ನಿಮಗೆಷ್ಟು ಗೊತ್ತು? ಟರ್ಮ್ ಇನ್ಶೂರೆನ್ಸ್‌


Team Udayavani, Feb 10, 2020, 5:44 AM IST

insurance

ಸ್ವಂತ ವ್ಯಾಪಾರ ಮಾಡಬೇಕು, ನಮಗೆ ನಾವೇ ಯಜಮಾನ ಆಗಬೇಕು ಅನ್ನೋದು ಹಲವರ ತುಡಿತ ಮತ್ತು ಗುರಿ ಆಗಿರುತ್ತದೆ. ಆದರೆ ಸ್ವಂತ ವ್ಯಾಪಾರ ಮಾಡುವವರಿಗೆ ಅವರದೇ ಆರ್ಥಿಕ ಸವಾಲುಗಳು ಇರುತ್ತವೆ. ಮುಖ್ಯವಾಗಿ ವ್ಯಾಪಾರ- ವ್ಯವಹಾರ ಚಟುವಟಿಕೆಗಳಿಗೆ ಆಗಾಗ ಕೈ ಬದಲಿಗಾದರೂ ಹಣದ ಅಗತ್ಯ ಕಂಡುಬಂದು, ಸಾಲ ಮಾಡಬೇಕಾಗುತ್ತದೆ.

ಇನ್ನು ವ್ಯಾಪಾರ- ವ್ಯವಹಾರದ ಹೊರತಾಗಿ ಕುಟುಂಬದೊಳಗೆ ಯಾರಿಗಾದರೂ ಅನಾರೋಗ್ಯವಾದಾಗ ದಿಕ್ಕು ತೋಚದಂತೆ ಮಾಡಿಬಿಡುತ್ತವೆ. ಸ್ಥಿರವಾದ ಆದಾಯ ಇಲ್ಲದ ಪರಿಣಾಮ ವೆಚ್ಚಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಆದರೆ ಈ ಸಮಸ್ಯೆಗಳಿಗೆ ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್‌ )ಪರಿಹಾರವಾಗಲಿದೆ. ಹಾಗಾದರೆ ಏನಿದು ಟರ್ಮ್ ಇನ್ಶೂರೆನ್ಸ್‌ ? ಪ್ರಯೋಜನಗಳೇನು ಇಲ್ಲಿದೆ ಮಾಹಿತಿ.

ಟರ್ಮ್ ಇನ್ಶೂರೆನ್ಸ್‌ ಉದ್ಯಮಿಗಳು, ವೃತ್ತಿಪರರಾದ ಚಾರ್ಟರ್ಡ್‌ ಅಕೌಂಟೆಂಟ್‌, ವಕೀಲರು, ವೈದ್ಯರ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಲೇ ಇದೆ. ಅಂಥ ವರು ಕಂಡುಕೊಂಡ ಪರಿಹಾರ ಮಾರ್ಗವೇ ಟರ್ಮ್ ಇನ್ಶೂರೆನ್ಸ್‌. ತಮ್ಮ ಬಾಧ್ಯತೆಗಳು, ಅಗತ್ಯವನ್ನು ಮನಗಂಡು ನಿರ್ದಿಷ್ಟ ಮೊತ್ತಕ್ಕೆ ಟರ್ಮ್ ಇನ್ಶೂರೆನ್ಸ್‌ ಮಾಡಿ ಕೊಳ್ಳುತ್ತಾರೆ. ಪಾಲಿಸಿದಾರರು ದಿಢೀರ್‌ ಸಾವನ್ನಪ್ಪಿ ದಲ್ಲಿ ಅವರ ವಾರ್ಷಿಕ ಆದಾಯದ ಇಪ್ಪತ್ತು ಪಟ್ಟು ಮೊತ್ತದಷ್ಟನ್ನು ಟರ್ಮ್ ಇನ್ಶೂರೆನ್ಸ್‌ ಪಾಲಿಸಿಗಳು ಒದಗಿಸುತ್ತವೆ. ಆದರೆ ಅಷ್ಟು ಮೊತ್ತಕ್ಕೆ ಪ್ರೀಮಿಯಂ ಪಾವತಿಸಿರಬೇಕು.

ಆನ್‌ಲೈನ್‌ ಮೂಲಕ ಖರೀದಿಸಬಹುದು
ಹಣಕಾಸಿನ ಸಂಕಷ್ಟದಲ್ಲಿ ಇರುವವರಿಗೆ ಕಾಯ್ದೆ ಅನ್ವಯ ಟರ್ಮ್ ಇನ್ಶೂರೆನ್ಸ್‌ ಲಭ್ಯವಿದ್ದು, ಆನ್‌ ಲೈನ್‌ ಮೂಲಕ ಖರೀದಿ ಮಾಡಬಹುದು.ಬಹಳ ಕಡಿಮೆ ಬೆಲೆಗೆ ಈ ವಿಮಾ ಯೋಜನೆ ದೊರೆಯಲಿದ್ದು, ಎಲ್ಲ ವರ್ಗದ ಜನರೂ ಈ ಇನ್ಶೂರೆನ್ಸ್‌ನ್ನು ಮಾಡಿಸಿಕೊಳ್ಳಬಹುದು.

ಯಾರಿಗೆ ಹೆಚ್ಚು ಸೂಕ್ತ
ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರಿಗೆ ಇದು ಹೆಚ್ಚು ಸೂಕ್ತ. ಉದ್ಯೋಗಸ್ಥರಿಗಾದರೆ ಬಹುತೇಕ ಮಟ್ಟಿಗೆ ಉದ್ಯೋಗದಾತರೇ ಲೈಫ್ ಇನ್ಶೂರೆನ್ಸ್‌ಮಾಡಿಸಿರುತ್ತಾರೆ. ಆದರೆ ಸ್ವಂತ ವ್ಯವಹಾರ ಮಾಡುವವರಿಗೆ ಈ ಸವಲತ್ತು ಇರುವುದಿಲ್ಲ. ಮನೆಗೆ ಆಧಾರಸ್ತಂಭವಾದ ಯಜಮಾನ ಅಥವಾ ಯಾಜಮಾನಿ ತೀರಿಕೊಂಡರೆ ಆ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳು ತ್ತದೆ. ಅಂಥ ಸ್ಥಿತಿಯಲ್ಲಿ ಟರ್ಮ್ ಇನ್ಶೂರೆನ್ಸ್‌ ನೆರವು ನೀಡುತ್ತದೆ. ಟರ್ಮ್ ಇನ್ಶೂರೆನ್ಸ್‌ ಹಣದಿಂದ ಮನೆ ಖರ್ಚು, ಮನೆ ನಿರ್ಮಾಣ ಅಥವಾ ಉನ್ನತ ಶಿಕ್ಷಣದ ಶುಲ್ಕ ಪಾವತಿ ಅಥವಾ ವ್ಯಾಪಾರಕ್ಕೆ ಪಡೆದಿದ್ದ ಸಾಲ ಮರುಪಾವತಿ ಮಾಡ ಬಹುದು.

ಪ್ರೀಮಿಯಂ ಮನ್ನಾ ಸೌಲಭ್ಯ
ಒಂದು ವೇಳೆ ಪಾಲಿಸಿದಾರರಿಗೆ ಗಂಭೀರ ಸ್ವರೂಪದ ಕಾಯಿಲೆ ಬಂದರೆ ಟರ್ಮ್ ಇನ್ಶೂರೆನ್ಸ್‌ನ ಪ್ರೀಮಿಯಂ ಪಾವತಿಸುವ ಅಗತ್ಯ ಇಲ್ಲ. ಅದೇ ರೀತಿ ಶಾಶ್ವತ ಅಂಗವೈಫ‌ಲ್ಯಕ್ಕೆ ತುತ್ತಾದರೂ ಪಾಲಿಸಿದಾರರು ಪ್ರೀಮಿಯಂ ಪಾವತಿಸ ಬೇಕಿಲ್ಲ. ಇಂತಹ ಸನ್ನಿವೇಶದಲ್ಲಿ ಪಾಲಿಸಿದಾರರು ಭವಿಷ್ಯದಲ್ಲಿ ಕಟ್ಟಬೇಕಾದ ಎಲ್ಲ ಪ್ರೀಮಿಯಂಗಳು ಮನ್ನಾ ಆಗುತ್ತದೆ. ಆದರೆ ಇನ್ಶೂರೆನ್ಸ್‌ಯೋಜನೆ ಹಾಗೇ ಮುಂದುವರಿಯುತ್ತದೆ. ಇನ್ನು ಗಂಭೀರ ಕಾಯಿಲೆಯಿಂದ ಸಾವನ್ನಪ್ಪಿದಲ್ಲಿ ಕುಟುಂಬದವರಿಗೆ ಇನ್ಶೂರೆನ್ಸ್‌ ಹಣ ಬರುತ್ತದೆ.

ಮಾಸಿಕ, ತ್ತೈ ಮಾಸಿಕವಾಗಿ ಪ್ರೀಮಿಯಂ ಪಾವತಿಸಬಹುದು
ಮಾಸಿಕವಾಗಿ, ತ್ತೈಮಾಸಿಕವಾಗಿ ಇನ್ಶೂರೆನ್ಸ್‌ ನ ಪ್ರೀಮಿಯಂ ಪಾವತಿಸಬಹುದಾಗಿದ್ದು. ಯೋಜನೆಯ ಪ್ರಾರಂಭದಲ್ಲಿಯೇ ಆಯ್ಕೆ ಮಾಡಿಕೊಳ್ಳ ಬೇಕಾಗುತ್ತದೆ. ಟರ್ಮ್ ಇನ್ಶೂರೆನ್ಸ್‌ ಕಷ್ಟದ ಸಮಯದಲ್ಲಿ ಮಾತ್ರವಲ್ಲದೇ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿಯೂ ಅನುಕೂಲವಾಗಲಿದೆ. ಆದಾಯ ತೆರಿಗೆ ಕಾಯ್ದೆ 80ಇಅಡಿಯಲ್ಲಿ ಇನ್ಶೂರೆನ್ಸ್‌ ಪ್ರೀಮಿಯಂ ಮೊತ್ತವನ್ನು ಕ್ಲೇಮ್‌ ಮಾಡಬಹುದಾಗಿದ್ದು, 1.5 ಲಕ್ಷ ರೂ.ಗಳವರೆಗೂ ಕ್ಲೇಮ್‌ ಮಾಡಬಹುದು. ಶೇ.30ರಷ್ಟು ಟ್ಯಾಕ್ಸ್ ಸ್ಲಾ$Âಬ್‌ ಬರುವವರಿಗೆ ಒಂದು ವರ್ಷದಲ್ಲಿ 45,000 ರೂ.ಗಳಷ್ಟು ಆರ್ಥಿಕ ಅನುಕೂಲತೆ ದೊರೆಯಲಿದೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.