ರೈಲ್ವೇ ಹೊಸಮಾರ್ಗಗಳ ಯೋಜನೆಗಳಿಗೆ ತುಕ್ಕು!
ಕಡತಕ್ಕೆ ಸೀಮಿತವಾದ ಉಡುಪಿ ಜಿಲ್ಲೆಯ ರೈಲ್ವೇ ಅಭಿವೃದ್ಧಿ
Team Udayavani, Feb 9, 2020, 5:28 AM IST
ಕೇಂದ್ರದ ಪ್ರತಿ ಸಲದ ಬಜೆಟ್ ಮಂಡನೆಯ ಸಂದರ್ಭದಲ್ಲೂ ಕರಾವಳಿ ಕರ್ನಾಟಕದ ರೈಲ್ವೇ ಸೌಲಭ್ಯಗಳಿಗೆ ಮನ್ನಣೆ ದೊರೆಯುತ್ತದೆ ಎಂಬ ನಿರೀಕ್ಷೆಗೆ ತಕ್ಕ ಸ್ಪಂದನೆ ದೊರೆಯುವುದೇ ಇಲ್ಲ. ಇಲ್ಲಿನ ರೈಲ್ವೇ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚೆ ಆಗುತ್ತದೆ ಬಿಟ್ಟರೆ, ಬೇಡಿಕೆಗಳು ಪ್ರಸ್ತಾವಣೆಯಾಗುವುದೇ ಇಲ್ಲ.
ಉಡುಪಿ: ಉಡುಪಿ ಜಿಲ್ಲೆಯ ರೈಲ್ವೇಗೆ ಸಂಬಂಧಿಸಿ ಇರುವ ದಶಕಗಳ ಬೇಡಿಕೆಗಳಿಗೆ ಮನ್ನಣೆಯೇ ಸಿಗುತ್ತಿಲ್ಲ. ರೈಲುಗಳ ಓಡಾಟ ಹೆಚ್ಚಳ, ಹೊಸ ಮಾರ್ಗ ನಿರ್ಮಾಣ ಸಹಿತ ಪರ್ಯಾಯ ರಸ್ತೆಗಳ ಬೇಡಿಕೆಯ ಯಾತ್ರಿಕರ ಒತ್ತಾಯಗಳಿಗೆ ಸ್ಪಂದನೆ ಸಿಕ್ಕಿಲ್ಲ.
ಸರ್ವೆ ನಡೆದಿಲ್ಲ
ಪಡುಬಿದ್ರಿ, ಕಾರ್ಕಳ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ನೆಟ್ಟಣ ಮಧ್ಯೆ 120 ಕಿ. ಮೀ. ಹೊಸ ಮಾರ್ಗದ ಸರ್ವೆ ನಡೆದಿದೆ, ಪ್ರಾಥಮಿಕ, ತಾಂತ್ರಿಕ ಮತ್ತು ಸಂಚಾರ ಸರ್ವೆ ಪ್ರಿಲಿಮರಿ ಎಂಜಿನಿಯರಿಂಗ್ ಕಮ್ ಟ್ರಾಫಿಕ್ ಸರ್ವೆ ನಡೆದಿದೆ. ಮಾರ್ಗ ರಚನೆ ಪ್ರಸ್ತಾವನೆಗಳಿಲ್ಲ. ಇನ್ನು ನಂದಿಕೂರು, ಕಾರ್ಕಳ, ಬಜಗೋಳಿ, ಉಜಿರೆ, ಚಾರ್ಮಾಡಿ 148 ಕಿ.ಮೀ. ಹೊಸ ಪರ್ಯಾಯ ರೈಲು ಮಾರ್ಗದ ಸರ್ವೆ ನಡೆಸುವಂತೆ ಉಡುಪಿ ರೈಲ್ವೇ ಯಾತ್ರಿಕರ ಸಂಘ 10 ವರ್ಷಗಳಿಂದ ಒತ್ತಾಯಿಸುತ್ತ ಬಂದಿದೆ. ಇದಕ್ಕೂ ಮನ್ನಣೆ ಸಿಕ್ಕಿಲ್ಲ.
ನಿರೀಕ್ಷೆ ಹುಸಿ
ಕರಾವಳಿ ಕರ್ನಾಟಕದ ಭಾಗಕ್ಕೆ ಈ ಹಿಂದೆ ಘೋಷಿಸಿದ ಹಲವಾರು ಯೋಜನೆಗಳ ಅನುಷ್ಠಾನವಾಗುತ್ತಿಲ್ಲ. ಕೇಂದ್ರ ಬಜೆಟ್ ಮಂಡನೆ ಆಗುವಾಗೆಲ್ಲ ಕರಾವಳಿ ಕರ್ನಾಟಕದ ರೈಲ್ವೇ ಸೌಲಭ್ಯ ಬೇಡಿಕೆಗಳಿಗೆ ಮನ್ನಣೆ ಸಿಗುತ್ತದೆ ಅನ್ನುವ ನಿರೀಕ್ಷೆಗಳು ಮುನ್ನೆಲೆಗೆ ಬರುತ್ತವೆ. ಆ ನಿರೀಕ್ಷೆ ಈ ಬಾರಿಯೂ ಇತ್ತಾದರೂ ಅದು ಹುಸಿಯಾಗಿದೆ. ಬಜೆಟ್ ಮಂಡನೆಯಲ್ಲಿ ರೈಲ್ವೇಗೆ ಹೆಚ್ಚಿನ ಪ್ರಾಧಾನ್ಯ ನೀಡಿಲ್ಲ. ಜತೆಗೆ ಕರಾವಳಿಯ ಯಾವೊಂದು ಬೇಡಿಕೆಗಳ ಪ್ರಸ್ತಾವಗೊಂಡಿಲ್ಲ.
ಹೊಸದಿಲ್ಲಿಯಲ್ಲಿ ಫೆ. 4ರಂದು ನಡೆದ ರೈಲ್ವೇ ಮಂತ್ರಾಲಯ ಸಭೆಯಲ್ಲಿ ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕರಾವಳಿ ಭಾಗದ ರೈಲ್ವೇ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರಾದರೂ ಕರಾವಳಿಯ ಇತರ ಪ್ರಮುಖ ಬೇಡಿಕೆಗಳ ಕುರಿತು ಪ್ರಸ್ತಾವಿಸಿಲ್ಲ.
ಪ್ರಸ್ತಾವನೆಯಲ್ಲಿದ್ದದ್ದೇನು?
ಸಮಸ್ಯೆ ಪರಿಹಾರವಾಗಿ ಪರ್ಯಾಯ ಮಾರ್ಗದ ಪ್ರಸ್ತಾವನೆಯನ್ನು ಈ ಹಿಂದೆ ರೈಲು ಯಾತ್ರಿಕರ ಸಂಘ ಮಂಡಿಸಿತ್ತು. ನಂದಿಕೂರು, ಕಾರ್ಕಳ, ಬಜಗೋಳಿ, ಉಜಿರೆ, ಚಾರ್ಮಾಡಿ ಮೂಲಕ ಸಾಗಿ ಸೋಮನಾಡು ಸೇತುವೆ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆ ಹಾರದಿಂದ ಮೂಡಿಗೆರೆಯಲ್ಲಿ ರೈಲು ಮಾರ್ಗಕ್ಕೆ ಜೋಡಣೆಯಾಗಿ ಮುಂದೆ ಬೆಂಗಳೂರಿಗೆ ಸಾಗುವುದು ಮತ್ತು ನಂದಿಕೂರು ಜಂಕ್ಷನ್ ಆಗಿ ರೂಪುಗೊಳ್ಳುವುದು ಈ ಪ್ರಸ್ತಾವನೆಯಲ್ಲಿ ಒಳಗೊಂಡಿತ್ತು. ಇವುಗಳು ಸದ್ಯ ಜೀವ ಪಡೆದುಕೊಳ್ಳುವ ಸಾಧ್ಯತೆಗಳು ಕ್ಷೀಣಿಸಿವೆ.
ಪರ್ಯಾಯ ಮಾರ್ಗ
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ, ಸಕಲೇಶಪುರ ಭಾಗದಲ್ಲಿ ರೈಲು ಸಂಚಾರ ವೇಳೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಮಳೆಗಾಲದಲ್ಲಿ ಭೂಕುಸಿತ, ರೈಲ್ವೇ ಹಳಿಯಲ್ಲಿ ತಾಂತ್ರಿಕ ದೋಷ ಘಟಿಸಿ ರೈಲು ಸಂಚಾರದಲ್ಲಿ ವ್ಯತ್ಯಯಗಳು ಕಾಣಿಸಿಕೊಳ್ಳುತ್ತವೆ. ಸಂಚಾರಕ್ಕೆ ತಡೆಯಾಗುತ್ತಿರುತ್ತದೆ.ಈ ಮಾರ್ಗದಲ್ಲಿ ರೈಲು ಯಾನ ಸುರಕ್ಷಿತವಲ್ಲ ಅನ್ನುವ ಆತಂಕ ಪ್ರಯಾಣಿಕರಲ್ಲಿದೆ. ಪರ್ಯಾಯ ರೈಲ್ವೇ ಮಾರ್ಗ ನಿರ್ಮಾಣದ ಪ್ರಸ್ತಾವವನ್ನು ಉಡುಪಿ ಯಾತ್ರಿಕರ ಸಂಘ ಕೇಂದ್ರ ಸರಕಾರದ ಮುಂದೆ ಇರಿಸಿತ್ತು.
120 ಕಿ.ಮೀ. ಹೊಸ ಮಾರ್ಗದ ಸರ್ವೆ ನಡೆದಿದ್ದರೂ ಮಾರ್ಗ ರಚನೆ ಪ್ರಸ್ತಾವನೆಗಳಿಗೆ ಇನ್ನೂ ಸ್ಪಷ್ಟ ರೂಪರೇಷೆ ಸಿಕ್ಕಿಲ್ಲ. ಕರಾವಳಿಯ ಬೇಡಿಕೆಗಳಿಗೆ ಕೇಂದ್ರ ಸರಕಾರ ಶೀಘ್ರ ನಿರ್ಣಯ ಕೈಗೊಳ್ಳುವುದು ಅಗತ್ಯವಾಗಿದೆ.
ಬಜೆಟ್ ಪ್ರಸ್ತಾವನೆಯೇ ನನೆಗುದಿಗೆ
ಮಂಗಳೂರು ರೈಲ್ವೆ à ಪ್ರಮುಖ ವಿಭಾಗವಾಗಿ ಪರಿವರ್ತನೆ, ಕರಾವಳಿಗೆ ಜೋಡಿಸಿಕೊಂಡಿರುವ ಈಗಿರುವ ಮಾರ್ಗಗಳಲ್ಲಿ ಹೊಸ ರೈಲುಗಳ ಓಡಾಟದ ಜತೆಗೆ ರಾಜ್ಯದ ಪ್ರಮುಖ ನಗರಗಳಿಗೆ ಸಂಚಾರ ಒದಗಿಸುವ ನಿಟ್ಟಿನಲ್ಲಿ ಮಾರ್ಗಗಳ ಗುರುತಿಸುವಿಕೆ, ಸಮೀಕ್ಷೆಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಮಂಗಳೂರು ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಯೋಜನೆ ಬಜೆಟ್‌ನಲ್ಲಿ ಪ್ರಸ್ತಾವನೆಯಾಗಿ ದಶಕ ಕಳೆದರೂ ಅನುಷ್ಠಾನಗೊಂಡಿಲ್ಲ. ಅದು ಈಡೇರಿದರೆ ಅವಿಭಜಿತ ಜಿಲ್ಲೆಗಳ ರೈಲ್ವೆಗೆ ಸಂಬಂಧಿಸಿ ಬೇಡಿಕೆಗಳಿಗೆ ಜೀವ ಬರಬಹದು. ಕರಾವಳಿಯ ರೈಲ್ವೇ ಯಾತ್ರಿಕರ ಸಂಘಟನೆಗಳು, ಅಭಿವೃದ್ಧಿ ಪರ ಸಂಘಟನೆಗಳು ನಿರಂತರವಾಗಿ ರೈಲ್ವೇ ಬೇಡಿಕೆಗಳಿಗೆ ಸಂಬಂಧಿಸಿ ಈಡೇರಿಕೆಗಾಗಿ ಆಗ್ರಹಿಸುತ್ತಲೇ ಬಂದಿದ್ದರೂ ದೊರಕಿರುವ ಸ್ಪಂದನೆ ನಿರಾಶಾದಾಯಕ.
ಹೊಸ ರೈಲು ಮಾರ್ಗ ಪ್ರಸ್ತಾವಿಸಿಲ್ಲ
ಹೊಸದಿಲ್ಲಿಯಲ್ಲಿ ರೈಲ್ವೇ ಮಂತ್ರಾಲಯ ಸಭೆಯಲ್ಲಿ ಕರಾವಳಿಯ ಹೊಸ ರೈಲು ಮಾರ್ಗದ ವಿಚಾರಗಳು ಪ್ರಸ್ತಾವವಾಗಿಲ್ಲ. ಮುಂದಿನ ದಿನಗಳಲ್ಲಿ ಕರಾವಳಿಯ ರೈಲ್ವೇ ಬೇಡಿಕೆಗಳಿಗೆ ಸಂಬಂಧಿಸಿ ಕೇಂದ್ರ ರೈಲ್ವೇ ಸಚಿವರ ಗಮನಕ್ಕೆ ತರಲಾಗುವುದು. ಈಗಿನ ಕಾರವಾರ-ಬೆಂಗಳೂರು ನಡುವಿನ ರೈಲು ವಿಳಂಬದಿಂದ ಹಗಲು ಹೊತ್ತಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಷ್ಟು ಪ್ರಯೋಜನವಿಲ್ಲ ಇದು ಸಹಿತ ಜಮೀನು ಕಳಕೊಂಡವರಿಗೆ ಪರಿಹಾರ ಕುರಿತು ಪ್ರಸ್ತಾವಿಸಿರುವೆ. ಕರಾವಳಿ ರೈಲ್ವೆ à ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸುವೆ.
-ಶೋಭಾ ಕರಂದ್ಲಾಜೆ, ಸಂಸದೆ ಉಡುಪಿ
ಸ್ಪಂದನೆ ಸಿಗುತ್ತಿಲ್ಲ
ಪರ್ಯಾಯ ರೈಲು ಮಾರ್ಗದ ಬೇಡಿಕೆ ಏಳೆಂಟು ವರ್ಷಗಳಿಂದ ಇದೆ. ಕನಿಷ್ಠ ಸರ್ವೆಯನ್ನಾದರೂ ಮಾಡಿ ಎಂದು ಸರಕಾರಕ್ಕೆ ದುಂಬಾಲು ಬೀಳುತ್ತಲೇ ಇದ್ದೇವೆ. ಇದುವರೆಗೆ ಯಾವ ಪ್ರಯೋಜನವೂ ಆಗಿಲ್ಲ. ಸ್ಪಂದನೆ ಸಿಗುತ್ತಿಲ್ಲ.
-ಆರ್. ಎಲ್ ಡಯಾಸ್, ಅಧ್ಯಕ್ಷ, ರೈಲ್ವೇ ಯಾತ್ರಿಕರ ಸಂಘ ಉಡುಪಿ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.