ಸಂತಸದ ಮನೆಗಳಿಗೆ ಹಲವು ಸರಳ ಸೂತ್ರಗಳು
ರಾಜಯೋಗಿನಿ ಬಿ.ಕೆ. ಶಿವಾನಿ ಉಪನ್ಯಾಸ
Team Udayavani, Feb 8, 2020, 5:11 AM IST
ಉಡುಪಿ: ಸಂತಸಭರಿತ ಮನೆ ನಿರ್ಮಾಣವಾಗಲು ಧನ, ಅನ್ನ, ಮನಗಳನ್ನು ಶುದ್ಧಿಯಾಗಿರಿಸಿ ಕೊಳ್ಳಬೇಕಿದೆ ಎಂದು ಪ್ರಸಿದ್ಧ ವಾಗ್ಮಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾ ನಿಲಯದ ರಾಜಯೋಗಿನಿ ಬಿ.ಕೆ. ಶಿವಾನಿ ಅಭಿಪ್ರಾಯಪಟ್ಟಿದ್ದಾರೆ.
ಎಂಜಿಎಂ ಕಾಲೇಜಿನ ಮೈದಾನದಲ್ಲಿ ಶುಕ್ರವಾರ “ದಿ ಕೀ ಟು ಯುವರ್ ಹ್ಯಾಪಿ ಹೋಮ್’ (ನಿಮ್ಮ ಸಂತುಷ್ಟ ಮನೆಯ ಕೀಲಿ ಕೈ) ವಿಷಯ ಕುರಿತು ಅವರು ಸುದೀರ್ಘ ಉಪನ್ಯಾಸ ನೀಡಿದರು.
ಜಗಳವೂ ಶಕ್ತಿಹ್ರಾಸವೂ…
ಭಿನ್ನಾಭಿಪ್ರಾಯ, ಆದಾಯದ ಕೊರತೆ, ಇಗೋ, ವಾಗ್ವಾದ, ನಿರೀಕ್ಷೆ ಗಳಿಂದ ಮನೆಗಳಲ್ಲಿ ಅಶಾಂತಿ ಉಂಟಾಗಿ ಮನೆಯಲ್ಲಿರ ಬೇಕಾದ ಸಕಾರಾತ್ಮಕ ಶಕ್ತಿಗಳು ಕುಂದುತ್ತವೆ. ಎಷ್ಟೋ ಜನ್ಮಗಳ ಸಂಸ್ಕಾರದಿಂದ ಬಂದ ಆತ್ಮಗಳು ತತ್ಕಾಲೀನ ಜೀವನದಲ್ಲಿ ಗಂಡ ಹೆಂಡತಿ, ಅಪ್ಪ ಮಗ/ಳು ಆಗಿರುವಾಗ ಭಿನ್ನಾಭಿಪ್ರಾಯ ಸಹಜ. ನಾವು ವಯಸ್ಸು ಹೇಳುವಾಗ ಈ ಶರೀರದ್ದನ್ನು ಮಾತ್ರ ಹೇಳುತ್ತೇವೆ. ಆತ್ಮಗಳಿಗೆ ಎಷ್ಟು ವರ್ಷವಾಯಿತೆಂದು ಹೇಳಲಾಗದು. ಭಿನ್ನ ಭಿನ್ನ ಸಂಸ್ಕಾರಗಳನ್ನು ಹೊತ್ತ ವ್ಯಕ್ತಿಗಳು ಭಿನ್ನ ಭಿನ್ನವಾಗಿ ವರ್ತಿಸುವುದು ಸಹಜ. ಇಲ್ಲಿ ತಲೆಮಾರಿನ ಅಂತರವಿಲ್ಲ.ವ್ಯತ್ಯಾಸವಾದ ಸಂಸ್ಕಾರಗಳು ಕಾರಣ. ಅವರವರ ಸಂಸ್ಕಾರಕ್ಕೆ ಅವರದೇ ಸರಿ ಎನಿಸುತ್ತದೆ ಎಂದರು.
ಶಿವಾನಿ, ಸಹಾಯಕ ಕಮಿಷನರ್ ರಾಜು, “ತರಂಗ’ದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ, ಉದ್ಯಮಿಗಳಾದ ಟಿ. ಶಂಭು ಶೆಟ್ಟಿ, ರಮೇಶ ಬಂಗೇರ, ಹಿರಿಯ ಐಪಿಎಸ್ ಅಧಿಕಾರಿ ಪ್ರಜಕ್ತ, ಈಶ್ವರೀಯ ವಿ ವಿ ಯ ಪ್ರಮುಖರಾದ ಸುಜಾತಾ, ಸೌರಭ ಮೊದಲಾದವರು ಸೇರಿ ದೀಪ ಬೆಳಗಿದರು.
ಮೊಬೈಲ್, ಟಿವಿ, ವಾಯುಮಾಲಿನ್ಯ-ಮನಮಾಲಿನ್ಯ, ವೈಟ್‌ಮನಿ-ಪ್ಯೂರ್‌ಮನಿ…
ಮೊಬೈಲ್‌ನಿಂದ ಹಲವು ಉಪಕಾರಗಳಿವೆ. ಅದರಿಂದಲೇ ಮನಃಶಾಂತಿ ಕೆಡುತ್ತದೆ ಎಂದು ಹೇಳುವುದು ಹೇಗೆ? ಮೊದಲು ಸಾಧನಗಳು ಜೀವನದ ಅನುಕೂಲ ಕ್ಕಾಗಿ ಬಂದವು. ಅನಂತರ ಅವುಗಳನ್ನು ಬಳಸುವವರು ನಿಯಂತ್ರಿಸಬೇಕಿತ್ತು. ಈಗ ಅವುಗಳೆ ನಮ್ಮನ್ನು ನಿಯಂತ್ರಿಸುತ್ತಿವೆ.
ಪೂರೈಸಲಾಗದ ಅಪೇಕ್ಷೆಗಳು ಕೊನೆಗೊಳ್ಳವು. ಇದು ಕಲಿಯುಗದ ಲಕ್ಷಣ. ಕೃತಯುಗದಲ್ಲಿ “ಇಚ್ಛಾ ಮಾತ್ರಂ ಅವಿದ್ಯಾ’, ಸತ್ಯಯುಗದಲ್ಲಿ ಬೇಡಿಕೆಗಳು ಏನೆಂದೇ ಗೊತ್ತಿರಲಿಲ್ಲ.
ಹಣದ ಬಗ್ಗೆ ಗೌರವ, ಭಕ್ತಿ ಬೇಕು. ಇದು ಕೇವಲ ಕರೆನ್ಸಿ ನೋಟು ಗಳಲ್ಲ. ಅದು ಲಕ್ಷ್ಮೀ. ಅದರಿಂದಲೇ ಮನೆವಾರ್ತೆಗಳು ನಡೆಯುವುದು. ಆದ್ದರಿಂದ ಯಾರೂ ಆದಾಯ ಬರುವ ಸಂಸ್ಥೆ/ಮೂಲಗಳನ್ನು ದೂಷಿ ಸಬೇಡಿ. ಅದು ಹೇಗೆ ಬರುತ್ತಿದೆ ಎಂಬುದು ಮುಖ್ಯ. ಕೇವಲ ವೈಟಲ್ಲ ;ಪ್ಯೂರ್ ಮನಿ ಆಗಿರಬೇಕು.
ವಾಯುಮಾಲಿನ್ಯದಂತೆ ಮನ ಸ್ಸಿನ ಮಾಲಿನ್ಯವೂ ಸಹ. ಜಗಳವಾಗಿ ಮಾತುಗಳನ್ನು ಬಿಟ್ಟಾಗ ನೇತ್ಯಾತ್ಮಕ ಶಕ್ತಿಗಳು ಹೆಚ್ಚುತ್ತವೆ. ಇದು ಅತ್ಯಂತ ವಿಷಕಾರಿ. ಜಗಳವಾದಾಗ ಕೂಡಲೇ ಸಾಮಾನ್ಯ ಸ್ಥಿತಿಗೆ ಬರಬೇಕು.
ಆಹಾರ ಸಾತ್ವಿಕವಾಗಿರಬೇಕು. ಮಂದಿರ, ಗುರುದ್ವಾರ, ಮಸೀದಿ ಗಳಲ್ಲಿ ಪ್ರಸಾದವನ್ನು ವಿತರಿಸುತ್ತಾರೆ. ಮನೆಗಳಲ್ಲೂ ಆಹಾರ ತಯಾ ರಿಸುತ್ತಾರೆ, ಹೊಟೇಲ್‌ಗಳಲ್ಲೂ ತಯಾರಿಸುತ್ತಾರೆ. ವ್ಯತ್ಯಾಸ ಗಳೇನು? ಪೂಜನೀಯ ಸ್ಥಾನಗಳಲ್ಲಿ ನಿಸ್ವಾರ್ಥದಿಂದ ಪ್ರಸಾದವಾಗಿ ತಯಾರಿಸುತ್ತಾರೆ. ಮನೆಗಳಲ್ಲಿ ಮನೆ ಯವರಿಗೆಂದು ಮಾಡುತ್ತಾರೆ. ಹೊಟೇಲ್‌ಗಳಲ್ಲಿ ಹಣಕ್ಕಾಗಿ ತಯಾರಿ ಸುತ್ತಾರೆ. ನಾವು ಮನೆಗಳಲ್ಲೂ ಸಾತ್ವಿಕ ಆಹಾರ ತಯಾರಿಸಿ ಮನೆಗಳನ್ನೇ ಮಂದಿರ ಮಾಡಬೇಕು. ಹೊಟೇಲ್‌ಗಳಿಗೆ ಹೋಗದೆ ಮನೆ ಆಹಾರವನ್ನೇ ಹೆಚ್ಚಾಗಿ ಸ್ವೀಕರಿಸ ಬೇಕು.
ಊಟ ಮಾಡುವ ಹತ್ತು ನಿಮಿಷ ವಾದರೂ ಮೊಬೈಲ್, ಟಿ.ವಿ.ಯಿಂದ ದೂರವಿದ್ದು, ಪರಮಾತ್ಮನ ಚಿಂತನೆ ನಡೆಸಿ. 24 ಗಂಟೆಗಳಲ್ಲಿ ಒಂದು ಗಂಟೆ ಯಾದರೂ ಭಗವತ್ ಚಿಂತನೆ, ಧ್ಯಾನ ಮಾಡಿ. ಉಳಿದ 23 ಗಂಟೆಗಳಿಗೆ ಬೇಕಾದ ಶಕ್ತಿ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.