ಗುಲ್ವಾಡಿ ವೆಂಟೆಡ್ ಡ್ಯಾಂ ಮೂಲಕ ಬಸ್ ಸಂಚರಿಸಲಿ: ಪ್ರಯಾಣಿಕರ ಮನವಿ
Team Udayavani, Feb 10, 2020, 6:49 AM IST
ಬಸ್ರೂರು: ಬಸ್ರೂರಿನಿಂದ ವಾರಾಹಿ ನದಿ ತಟದ ಮೇಲೆ ಗುಲ್ವಾಡಿ ಕಳುವಿನಬಾಗಿಲುವರೆಗೆ ರಸ್ತೆಯಿದೆ. ಬಹಳ ಹಿಂದೆ ಇಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣಕ್ಕೂ ಮೊದಲು ಒಂದು ಬಸ್ ಕಂಡ್ಲೂರು ಹಳೆ ಕಳುವಿನಬಾಗಿಲಿನವರೆಗೆ ಬಂದು ಹೋಗುತ್ತಿತ್ತು. ಅನಂತರ ಆ ಬಸ್ ನಿಂತು ಹೋಯಿತು.
ಕಳುವಿನಬಾಗಿಲಿನಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣವಾಗಿ ಹತ್ತು ವರ್ಷಕ್ಕೂ ಹೆಚ್ಚು ಸಮಯ ಕಳೆಯಿತು. ಈ ಡ್ಯಾಂ ಮೇಲೆ ದೊಡ್ಡ ವಾಹನ ಮಾತ್ರ ಸಂಚರಿಸಲು ಸಾಧ್ಯವಿಲ್ಲ. ಅಂದರೆ ಮಿನಿ ಬಸ್ ಬಿಟ್ಟರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯರ ಮನವಿಯಾಗಿದೆ.
ಕುಂದಾಪುರದಿಂದ ತಲ್ಲೂರು-ಹೆಮ್ಮಾಡಿ ಮೂಲಕ ಕೊಲ್ಲೂರು ತಲುಪುದಕ್ಕೆ ಹೆಚ್ಚು ದೂರವಿದೆ. ಆ ಮಾರ್ಗದ ಬದಲು ಬಸ್ರೂರು-ಗುಲ್ವಾಡಿ-ಮಾವಿನಕಟ್ಟೆ-ವಂಡ್ಸೆ ಮೂಲಕ ಕೊಲ್ಲೂರಿಗೆ ಸಂಚರಿಸಿದರೆ ಅರ್ಧಕ್ಕಿಂತ ಹೆಚ್ಚು ದೂರ ಕಡಿಮೆಯಾಗುತ್ತದೆ.
ಈ ಮಾರ್ಗದಲ್ಲಿ ಬಸ್ ಸಂಚ ರಿಸುವುದರಿಂದ ಬಸ್ರೂರು-ಕೋಣಿ-ಕಂದಾವರ-ಬಳ್ಕೂರು-ಜಪ್ತಿಹುಣ್ಸೆ ಮಕ್ಕಿ-ಹಾಲಾಡಿ- ನೇರಳಕಟ್ಟೆ ಮಂತಾದ ಗ್ರಾಮಗಳ ಜನರಿಗೆ ಅನುಕೂಲ
ವಾಗುತ್ತದೆ ಎನ್ನುವುದು ಇಲ್ಲಿನ ಜನರ ಆಶಯವಾಗಿದೆ.
ಬಸ್ ಸಂಚರಿಸಿದರೆ ಅನುಕೂಲ
ನಾನು ಪ್ರತಿದಿನ ಬಸ್ರೂರಿನಿಂದ ನೇರಳಕಟ್ಟೆಗೆ ಕಚೇರಿ ಕೆಲಸಕ್ಕೆ ಹೋಗಲು ಕುಂದಾಪುರಕ್ಕೆ ಹೋಗಿ ಅಲ್ಲಿಂದ ತಲ್ಲೂರು-ಮಾವಿನಕಟ್ಟೆ ಮಾರ್ಗವಾಗಿ ಸಾಗಿ ನೇರಳಕಟ್ಟೆಗೆ ಕಚೇರಿ ಕೆಲಸಕ್ಕೆ ಹೋಗುತ್ತಿದ್ದೇನೆ. ಈ ಮಾರ್ಗದಲ್ಲಿ ಬಸ್ ಸಂಚರಿಸಿದರೆ ನನ್ನಂತಹ ಅನೇಕ ಮಂದಿಗೆ ಅನುಕೂಲ
– ರಮಾನಾಥ್, ಸ್ಥಳೀಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.