ಆರೋಗ್ಯ ಇಲಾಖೆಯಲ್ಲಿ ಅರ್ಧದಷ್ಟು ಹುದ್ದೆ ಖಾಲಿ!
ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಡ್ಡಿ
Team Udayavani, Feb 10, 2020, 5:27 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಸಿಬಂದಿ ಕೊರತೆ ಕಾರಣ ಜಿಲ್ಲೆಯಲ್ಲಿ ಇಲಾಖೆಯ ಯೋಜನೆ ಅನುಷ್ಠಾನ, ಆಸ್ಪತ್ರೆ ನಿರ್ವಹಣೆ, ಕೊರೊನಾ ವೈರಸ್ ಅರಿವು ಇನ್ನಿತರ ಸಾಂಕ್ರಾಮಿಕ ರೋಗ ನಿಯಂತ್ರಣ ಕೆಲಸ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಆಸ್ಪತ್ರೆ, ವಾಹನಗಳು, ಮೂಲಸೌಕರ್ಯ ಇದ್ದರೂ ಸಹ ಯೋಜನೆಗಳ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರಿಗಿಂತಲೂ ಸಿಬಂದಿ ಕೊರತೆ ದೊಡ್ಡ ಮಟ್ಟದಲ್ಲಿರುವುದು ಇದಕ್ಕೆ ಕಾರಣವಾಗಿದೆ. ಅನೇಕ ವಿಭಾಗಗಳಲ್ಲಿ ಅರ್ಧದಷ್ಟು ಸಿಬಂದಿ ಕೊರತೆಯನ್ನು ಆರೋಗ್ಯ ಇಲಾಖೆ ಎದುರಿಸುತ್ತಿದೆ.
ಸೇವೆ ಸಿಗುತ್ತಿಲ್ಲ
ಹಳ್ಳಿಗಳಲ್ಲಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮೂಲಸೌಕರ್ಯವೂ ಇದೆ. ಆದರೆ ಸಿಬಂದಿ ಇಲ್ಲದೆ ಸಮರ್ಪಕ ಸೇವೆ ಕಲ್ಪಿಸಲು ಆಗುತ್ತಿಲ್ಲ. ಗ್ರಾಮೀಣ ಪ್ರದೇಶದ ಬಡ ಜನ ಸರಕಾರಿ ಆಸ್ಪತ್ರೆಯನ್ನೇ ನೆಚ್ಚಿಕೊಂಡು ಚಿಕಿತ್ಸೆಗೆ ಧಾವಿಸಿ ಬರುತ್ತಾರೆ. ಆದರೆ ಸಿಬಂದಿ ಇಲ್ಲದೆ ಇದ್ದಾಗ ಸಕಾಲದಲ್ಲಿ ಸೇವೆ ದೊರಕದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ.
ಹುದ್ದೆಗಳು ಭರ್ತಿ ಮಾಡಬೇಕಿದೆ
ಪುರುಷ ಕಿರಿಯ ಆರೋಗ್ಯ ಸಹಾಯಕ ಮಂಜೂರಾತಿಗೊಂಡ ಹುದ್ದೆ 187, ಭರ್ತಿಯಾಗಿರುವುದು 39, ಖಾಲಿಯಿರುವುದು 148 ಹುದ್ದೆಗಳು. ಕಿರಿಯ ಆರೋಗ್ಯ ಸಹಾಯಕಿಯರಲ್ಲಿ ಮುಂಜೂರುಗೊಂಡ 324 ಹುದ್ದೆಗಳ ಪೈಕಿ 216 ಭರ್ತಿಯಾಗಿ 108 ಖಾಲಿ ಇದೆ. ಕಿರಿಯ ಫಾರ್ಮಾಸಿಸ್ಟ್ 74 ಹುದ್ದೆ ಮಂಜೂರುಗೊಂಡಿದ್ದು 38 ಹುದ್ದೆಗಳು ಭರ್ತಿಯಾಗಿ 36 ಹುದ್ದೆಗಳು ಖಾಲಿಯಿವೆ. ಪ್ರಥಮ ದರ್ಜೆ ಸಹಾಯಕ 55, ದ್ವಿತೀಯ ದರ್ಜೆ ಸಹಾಯಕ 16 ಹುದ್ದೆ ಖಾಲಿಯಾಗಿವೆ.
ಕ್ಲರ್ಕ್ ಕಂ ಟೈಪಿಸ್ಟ್ ಕೇವಲ 1 ಹುದ್ದೆ ಭರ್ತಿಗೊಂಡಿದ್ದು 8 ಹುದ್ದೆಗಳು ಖಾಲಿ ಇವೆ. ಹಿರಿಯ ಪ್ರಯೋಗಶಾಲೆ ಟೆಕ್ನಿಶಿಯನ್ 7ರಲ್ಲಿ 2 ಹುದ್ದೆ ಮಾತ್ರ ಭರ್ತಿಗೊಂಡು 5 ಹುದ್ದೆ ಖಾಲಿ ಇದೆ. ಸಹಾಯಕ ಸಂಖ್ಯಾಧಿಕಾರಿ ಹುದ್ದೆ ನಾಲ್ಕೂ ಖಾಲಿ ಇದೆ. ಎ ವೃಂದದಲ್ಲಿ ಬರುವ ವಿಭಾಗದಲ್ಲಿ ಸದ್ಯಕ್ಕೆ ವೈದ್ಯರ ಕೊರತೆ ಇದ್ದರೂ ಖಾಯಂ ಹಾಗೂ ಗುತ್ತಿಗೆ ವೈದ್ಯರು ಕರ್ತವ್ಯದಲ್ಲಿರುವುದರಿಂದ ಹೆಚ್ಚಿನ ಸಮಸ್ಯೆ ಉಂಟು ಮಾಡಿಲ್ಲ. ಆದರೆ ಎ, ಬಿ, ಸಿ ಮತ್ತು ಡಿ ದರ್ಜೆಯ ಈ ನಾಲ್ಕು ವಿಭಾಗಳಲ್ಲಿ ಅನೇಕ ಹುದ್ದೆಗಳು ಖಾಲಿ ಬಿದ್ದಿರುವುದಂತೂ ಸತ್ಯ.
ಖಾಲಿಯಿರುವ ಹುದ್ದೆಗಳು
ಎ ವೃಂದದಲ್ಲಿ ಬರುವ ವಿಭಾಗದಲ್ಲಿ ವೈದ್ಯರ ಕೊರತೆ ಸದ್ಯ ಇರುವುದಿಲ್ಲ. ಖಾಯಂ ಹಾಗೂ ಗುತ್ತಿಗೆ ವೈದ್ಯರು ಕರ್ತವ್ಯದಲ್ಲಿದ್ದಾರೆ. ಉಳಿದಂತೆ ಎ, ಬಿ, ಸಿ ಮತ್ತು ಡಿ ದರ್ಜೆಯ ಈ ನಾಲ್ಕು ವಿಭಾಗಗಳಲ್ಲಿ ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ಪುರುಷ ಕಿರಿಯ ಆರೋಗ್ಯ ಸಹಾಯಕ ಮಂಜೂರಾತಿಗೊಂಡ ಹುದ್ದೆ 187, ಭರ್ತಿಯಾಗಿರುವುದು 39, ಖಾಲಿಯಿರುವುದು 148 ಹುದ್ದೆಗಳು. ಕಿರಿಯ ಆರೋಗ್ಯ ಸಹಾಯಕಿಯರಲ್ಲಿ ಮುಂಜೂರುಗೊಂಡ 324 ಹುದ್ದೆಗಳ ಪೈಕಿ 216 ಭರ್ತಿಯಾಗಿ 108 ಖಾಲಿ ಇವೆ. ಕಿರಿಯಾ ಫಾರ್ಮಾಸಿಸ್ಟ್ 74 ಹುದ್ದೆ ಮಂಜೂರುಗೊಂಡಿದ್ದು 38 ಹುದ್ದೆಗಳು ಭರ್ತಿಯಾಗಿ 36 ಹುದ್ದೆಗಳು ಖಾಲಿಯಿವೆ. ಪ್ರಥಮ ದರ್ಜೆ ಸಹಾಯಕ 55, ದ್ವಿತೀಯ ದರ್ಜೆ ಸಹಾಯಕ 16 ಹುದ್ದೆ ಖಾಲಿಯಾಗಿವೆ, ಕ್ಲರ್ಕ್ ಕಂ ಟೈಪಿಸ್ಟ್ ಕೇವಲ 1 ಹುದ್ದೆ ಭರ್ತಿಗೊಂಡಿದ್ದು 8 ಹುದ್ದೆಗಳು ಖಾಲಿ ಇವೆ. ಹಿರಿಯ ಪ್ರಯೋಗಶಾಲೆ ಟೆಕ್ನಿಶಿಯನ್ 7ರಲ್ಲಿ 2 ಹುದ್ದೆ ಮಾತ್ರ ಭರ್ತಿಗೊಂಡು 5 ಹುದ್ದೆ ಖಾಲಿ ಇದೆ. ಸಹಾಯಕ ಸಂಖ್ಯಾಧಿಕಾರಿ ಹುದ್ದೆಗಳು ನಾಲ್ಕೂ ಖಾಲಿ ಇವೆ.
ಆರೋಗ್ಯ ಇಲಾಖೆಯಲ್ಲಿ ಸಿಬಂದಿ ಕೊರತೆಯಾದರೆ ಅದರ ನೇರ ಪರಿಣಾಮ ರೋಗಿಗಳ ಮೇಲೆ ಬೀಳುತ್ತದೆ. ತುರ್ತು ಸಂದರ್ಭಗಳಲ್ಲಿ ಸಿಬಂದಿ ಕೊರತೆ ಆರೋಗ್ಯ ಇಲಾಖೆಯನ್ನು ಹೈರಾಣಾಗಿಸಿದೆ.
ಪ್ರಸ್ತಾವನೆ ಸಲ್ಲಿಸಿದ್ದೇವೆ
ಇಲಾಖೆಯಲ್ಲಿ ವೈದ್ಯರ ಕೊರತೆಯಿರುವುದಿಲ್ಲ. ಇತರೆ ವಿಭಾಗಗಳಲ್ಲಿ ಹುದ್ದೆಗಳು ಖಾಲಿಯಿರುವುದು ತುಸು ತೊಡಕಾಗಿದೆ. ಭರ್ತಿ ಸಂಬಂಧ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಹಂತಹಂತವಾಗಿ ಭರ್ತಿ ಪ್ರಕ್ರಿಯೆಗಳು ನಡೆಯುತ್ತಿವೆ. ಇರುವ ಸಿಬಂದಿ ಬಳಸಿಕೊಂಡು ಇಲಾಖೆ ಉತ್ತಮ ಸೇವೆ ನೀಡುತ್ತಿದೆ.
-ಸುಧೀರ್‌ಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ.
ಒತ್ತಡ ತರುತ್ತಲೇ ಇದ್ದೇವೆ
ಜಿಲ್ಲೆಯ ವಿವಿಧೆಡೆಯ ಆರೋಗ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿ ಈ ಹಿಂದೆ ಅನೇಕ ಬಾರಿ ಆರೋಗ್ಯ ಇಲಾಖೆ ಸಚಿವರ ಸಹಿತ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ಗಮನಕ್ಕೂ ಇದನ್ನು ತಂದಿದ್ದೇವೆ.
-ದಿನಕರಬಾಬು,
ಅಧ್ಯಕ್ಷರು, ಜಿ.ಪಂ. ಉಡುಪಿ.
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.