು ಸರಾಸರಿ 10ರಿಂದ 50 ಪೈಸೆ ಆಗುತ್ತದೆ. ಗಂಟೆಗೆ 4ರಿಂದ 10 ಟನ್ ವಿಂಗಡಿಸುತ್ತದೆ. ಆದರೆ, ಕಾರ್ಮಿಕರಿಂದ ಇದೇ ಪ್ರಕ್ರಿಯೆಗೆ ಸರಾಸರಿ 2 ರೂ. ಖರ್ಚಾಗುತ್ತದೆ. ಹಾಗೂ ದಿನಗಟ್ಟಲೆ ಕುಳಿತರೂ ಇಷ್ಟೊಂದು ಪ್ರಮಾಣದ ವಿಂಗಡಣೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳಲ್ಲೇ ಖರೀದಿದಾರರಿಗೆ ಹಣ ಉಳಿತಾಯದ ರೂಪದಲ್ಲಿ
ವಾಪಸ್ಸಾಗುತ್ತದೆ ಎಂದೂ ಜಗದೀಶ್ ಸುಂಕದ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ವಿಂಗಡನೆ ಪ್ರಕ್ರಿಯೆ ಹೀಗೆ
2016ರಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದುವರೆಗೆ ನಾಲ್ಕು ಯಂತ್ರಗಳು ಮಾರಾಟ ಆಗಿವೆ. ಉದ್ದೇಶಿತ ಈ ಯಂತ್ರದಲ್ಲಿ ಮೂರರಿಂದ ನಾಲ್ಕು ಅತ್ಯಾಧುನಿಕ ಕ್ಯಾಮೆರಾ ಅಳವಡಿಸ ಲಾಗಿದೆ. ಜತೆಗೆ ಕಂಪ್ಯೂಟರ್ ಕೂಡ “ಫಿಕ್ಸ್’ ಮಾಡಲಾಗಿದೆ. ಹಣ್ಣು ಯಂತ್ರಕ್ಕೆ ಅಳವಡಿಸಿದ ಬೆಲ್ಟ್ ಮೂಲಕ ಹೋಗುವಾಗ ವಿವಿಧ ಕೋನಗಳಿಂದ ಫೋಟೋ ಸೆರೆಹಿಡಿದು, ಕಂಪ್ಯೂಟರ್‌ಗೆ ಕಳುಹಿಸುತ್ತದೆ. ಅದರಲ್ಲಿರುವ ಸಾಫ್ಟ್ವೇರ್ ಆ ಹಣ್ಣಿನ ಗುಣಮಟ್ಟ ವಿಶ್ಲೇಷಿಸಿ, ಯಾವ ಬುಟ್ಟಿಗೆ ಬೀಳಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ
Karnataka BJP; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ: ಕೇಂದ್ರ ಸಚಿವ ಚೌಹಾಣ್
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.