ಯುರೋಪ್ ಪ್ರವಾಸ ಕೈಗೊಳ್ಳುವವರಿಗೆ ಕಾದಿದೆ ಕಹಿ ಸುದ್ದಿ
Team Udayavani, Feb 9, 2020, 6:55 PM IST
ಈ ಬಾರಿ ರಜಾ ದಿನಕ್ಕೆ ಯುರೋಪ್ ಪ್ರವಾಸ ಮಾಡಬೇಕೆಂಬ ಯೋಜನೆ ಹಾಕಿಕೊಂಡಿರುವ ಪ್ರವಾಸಿಗರಿಗೆ ಕಹಿ ಸುದ್ದಿ ಕಾದಿದೆ. ಶೆಂಜೆನ್ ವೀಸಾ ಶುಲ್ಕವನ್ನು 14 ವರ್ಷದ ನಂತರ ಹೆಚ್ಚು ಮಾಡಿದ್ದು, 60 ಯುರೋದಿಂದ 80 ಯುರೋಗೆ ಏರಿಸಲಾಗಿದೆ.
ಶೆಂಜೆನ್ ವೀಸಾ ಎಂದರೇನು ?
ಶೆಂಜೆನ್ ವೀಸಾ ಅಂದರೆ ಅಲ್ಪಾವಧಿ ವೀಸಾವಾಗಿದ್ದು, ಪ್ರವಾಸ ಅಥವಾ ವಾಣಿಜ್ಯ ಉದ್ದೇಶಕ್ಕೆ ಓರ್ವ ವ್ಯಕ್ತಿ ಈ ಶೆಂಜೆನ್ ಪ್ರದೇಶದಲ್ಲಿ 90 ದಿನದ ತನಕ ಇರಬಹುದು. ಆಸ್ಟ್ರಿಯಾ, ಡೆನ್ಮಾರ್ಕ್, ಫ್ರಾ®Õ…, ಜರ್ಮನಿ, ಸ್ವಿಟ್ಸರ್ಲೆಂಡ್ ಸೇರಿದಂತೆ ಯುರೋಪಿಯನ್ ದೇಶಗಳಿಗೆ ಶೆಂಜೆನ್ ವೀಸಾ ಬೇಕಾಗುತ್ತದೆ. ಯುರೋಪಿಯನ್ ಒಕ್ಕೂಟದಲ್ಲಿ ಇರುವ ದೇಶಗಳನ್ನು ಹೊರತುಪಡಿಸಿ, ಭಾರತ ಸೇರಿದಂತೆ ಇತರ ದೇಶಗಳಿಗೆ ಈ ವೀಸಾ ಶುಲ್ಕ ಅನ್ವಯ ಆಗುತ್ತದೆ. ಈ ಹೊಸ ವೀಸಾ ಶುಲ್ಕವು ಫೆಬ್ರವರಿ ಎರಡನೇ ತಾರೀಕಿನಿಂದ ಜಾರಿಗೆ ಬಂದಿದೆ.
ಆರರಿಂದ ಹನ್ನೆರಡನೇ ವಯಸ್ಸಿನ ತನಕದ ಮಕ್ಕಳ ವೀಸಾ ಶುಲ್ಕವನ್ನು ಮೂವತ್ತೈದರಿಂದ ನಲವತ್ತು ಯುರೋಗೆ ಏರಿಸಲಾಗಿದ್ದು, ಶೆಂಜೆನ್ ವೀಸಾವನ್ನು ಪುನರ್ ರೂಪಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದ ವೀಸಾ ಶುಲ್ಕಕ್ಕೆ ಹೋಲಿಸಿದರೆ ಇದು ಕಡಿಮೆ ಎಂದು ಹೇಳಲಾಗುತ್ತಿದೆ.
ವಿಶ್ವದಾದ್ಯಂತ ರಾಯಭಾರ ಸಹಾಯ ನೀಡಲು, ಐಟಿ ಸಲಕರಣೆಗಳನ್ನು ಮೇಲ್ದರ್ಜೆಗೆ ಏರಿಸಲು, ವೀಸಾ ಅರ್ಜಿದಾರರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು ಈ ನಿಯಮ ಅನುಕೂಲ ಆಗಲಿದೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ. ಟೂರ್ ಅಪರೇಟರ್ ಮೂಲಕ ವಿದೇಶ ಪ್ರವಾಸಕ್ಕೆ ತೆರಳಿದರೆ ಐದು ಪರ್ಸೆಂಟ್ ಹೆಚ್ಚು ತೆರಿಗೆಯನ್ನು ತೆತ್ತ ಬೇಕಾಗುತ್ತದೆ ಎಂದು ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.