ಕೊರೊನಾ ಭೀತಿ: ಜಲದಿಗ್ಬಂಧನದಲ್ಲಿರುವ ಹಡಗಿನಲ್ಲಿ ಕಾರವಾರದ ಯುವಕ
ಜಪಾನ್ ಸಮುದ್ರ ಮಧ್ಯದಲ್ಲೇ ನಿಂತುಬಿಟ್ಟಿದೆ ಬರ್ಮುಡಾ ಮೂಲದ ಪ್ರಿನ್ಸೆಸ್ ಡೈಮಂಡ್
Team Udayavani, Feb 8, 2020, 6:01 PM IST
ಕಾರವಾರ: ಚೀನಾ ದೇಶವನ್ನು ಕಂಗೆಡಿಸಿರುವ ಕೊರೊನಾ ವೈರಸ್ ಇದೀಗ ಜಗತ್ತಿನ ವಿವಿಧ ದೇಶಗಳಿಗೂ ಹಬ್ಬುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ದೇಶದಿಂದ ದೇಶಕ್ಕೆ ಸಮುದ್ರ ಮಾರ್ಗದಲ್ಲಿ ಪ್ರಯಾಣಿಸುವ ಐಶಾರಾಮಿ ಪ್ರಯಾಣಿಕರ ಹಡಗುಗಳಿಗೆ ಸಂಕಷ್ಟ ಎದುರಾಗಿದೆ.
ಎಲ್ಲಾ ದೇಶಗಳು ತಮ್ಮ ಜಲಭಾಗದತ್ತ ಬರುವ ಐಷಾರಾಮಿ ಪ್ರವಾಸಿ ಹಡಗುಗಗಳ ಮೇಲೆ ತೀವ್ರ ನಿಗಾ ಇಡಲು ಪ್ರಾರಂಭಿಸಿದೆ. ಇದರ ಪರಿಣಾಮವಾಗಿ ಈ ಪ್ರವಾಸಿ ಹಡಗುಗಳಲ್ಲಿ ಪ್ರಯಾಣಿಸುತ್ತಿರುವ ಪ್ರವಾಸಿಗರು ಹಾಗೂ ಇದರಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಇದೀಗ ಸಂಕಷ್ಟ ಎದುರಾಗಿದ್ದು ಈ ಪ್ರಕರಣಗಳಲ್ಲಿ ಭಾರತೀಯರೂ ಸಹ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿರುವ ಒಂದೊಂದೇ ಪ್ರಕರಣಗಳು ವರದಿಯಾಗುತ್ತಿದೆ.
ಚೀನಾ ಮೂಲದ ವರ್ಲ್ಡ್ ಡ್ರೀಮ್ ಹಡಗಿನಲ್ಲಿ ಉದ್ಯೋಗಿಯಾಗಿರುವ ಉಳ್ಳಾಲ ಕುಂಪಲದ ಯುವಕ ತನ್ನ ಮದುವೆಗೆ ತಾನೇ ಬರದಾಗಲಿರುವ ಪರಿಸ್ಥಿತಿ ಎದುರಾಗಿರುವ ಸುದ್ದಿಯೊಂದು ವರದಿಯಾಗಿರುವ ಬೆನ್ನಲ್ಲೇ ಇದೀಗ ಕಾರವಾರದ ಯುವಕನೊಬ್ಬ ಕೊರೊನಾ ಭೀತಿಯಿಂದ ತಾನು ಕರ್ತವ್ಯ ನಿರ್ವಹಿಸುತ್ತಿರುವ ಪ್ರವಾಸಿ ಹಡಗಿನೊಂದಿಗೆ ಜಲದಿಗ್ಬಂಧನಕ್ಕೊಳಗಾಗಿರುವ ಮಾಹಿತಿ ಲಭ್ಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ 26 ವರ್ಷ ಪ್ರಾಯದ ಅಭಿಷೇಕ್ ಎಂಬ ಯುವಕನೇ ಈ ರೀತಿಯಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿರುವವರಾಗಿದ್ದಾರೆ. ಇವರು ಕಾರ್ಯನಿರ್ವಹಿಸುತ್ತಿದ್ದ ಬರ್ಮುಡಾ ಮೂಲದ ಡೈಂಮಂಡ್ ಪ್ರಿನ್ಸೆಸ್ ಪ್ರಯಾಣಿಕರ ಹಡಗು ಚೀನಾದ ಹಾಂಕಾಂಗ್ ನಿಂದ ಜಪಾನ್ ನ ಟೊಕಿಯೋಗೆ ಸಾಗುತ್ತಿತ್ತು. ಆದರೆ ಇನ್ನೇನು ಈ ಹಡಗು ಜಪಾನ್ ತಲುಪಬೇಕೆನ್ನುವಷ್ಟರಲ್ಲಿ ಈ ಹಡಗಿನಿಂದ ಇಳಿದಿದ್ದ ಪ್ರಯಾಣಿಕರೊಬ್ಬರಲ್ಲಿ ಮಾರಕ ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಈ ಹಡಗನ್ನು ಬಂದರಿಗೆ ಪ್ರವೇಶಿಸದಂತೆ ತಡೆಯಲಾಗಿದ್ದು ಸದ್ಯಕ್ಕೆ ಈ ಹಡಗು ಸಮುದ್ರ ಮಧ್ಯದಲ್ಲೇ ನಿಂತಿದೆ.
ಅಭಿಷೇಕ್ ಅವರು ಗೋವಾದಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಪೂರೈಸಿದ್ದರು ಮತ್ತು ಕಳೆದ ಮೂರು ತಿಂಗಳುಗಳ ಹಿಂದೆಯಷ್ಟೇ ಅವರು ಈ ಹಡಗಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೀಗ ಸುದ್ದಿತಿಳಿದು ಅಭಿಷೇಕ್ ಅವರ ಹೆತ್ತವರು ಚಿಂತಾಕ್ರಾಂತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.