20-ಟ್ವೆಂಟಿ ಬಜೆಟ್‌ : ಡಿಡಿಟಿ,ಹೂಡಿಕೆ ವಿಮೆ,ಎನ್ನಾರೈ ಇತ್ಯಾದಿ


Team Udayavani, Feb 10, 2020, 7:15 AM IST

T-20

ಕೆಲವು ಜಾಣರು ಭಾರತದಿಂದ ಹೊರಕ್ಕೆ ಹೋಗಿ ವಿಶ್ವ ಪರ್ಯಟನೆ ಮಾಡುತ್ತಾ ಯಾವುದೇ ದೇಶದ ಕರ ನಿವಾಸಿಗಳಾಗಿರುವುದಿಲ್ಲ. ಅಂತಹ ಎಲ್ಲೂ ಸಲ್ಲದವರು ಇನ್ನು ಮುಂದೆ ಇಲ್ಲಿ ಸಲ್ಲುತ್ತಾರೆ. ಅವರನ್ನು ಭಾರತದ ನಿವಾಸಿ ಎಂದೇ ಪರಿಗಣಿಸಿ ಉಳಿದ ನಿವಾಸಿಗಳಂತೆ ಅವರ ಜಾಗತಿಕ ಆದಾಯದ ಮೇಲೆಯೂ ಇಲ್ಲಿ ಕರ ಹೇರಲಾಗುವುದು.
ಈ ಮೂಲಕ ಕಾನೂನಿನಲ್ಲಿದ್ದ ಲೋಪವನ್ನು ಸರಿಪಡಿಸಲಾಗಿದೆ.

ಕಳೆದ ವಾರ 20-ಟ್ವೆಂಟಿ ಬಜೆಟ್ಟಿನ ಒಂದು ಮಜಲು ಮಾತ್ರ ನೋಡಿ¨ªೆವು. ಎರಡೆರಡು ಕರ ಪಟ್ಟಿ ಗಳನ್ನೆದುರಿಗಿಟ್ಟು ಯಾವುದು ಬೇಕೋ ತೆಗೆದುಕೊಳ್ಳಿ ಎನ್ನುವ ಮಹಾ ಗೊಂದಲ ಹುಟ್ಟಿಹಾಕಿದ ಊಟಕ್ಕಿಲ್ಲದ ಉಪ್ಪಿನಕಾಯಿಯ ಪುಣ್ಯಕಥೆಯನ್ನು ವಿವರವಾಗಿ ಅಂಕಿಅಂಶಗಳ ಸಹಿತ ವಿವರಿಸಿದ್ದೇನೆ. ಹೂಡಿಕೆ/ರಿಯಾಯಿತಿ ಇಲ್ಲದವರು ಮಾತ್ರ ಹೊಸಪಟ್ಟಿಯತ್ತ ನೋಡಬಹುದೇ ಹೊರತು ಹೂಡಿಕೆ/ರಿಯಾಯಿತಿ ಪಡೆಯಲು ಶಕ್ಯರು ಮತ್ತು ಆಸಕ್ತರು ಸದ್ಯಕ್ಕೆ ಅತ್ತಕಡೆ ನೋಡುವ ಅಗತ್ಯವಿಲ್ಲ. ಈ ಬಜೆಟ್‌ ಬಂದೇ ಇಲ್ಲವೋ ಎಂಬಂತೆ ಹಳೆಯ ಬಜೆಟ್ಟಿನ ಪ್ರಕಾರ ನಿಮ್ಮ ವಿತ್ತಪಯಣವನ್ನು ಮುಂದುವರಿಸಬಹುದು.

ಒಮ್ಮೆ ಆಯ್ಕೆ ಮಾಡಿಕೊಂಡ ಬಳಿಕ ಹಳೆ ಪಟ್ಟಿ ಹೊಸ ಪಟ್ಟಿಗಳನ್ನು ವರ್ಷ ವರ್ಷ ಬದಲಾಯಿಸುವಂತಿಲ್ಲ ಎಂಬುದಾಗಿ ಬಜೆಟ್‌ ದಿನ ವರದಿಯಾಗಿತ್ತು. ನಾನೂ ಕೂಡಾ ಅದನ್ನೇ ಉÇÉೇಖ ಮಾಡಿ¨ªೆ. ಆದರೆ ಆ ಬಳಿಕ ಬಂದ ಸ್ಪಷ್ಟೀಕರಣದ ಪ್ರಕಾರ ಬಿಸಿನೆಸ್‌ ಆದಾಯ ಇಲ್ಲದವರು ವರ್ಷ ವರ್ಷ ತಮಗೆ ಬೇಕಾದಂತೆ ಬದಲಾವಣೆ ಮಾಡಬಹುದಂತೆ. ಬಿಸಿನೆಸ್‌ ಆದಾಯ ಉಳ್ಳವರಿಗೆ ಮಾತ್ರ ಇದು ಒನ್‌ಟೈಮ್‌ ಆಫ‌ರ್‌! ಒಂದು ಬಾರಿ ಆಯ್ದ ಬಳಿಕ ಪದ್ಧತಿಯನ್ನು ಬದಲಾಯಿಸುವಂತಿಲ್ಲ. ಅಷ್ಟಕ್ಕೂ ಈ ಎರಡೆರಡು ಪಟ್ಟಿಗಳ ಸರ್ಕಸ್‌ ಎಷ್ಟು ವರ್ಷ ಮುಂದುವರಿಯಲಿದೆಯೋ ದೇವನೇ ಬಲ್ಲ.

ಡಿಡಿಟಿ: ಈ ಬಜೆಟ್ಟಿನ ಇನ್ನೊಂದು ಮಹತ್ವದ ಘೋಷಣೆ ಏನೆಂದರೆ ಅದು ಡಿವಿಡೆಂಡ್‌ ಡಿಸ್ಟ್ರಿಬ್ಯೂಶನ್‌ ಟ್ಯಾಕ್ಸ್‌ (ಡಿಡಿಟಿ)ಯನ್ನು ತೆಗೆದುಹಾಕಿದ್ದು. ಈವರೆಗೆ ಕಂಪೆನಿ/ಮ್ಯೂಚುವಲ್‌ ಫ‌ಂಡುಗಳು ಡಿವಿಡೆಂಡ್‌ ವಿತರಣೆ ಮಾಡುವ ಮೊದಲು ಈಕ್ವಿಟಿ ಫ‌ಂಡಿಗೆ ಶೇ.11.648 ಹಾಗೂ ಡೆಟ್‌ ಫ‌ಂಡಿಗೆ ಶೇ.29.12 ಡಿಡಿಟಿ ಕಡಿತ ಮಾಡಿ ಉಳಿದ ಮೊತ್ತವನ್ನು ಹೂಡಿಕೆದಾರರಿಗೆ ನೀಡುತ್ತಲಿತ್ತು. ಅಂತಹ ಡಿಡಿಟಿ ಪಾವತಿಸಿದ ಡಿವಿಡೆಂಡ್‌ ಹೂಡಿಕೆದಾರರ ಕೈಯಲ್ಲಿ ಇನ್ನೊಮ್ಮೆ ಆದಾಯ ತೆರಿಗೆಗೆ ಒಳಪಡುತ್ತಿರಲಿಲ್ಲ. ಡಿವಿಡೆಂಡ್‌ ಇನ್ಕಂ ಟ್ಯಾಕ್ಸ್‌ ಫ್ರೀ ಆಗಿತ್ತು. ಆದರೆ ಇನ್ನು ಮುಂದೆ ಡಿಡಿಟಿ ಇರಲಾರದು. ಹಾಗಾಗಿ ನೀವು ಪಡೆವ ಯಾವುದೇ ಡಿವಿಡೆಂಡ್‌ ಅನ್ನು ನಿಮ್ಮ ಆದಾಯ ಎಂದು ಪರಿಗಣಿಸಿ ಕರ ಕಟ್ಟತಕ್ಕದ್ದು.

ಇದೊಂದು ರೀತಿ ಚಂದ್ರುವಿನ ಹಾಗೆ! ಸಿಹಿ ಕಹಿ ಎರಡೂ ಇದೆ. ಈಕ್ವಿಟಿ ಫ‌ಂಡುಗಳಲ್ಲಿನ ಶೇ.11.648 ಹಾಗೂ ಡೆಟ್‌ ಫ‌ಂಡಗಳಲ್ಲಿನ ಶೇ. 29.12ಕ್ಕಿಂತ ಕೆಳಗಿನ ದರದಲ್ಲಿ ತೆರಿಗೆ ಕಟ್ಟುವವರಿಗೆ ಇದು ಸಿಹಿ; ಅದರಿಂದ ಮೇಲಿನ ದರದಲ್ಲಿ ಕರ ಕಟ್ಟುವವರಿಗೆ ಇದು ಕಹಿ. ಬಹುತೇಕ ಡೆಟ್‌ ಫ‌ಂಡ್‌ ಹೂಡಿಕೆದಾರರಿಗೆ ಇದು ಒಳ್ಳೆಯ ಸುದ್ದಿಯೇ ಸರಿ. ಏನು? ಒಮ್ಮೆ ಕೈಗೆ ಡಿವಿಡೆಂಡ್‌ ಬಂದ ನಂತರ ಟ್ಯಾಕ್ಸ್‌ ಯಾರು ಸಾರ್‌ ಕಟಾ¤ರೆ ಅಂದಿರಾ? ಅದನ್ನು ಖಚಿತಪಡಿಸಲು ಕೂಡಾ ಒಂದು ಟೆಕ್ನಿಕ್‌ ಅಳವಡಿಸಲಾಗಿದೆ. ರೂ. 5,000 ದಾಟಿದ ಎÇÉಾ ಡಿವೆಡೆಂಡ್‌ ಪಾವತಿಗಳೂ ಕೂಡಾ ಶೇ. 10 ಟಿಡಿಎಸ್‌ ಕಡಿತವಾಗಿಯೇ ನಿಮ್ಮ ಕೈಸೇರುತ್ತದೆ. ಟಿಡಿಎಸ್‌ ಮಾಹಿತಿ ಆದಾಯ ತೆರಿಗೆಯ ಕಂಪ್ಯೂಟರಿಗೆ ಹೋಗಿ ನಿಮ್ಮ ರಿಟರ್ನ್ಸ್ ಫೈಲಿಂಗ್‌ ಅನ್ನು ಕಾಯುತ್ತಾ ಕುಳಿತಿರುತ್ತದೆ. ಅಂತಹ ಆದಾಯ ಟಿಡಿಎಸ್‌ ಮತ್ತು ಬಾಕಿ ಟ್ಯಾಕ್ಸ್‌ ತಾಳೆಯಾಗದೆ ಕಂಪ್ಯೂಟರ್‌ ಭೂತ ನಿಮ್ಮನ್ನು ಬಿಡಲಾರದು. ಹಾಗಾಗಿ ಡಿವಿಡೆಂಡ್‌ ಆದಾಯವನ್ನು ನೀವು ಸಂಪೂರ್ಣವಾಗಿ ಡಿಕ್ಲೇರ್‌ ಮಾಡಿ ಬಾಕಿ ತೆರಿಗೆ (ಇದ್ದರೆ) ಕಟ್ಟಲೇ ಬೇಕು. ಕಮ್ಮಿ ತೆರಿಗೆ ಅಥವಾ ತೆರಿಗೆಯೇ ಇಲ್ಲದವರು ಟಿಡಿಎಸ್‌ ಮೊತ್ತವನ್ನು ರಿಟರ್ನ್ಸ್ ಫೈಲಿಂಗ್‌ ಮೂಲಕ ರಿಫ‌ಂಡ್‌ ಪಡೆಯಬಹುದು.

ಡೆಪಾಸಿಟ್‌ ಇನ್ಶೂರೆನ್ಸ್‌: ಬ್ಯಾಂಕುಗಳಲ್ಲಿ ಇಟ್ಟ ದುಡ್ಡು (ಎಫ್ಡಿ/ ಎಸ್‌ಬಿ/ ಆರ್‌ಡಿ) ವಿಮೆಗೆ ಒಳಪಡುತ್ತದೆ. ಬ್ಯಾಂಕ್‌ ಮತ್ತು ಸಹಕಾರಿ ಬ್ಯಾಂಕುಗಳು ರಿಸರ್ವ್‌ ಬ್ಯಾಂಕಿನ ಕಾನೂನಿನ ಪ್ರಕಾರ ಡೆಪಾಸಿಟ್‌ ಇನ್ಶೂರೆನ್ಸ್‌ ಮಾಡಿಕೊಳ್ಳಬೇಕು. ಒಬ್ಟಾತ ಡೆಪಾಸಿಟರ್‌ ಹೆಸರಿನಲ್ಲಿ ರೂ. 1 ಲಕ್ಷಕ್ಕೆ ಡೆಪಾಸಿಟ್‌ ಇನ್ಶೂರೆನ್ಸ್‌ ಇರುತ್ತಿತ್ತು. ಆದರೆ ಈಗ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಈ ಮಿತಿಯನ್ನು ರೂ. 5 ಲಕ್ಷಕ್ಕೆ ಏರಿಸಿ¨ªಾರೆ. ಈ ಮಿತಿ ಒಬ್ಟಾತನ ಹೆಸರಿನಲ್ಲಿ ಒಂದು ಬ್ಯಾಂಕಿನ ಲೆಕ್ಕದಲ್ಲಿ; ಬ್ರಾಂಚ್‌ ಲೆಕ್ಕದಲ್ಲಿ ಅಲ್ಲ ಹಾಗೂ ಅದು ರೂ. 5 ಲಕ್ಷದ ಮುಖ ಬೆಲೆಯ ಮೇಲಲ್ಲ. ಬಡ್ಡಿ ಸಹಿತ ಕಾಲ ಕಾಲಕ್ಕೆ ನಿಮ್ಮ ಹೆಸರಿನಲ್ಲಿ ಸಂಚಯವಾದ ಒಟ್ಟು ದುಡ್ಡಿನ ಮೇಲೆ. ನೀವು ಡಿಪಾಸಿಟ್‌ ಇಟ್ಟ ಬ್ಯಾಂಕ್‌ ಕವುಚಿ ಬಿದ್ದು ಪ್ರಾಣ ಬಿಟ್ಟರೆ ವಿಮಾ ಸಂಸ್ಥೆ ರೂ. 5 ಲಕ್ಷ ಮಿತಿಯೊಳಗೆ ನಿಮ್ಮ ಹಣವನ್ನು ನಿಮಗೆ ಕೊಡಲಿರುವುದು.

ಎನ್ನಾರೈ: ಈ ಬಾರಿ ಎನ್ನಾರೈ ವಿಚಾರವಾಗಿ ಒಂದೆರಡು ವಿಚಾರಗಳು ಬಂದಿವೆ. ಇನ್ನು ಮುಂದಕ್ಕೆ ಎನ್ನಾರೈಗಳು ಅಂದರೆ ದೇಶದಿಂದ ಹೊರಗೆ ಇದ್ದರೆ ಸಾಲದು. ಅವರು ಯಾವುದಾದರೂ ಒಂದು ದೇಶದ ಟ್ಯಾಕ್ಸ್‌ ರೆಸಿಡೆಂಟ್‌ ಆಗಿರಬೇಕಾದ್ದು ಅಗತ್ಯ. ಆ ರೀತಿ ಯಾವ ದೇಶದ “ಕರ ನಿವಾಸಿ’ ಆಗಿ¨ªಾರೋ ಆ ದೇಶದೊಡನೆ ಇರುವ ಕರ ಒಪ್ಪಂದದ ಮೇರೆಗೆ ಅವರ ಆದಾಯ ಕರವನ್ನು ನಿರ್ಣಯಿಸಲಾಗುತ್ತದೆ. ಬಹುತೇಕ ಹೆಚ್ಚಿನ ದೇಶಗಳೊಡನೆ ಭಾರತವು ಡಬಲ್‌ ಟ್ಯಾಕ್ಸ್‌ ಅವೈಡನ್ಸ್‌ ಎಗ್ರಿಮೆಂಟಿಗೆ ಸಹಿ ಹಾಕಿದೆ. ಅದರ ಪ್ರಕಾರ ಒಂದೇ ಆದಾಯದ ಮೇಲೆ ಎರಡು ದೇಶಗಳು ಡಬಲ್‌ ಕರ ಹೇರುವಂತಿಲ್ಲ. ಬಹುತೇಕ ವಿದೇಶದ ಆದಾಯದ ಮೇಲೆ ಆ ದೇಶವೂ ಭಾರತದ ಆದಾಯದ ಮೇಲೆ ಭಾರತವೂ ಓರ್ವ ಎನ್ನಾರೈ ಮೇಲೆ ಕರ ಹೇರುವುದು ಕಾನೂನು. ದುಬೈ ಅಥವಾ ಯು.ಎ.ಇ ನಲ್ಲಿ ಇರುವ ಅಲ್ಲಿಯ ನಿವಾಸಿ ಭಾರತೀಯರ ಅಲ್ಲಿನ ಆದಾಯದ ಮೇಲೆ ದುಬೈ/ಯು.ಎ.ಇ ಕರ ಹೇರುತ್ತದೆ. (ಅದು ಶೂನ್ಯ ದರ ಎನ್ನುವುದು ಬೇರೆ ವಿಚಾರ). ಆದರೆ ಅವರ ಈ ನೆಲದಲ್ಲಿನ ಆದಾಯದ ಮೇಲೆ ಭಾರತ ಕರ ಹೇರುತ್ತದೆ. ಈ ಪದ್ಧತಿ ಸರಿಯಾದದ್ದು ಹಾಗೆ ಅದು ಹಾಗೆಯೇ ಮುಂದುವರಿಯುತ್ತದೆ. ಆದರೆ ಕೆಲ ಜಾಣರು ಭಾರತದಿಂದ ಹೊರಕ್ಕೆ ಹೋಗಿ ವಿಶ್ವ ಪರ್ಯಟನೆ ಮಾಡುತ್ತಾ ಯಾವುದೇ ದೇಶದ ಕರ ನಿವಾಸಿಗಳಾಗಿರುವುದಿಲ್ಲ. ಅಂತಹ ಎಲ್ಲೂ ಸಲ್ಲದವರು ಇನ್ನು ಮುಂದೆ ಇಲ್ಲಿ ಸಲ್ಲುತ್ತಾರೆ. ಅವರನ್ನು ಭಾರತದ ನಿವಾಸಿ ಎಂದೇ ಪರಿಗಣಿಸಿ ಉಳಿದ ನಿವಾಸಿಗಳಂತೆ ಅವರ ಜಾಗತಿಕ ಆದಾಯದ ಮೇಲೆಯೂ ಇಲ್ಲಿ ಕರ ಹೇರಲಾಗುವುದು. ಈ ಮೂಲಕ ಕಾನೂನಿನಲ್ಲಿದ್ದ ಲೋಪವನ್ನು ಸರಿಪಡಿಸಲಾಗಿದೆ. ದುಬೈ/ಸೌದಿಯಲ್ಲಿರುವ ಅಮೆರಿಕ ಯುರೋಪ್‌ನಲ್ಲಿರುವ ಅಥವಾ ಇನ್ನಿತರ ದೇಶಗಳಲ್ಲಿರುವ ಅಲ್ಲಿನ ಸೀದಾ ಸಾದಾ ಕರನಿವಾಸಿ ಭಾರತೀಯರು ಇದರಿಂದ ಭಯ ಪಡಬೇಕಾಗಿಲ್ಲ.

ಅದಲ್ಲದೆ, ಎನ್ನಾರೈ ಎಂಬ ಪದದ ಅರ್ಥವನ್ನೂ ಈ ಬಜೆಟ್‌ ಬದಲಿಸಿದೆ.ಇದುವರೆಗೆ, ವಿದೇಶಕ್ಕೆ ಕೆಲಸಕ್ಕೆ ಹೋಗುವವರು ಆ ವರ್ಷದಲ್ಲಿ 182 ದಿನಗಳಷ್ಟು ಭಾರತದಲ್ಲಿ ವಾಸವಾಗಿದ್ದ ಭಾರತೀಯ ನಿವಾಸಿ ಭಾರತೀಯನಾಗುತ್ತಾನೆ ಎಂದಿತ್ತು. ಈ ಬಾರಿ ಅದನ್ನು ಇನ್ನಷ್ಟು ಬಿಗಿಗೊಳಿಸಿ ವರ್ಷದಲ್ಲಿ 120 ದಿನಗಳು ಇದ್ದರೂ ಆತ ನಿವಾಸಿಯಾಗುತ್ತಾನೆ.ಅದರಿಂದ ಕಡಿಮೆ ಸಮಯ ಭಾರತದಲ್ಲಿ ಇದ್ದರೆ ಮಾತ್ರ ಆತ ಅನಿವಾಸಿ ಭಾರತೀಯ ಅಥವಾ ಎನ್ನಾರೈ ಆಗುತ್ತಾನೆ. ಭಾರತದಿಂದ ಹೊರಗಿನ ಲೆಕ್ಕ ನೋಡಿದರೆ ಮೊದಲು 182 ಇದ್ದಿದ್ದು ಈಗ 245ದಿನಗಳು (365-120) ಎಂಬುದಾಗಿ ಮಾಡಿ¨ªಾರೆ. ಇದರಿಂದಾಗಿ ಎನ್ನಾರೈ ಆಗುವುದು ತುಸು ಜಾಸ್ತಿ ಕಷ್ಟಕರವಾಗಿದೆ. ಕರ ವಸೂಲಿಗೆ ಇದು ಇನ್ನೊಂದು ದಾರಿ.

ಹಾಗೆಯೇ ಅನಿವಾಸಿಗಳ ಬಗ್ಗೆ ಇನ್ನೊಂದು ಮಹತ್ತರವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ.ಆì.ಎನ್‌.ಓ.ಆರ್‌ (ರೆಸಿಡೆಂಟ್‌ ಬಟ್‌ ನಾಟ್‌ ಆರ್ಡಿನರಿಲಿ ರೆಸಿಡೆಂಟ್‌) ಎಂಬ ಒಂದು ವಿಭಾಗ ವಿದೆ. ಇದು ಎನ್ನಾರೈಗಳು ಭಾರತಕ್ಕೆ ವಾಪಾಸು ಬಂದ ಬಳಿಕ ಅವರಿಗೆ ನೀಡಲಾದ ಅವಧಿ. ಈ ಅವಧಿಯಲ್ಲಿ ಕೂಡಾ ಅವರು ನಿವಾಸಿಗಳಾದರೂ ಕೂಡಾ ಅನಿವಾಸಿಗಳಂತೆಯೇ ಕರ ಕಾನೂನು ಲಾಗೂ ಆಗುತ್ತದೆ. ಆ ಅವಧಿ ಮುಗಿದ ಬಳಿಕವಷ್ಟೇ ಅವರು ಸಂಪೂರ್ಣ ನಿವಾಸಿಗಳಾಗಿ ಇತರ ನಿವಾಸಿ ಭಾರತೀಯರಂತೆ ಜಾಗತಿಕ ಆದಾಯಕ್ಕೂ (ಇದ್ದರೆ) ಭಾರತದಲ್ಲಿ ಕರ ಕಟ್ಟಬೇಕು. ಇದು ಎನ್ನಾರೈಗಳಿಗೆ ನೀಡಿರುವ ಒಂದು ಸವಲತ್ತು; ಒಂದು ಕೂಲಿಂಗ್‌-ಆಫ್ ಪೀರಿಯಡ್‌! ಆ ಅವಧಿ ಯಲ್ಲಿ ತಮಗೆ ಬೇಕಾದಂತೆ ಹೂಡಿಕೆ/ಆದಾಯ ಮೂಲಗಳನ್ನು ಬದಲಾಯಿಸಬಹುದು. ಈ ಬಜೆಟ್ಟಿನಲ್ಲಿ, ಈ ಆರ್‌.ಎನ್‌.ಓ.ಆರ್‌ ವರ್ಗದ ಅರ್ಥವನ್ನು ಬದಲಿಸಿದೆ.

ಇದುವರೆಗೆ ಕಳೆದ 10 ರಲ್ಲಿ 9 ವರ್ಷಗಳಿಂದ ಅನಿವಾಸಿಯಾಗಿದ್ದವರು ಅಥವಾ ಕಳೆದ 7 ವರ್ಷಗಳಲ್ಲಿ 729 ದಿನಗಳಿಗಿಂತ ಕಡಿಮೆ ನಿವಾಸಿಗಳಾಗಿದ್ದವರು ಈ ತರಗತಿಯಲ್ಲಿ ಬರುತ್ತಿದ್ದರು. ಇನ್ನು ಮುಂದೆ ಕಳೆದ 10 ವರ್ಷಗಳಲ್ಲಿ 7 ವರ್ಷಗಳ ಕಾಲ ಅನಿವಾಸಿಗಳಾಗಿದ್ದವರು ಮಾತ್ರ ಈ ತರಗತಿಯ ಒಳಗೆ ಬರುತ್ತಾರೆ. ಅಂದರೆ ಸುಮಾರು 3 ವರ್ಷಗಳ ಕಾಲ ಈ ಸೌಲಭ್ಯವನ್ನು ಅನುಭವಿಸಬಹುದು.

ಕಂಪೆನಿ ದೇಣಿಗೆ: ನೌಕರಿಯಲ್ಲಿರುವ ಒಬ್ಟಾತನ ಹೆಸರಿನಲ್ಲಿ ಕಂಪೆನಿಯು ನೇರವಾಗಿ ಪಾವತಿ ಸುವ ಇ.ಪಿ.ಎಫ್, ಎನ್‌.ಪಿ.ಎಸ್‌. ಹಾಗೂ ಪೆನ್ಶನ್‌ ಫ‌ಂಡ್‌ ದೇಣಿಗೆಗಳು ಕರ ಮುಕ್ತವಾಗಿದೆ ಯಷ್ಟೆ? ಅದಕ್ಕೆ ಈಗ ವಾರ್ಷಿಕ ರೂ. 7.5 ಲಕ್ಷದ ಮಿತಿ ಹಾಕಲಾಗಿದೆ. ಇಂತಹ ಕರ ಮುಕ್ತ ದೇಣಿಗೆಗಳು ರೂ. 7.5 ಲಕ್ಷ ಮೀರಿದರೆ ಉದ್ಯೋಗಿಯು ಅಂತಹ ಹೆಚ್ಚುವರಿ ಮೊತ್ತದ ಮೇಲೆ ಆದಾಯ ಕರ ನೀಡತಕ್ಕದ್ದು. ಈ ನಿಯಮ ಉತ್ತಮ ವೇತನ ಪಡೆಯುವ ಐಟಿ/ಎಮ….ಎನ್‌.ಸಿ. ಉದ್ಯೋಗಿಗಳನ್ನು ಭಾದಿಸಲಿದೆ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.